ಜೀವನಶೈಲಿ ಮತ್ತು ಆಹಾರ ಕ್ರಮದಿಂದಲೂ ರಕ್ತದಲ್ಲಿನ ಸಕ್ಕರೆ ಮಟ್ಟವು ಅಧಿಕವಾಗಬಹುದು. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿ ಇಡಲು ನಾವು ನಿಮಗೆ ಒಂದು ಮನೆಮದ್ದನ್ನು ತಿಳಿಸಿಕೊಡಲಿದ್ದೇವೆ. ವೀಳ್ಯದ ಎಲೆಯನ್ನು ಜಗಿದರೆ ಆಗ ಇದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು.
ದೀರ್ಘಕಾಲಿಕ ಕಾಯಿಲೆಗಳು, ಅಧಿಕ ರಕ್ತದೊತ್ತಡ ಇತ್ಯಾದಿ ಗಳನ್ನು ನಿಭಾಯಿಸಲು ಆಯುರ್ವೇದದಲ್ಲಿ ಇದನ್ನು ಹಲವಾರು ಸಮಯದಿಂದ ಬಳಕೆ ಮಾಡಿಕೊಂಡು ಬರಲಾಗುತ್ತಿದೆ. ರಾತ್ರಿ ಮಲಗುವ ಮೊದಲು ವೀಳ್ಯದೆಲೆ ಜಗಿದರೆ ಆಗ ಇದರಿದ ಇನ್ಸುಲಿನ್ ಸೂಕ್ಷ್ಮತೆಯು ಸುಧಾರಣೆ ಆಗುವುದು ಎಂದು ಅಧ್ಯಯ ನಗಳು ಹೇಳಿವೆ. ಇದರಿಂದ ಮಲಗಿರುವ ಸಮಯದಲ್ಲಿ ಕೂಡ ರಕ್ತದಲ್ಲಿನ ಸಕ್ಕರೆ ಮಟ್ಟ ವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳ ಬಹುದು ಎಂದು ಅಧ್ಯಯನಗಳು ತಿಳಿಸಿವೆ.
ಗ್ಲುಕೋಸ್ ನ್ನು ಶಕ್ತಿಯಾಗಿ ಮಾರ್ಪಾಡು ಮಾಡಲು ದೇಹವು ಬಿಡುಗಡೆ ಮಾಡುವಂತಹ ಪ್ರಮುಖ ಹಾರ್ಮೋನ್ ಇನ್ಸುಲಿನ್. ದೇಹದಲ್ಲಿ ಇನ್ಸುಲಿನ್ ಸರಿಯಾದ ಪ್ರಮಾಣದಲ್ಲಿ ಇರದೇ ಇದ್ದ ಸಂದರ್ಭದಲ್ಲಿ ಜೀವಕೋಶಗಳು ಇನ್ಸುಲಿನ್ ಗೆ ಸರಿಯಾಗಿ ಪ್ರತಿಕ್ರಿಯಿಸದೆ ಇರಬಹುದು ಮತ್ತು ಇದರಿಂದಾಗಿ ರಕ್ತದಲ್ಲಿನ ಸಕ್ಕರೆ ಮಟ್ಟವು ಏರಿಕೆಯಾಗಬಹುದು
ಮೇದೋಜೀರಕ ಗ್ರಂಥಿಗಳು ಇನ್ಸುಲಿನ್ ನ್ನು ಉತ್ಪತ್ತಿ ಮಾಡುವು ದರ ಮೇಲೆ ಜೀವನಶೈಲಿಯಾಗಿರುವ ಆಹಾರ, ವ್ಯಾಯಾಮ ಮತ್ತು ಇತರ ಕೆಲವೊಂದು ಅಂಶಗಳು ಪ್ರಭಾವ ಬೀರುತ್ತದೆ. ಇಂತಹ ಸಂದರ್ಭದಲ್ಲಿ ದೇಹವು ಸರಿಯಾದ ರೀತಿಯಲ್ಲಿ ಇನ್ಸುಲಿನ್ ಉತ್ಪತ್ತಿ ಮಾಡಿ ಗ್ಲುಕೋಸ್ ನ್ನು ಶಕ್ತಿಯಾಗಿ ಪರಿವರ್ತಿ ಸುವುದು ಅಗತ್ಯವಾಗಿರುವುದು ಮತ್ತು ಮಧುಮೇಹದ ಲಕ್ಷಣಗಳು ಇನ್ನಷ್ಟು ಕೆಡುವುದನ್ನು ತಡೆಯಬೇಕು. ದೇಹದಲ್ಲಿ ಇನ್ಸುಲಿನ್ ಸೂಕ್ಷ್ಮತೆ ಸುಧಾರಣೆ ಮಾಡುವಂತಹ ಹಲವಾರು ಪರಿಣಾಮಕಾರಿ ಅಂಶಗಳು ವೀಳ್ಯದೆಲೆಯಲ್ಲಿ ಇದೆ. ವೀಳ್ಯದೆಲೆಯಲ್ಲಿ ಇರುವ ಪಾಲಿಫೆನಾಲ್, ಅಲ್ಕಲಾಯ್ಡ್ ಮತ್ತು ಫ್ಲಾವನಾಯ್ಡ್ ಗಳು ಇವುಗಳಲ್ಲಿ ಪ್ರಮುಖವಾಗಿದೆ. ಟೈಪ್ 2 ಮಧುಮೇಹ ಹೊಂದಿರುವವರಲ್ಲಿ ವೀಳ್ಯದೆಲೆಯು ಇನ್ಸುಲಿನ್ ಸೂಕ್ಷ್ಮತೆ ಹೆಚ್ಚಿಸುವುದು ಎಂದು ಅಧ್ಯಯನಗಳು ತಿಳಿಸಿವೆ.
ಮಲಗುವ ಮೊದಲು ವೀಳ್ಯದೆಲೆಯನ್ನು ಸೇವನೆ ಮಾಡಿದರೆ ಆಗ ಇದು ಮಧುಮೇಹ ನಿಯಂತ್ರಣಕ್ಕೆ ತುಂಬಾ ಪರಿಣಾಮಕಾರಿ ಆಗಿರುವುದು. ಇದರಿಂದ ವೀಳ್ಯದೆಲೆಯಲ್ಲಿ ಇರುವ ಅಂಶಗಳು ಕ್ರಿಯಾಶೀಲವಾಗಿ ರಾತ್ರಿಯಿಡಿ ನಿಧಾನವಾಗಿ ರಕ್ತನಾಳದಲ್ಲಿ ಹೀರಿಕೊಳ್ಳುವಂತೆ ಆಗುವುದು.
ರಾತ್ರಿ ಮಲಗುವ ಮೊದಲು ವೀಳ್ಯದೆಲೆ ಸೇವನೆ ಮಾಡುವುದಿದ್ದರೆ ಆಗ ಈ ಸಲಹೆ ಪಾಲಿಸಿ. ವೀಳ್ಯದೆಲೆಯಲ್ಲಿ ಸರಿಯಾಗಿ ಶುಚಿ ಮಾಡಿಕೊಳ್ಳಿ ಮತ್ತು ನಿಧಾನ ವಾಗಿ ಜಗಿದು ಅದರ ರಸವು ಹೊಟ್ಟೆ ಸೇರುವಂತೆ ಮಾಡಿ. ನೀವು ಸರಿಯಾಗಿ ಜಗಿದು ತಿಂದ ಬಳಿಕ ಅದರ ಎಲೆಯನ್ನು ಬಿಸಾಕ ಬಹುದು.