ಸಶಸ್ತ್ರ ಪಡೆಗಳಿಗೆ ಯುವಜನರನ್ನು ನೇಮಕಾತಿ ಮಾಡಿಕೊಳ್ಳುವ ಹೊಸ ಯೋಜನೆ ಅಗ್ನಿವೀರ್. ಇದರ ಮೂಲಕ ಸೇನೆಗೆ ಆಯ್ಕೆಯಾಗುವವರನ್ನು ‘ಅಗ್ನಿವೀರರು’ ಎಂದು ಕರೆಯಲಾಗುತ್ತದೆ. ಬಿಹಾರ, ಉತ್ತರ ಪ್ರದೇಶ, ಮಧ್ಯಪ್ರದೇಶ, ಹರ್ಯಾಣ, ಜಾರ್ಖಂಡ್, ಪಶ್ಚಿಮ ಬಂಗಾಳ ಸೇರಿದಂತೆ ದೇಶದ ಅನೇಕ ಭಾಗಗಳಲ್ಲಿ ಸಾವಿರಾರು ಆಕಾಂಕ್ಷಿಗಳು ಸೇನೆ ಸೇರಿಕೊಳ್ಳುವ ತುಡಿತ ಹೊಂದಿದ್ದಾರೆ.
ಅಗ್ನಿವೀರ್ ಸೇರಲು ಅರ್ಹತೆಗಳೇನು?
ನೂತನ ಅಗ್ನಿವೀರ್ ಯೋಜನೆ ಪ್ರಕಾರ ಸೇನೆಯ 3 ವಿಭಾಗಗಳಲ್ಲಿ ಆಸಕ್ತ ಯುವಕ–ಯುವತಿಯರು ತರಬೇತಿಯೂ ಸೇರಿದಂತೆ 4 ವರ್ಷದ ಮಟ್ಟಿಗೆ ‘ಅಗ್ನಿವೀರ್’ ಎಂಬ ಹೆಸರಿನ ಯೋಧರಾಗಿ ಕೆಲಸ ಮಾಡಬಹುದಾಗಿದೆ. 4 ವರ್ಷದಲ್ಲಿ ಮೊದಲು 6 ತಿಂಗಳು ಕಠಿಣ ತರಬೇತಿ ಇರುತ್ತದೆ. 10 ನೇ ತರಗತಿ ಹಾಗೂ ಪಿಯುಸಿ ಪಾಸಾದವರು ಅಗ್ನಿವೀರರಾಗಲು ಅರ್ಹರು. ಇದಕ್ಕೆ ದೇಶದಾದ್ಯಂತ ಮೆರಿಟ್ ಅಧಾರದ ಒಂದೇ ಸಾಮಾನ್ಯ ಪ್ರವೇಶ ಪರೀಕ್ಷೆ ಇರಲಿದೆ. 17.5 ವರ್ಷ ಮೇಲ್ಪಟ್ಟ 34 ವರ್ಷ ವಯಸ್ಸಿನ ಒಳಗಿನ ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢವಾಗಿರುವ ಯುವಕ-ಯುವತಿಯರು ಅಗ್ನಿವೀರರಾಗಲು ಅರ್ಜಿ ಸಲ್ಲಿಸಬಹುದು.
ಇದನ್ನು ಓದಿ: ಕೃಷಿ ಇಲಾಖೆಯಲ್ಲಿ ಭರ್ಜರಿ ಆಫರ್: ಖಾಲಿ ಇರುವ 600 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
ಅಗ್ನಿವೀರರಿಗೆ ಸಂಬಳ ಎಷ್ಟು?
ಅಗ್ನಿವೀರರಾದ ಪ್ರತಿಯೊಬ್ಬರಿಗೆ ನಾಲ್ಕು ವರ್ಷದ ಅವಧಿಗೆ ಮಾತ್ರ ವರ್ಷಕ್ಕೆ 4.62 ಲಕ್ಷದಿಂದ 6.92 ಲಕ್ಷದವರೆಗೆ ಸಂಬಳದ ಪ್ಯಾಕೇಜ್ ಇರುತ್ತದೆ. ಅಂದರೆ ತಿಂಗಳಿಗೆ 30 ಸಾವಿರ ರೂಪಾಯಿಗಳಿಂದ 40 ಸಾವಿರವರೆಗೆ ಸಂಬಳ ಸಿಗಲಿದೆ. ಇದರಲ್ಲಿ ಉಚಿತವಾಗಿ ವೈದ್ಯಕೀಯ ವಿಮೆ ದೊರೆಯುತ್ತದೆ. ನಾಲ್ಕು ವರ್ಷ ಸೇವೆ ಸಲ್ಲಿಸಿ ಬಿಡುಗಡೆ ಹೊಂದುವ ಅಗ್ನಿವೀರರಿಗೆ ಸುಮಾರು 11.70 ಲಕ್ಷ ಸೇವಾ ನಿಧಿಯಾಗಿ ಕೊಡಲಾಗುತ್ತದೆ. ಇದಕ್ಕೆ ತೆರಿಗೆ ಇರುವುದಿಲ್ಲ. ಗಮನಿಸಬೇಕಾದ ಅಂಶವೆಂದರೆ ಅಗ್ನಿವೀರರು ನಿವೃತ್ತರಾದ ಮೇಲೆ ಅವರಿಗೆ ಪಿಂಚಣಿ ಇರುವುದಿಲ್ಲ. ಕಡಿಮೆ ತೋರಿಸು
ಅಗ್ನಿವೀರರಿಗೆ ಏನೆಲ್ಲಾ ಸೌಲಭ್ಯಗಳಿವೆ?
ರಕ್ಷಣಾ ಸಚಿವಾಲಯ ಹೊರಡಿಸಿದ ಅಧಿಕೃತ ಹೇಳಿಕೆಯಲ್ಲಿ, 4 ವರ್ಷಗಳ ಕೆಲಸದ ಅವಧಿ ಪೂರ್ಣಗೊಂಡ ನಂತರ, ‘ಅಗ್ನಿವೀರ್’ ಗಳಿಗೆ ಒಂದು ದೊಡ್ಡ ಮೊತ್ತದ ‘ನಿವೃತ್ತಿ’ ಪ್ಯಾಕೇಜ್ ಅನ್ನು ನೀಡುತ್ತಿದ್ದು, ಇದು ಆದಾಯ ತೆರಿಗೆಯಿಂದ ಮುಕ್ತವಾಗಿರುತ್ತದೆ. ರಕ್ಷಣಾ ಸಚಿವಾಲಯದ ಪ್ರಕಾರ, ವಾರ್ಷಿಕ ಪ್ಯಾಕೇಜ್ ನೊಂದಿಗೆ ಕೆಲವು ಭತ್ಯೆಗಳು ಸಹ ಲಭ್ಯವಿರುತ್ತವೆ. ಇದರಲ್ಲಿ ಪಡಿತರ, ಉಡುಗೆ, ಪ್ರಯಾಣ ಭತ್ಯೆ ಮತ್ತು ರಿಸ್ಕ್ ಹಾಗೂ ಹಾರ್ಡ್ಶಿಪ್ ಕೂಡಾ ಇರುತ್ತದೆ. ನಾಲ್ಕು ವರ್ಷಗಳಲ್ಲಿ ಅಂಗವಿಕಲರಾಗಿದ್ದರೆ, ಸೇವೆಯೇತರ ಅವಧಿಗೆ ಪೂರ್ಣ ವೇತನ & ಬಡ್ಡಿಯನ್ನು ಸಹ ನೀಡಲಾಗುತ್ತದೆ.
ಇದನ್ನು ಓದಿ: ಕರ್ನಾಟಕ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ; ಯಾವ ಡ್ಯಾಮ್‌ನಲ್ಲಿ ಎಷ್ಟು ನೀರಿದೆ?
ಅಗ್ನಿಪಥ್ ಯೋಜನೆಗೆ ವಿರೋಧ ಏಕೆ?
ಅಗ್ನಿಪಥ್ ಯೋಜನೆಯಡಿ ಆಯ್ಕೆಯಾದವರಿಗೆ ಉದ್ಯೋಗದ ಭದ್ರತೆ ಸಿಗುವುದಿಲ್ಲ. ನಾಲ್ಕು ವರ್ಷಗಳ ಬಳಿಕ ಜೀವನ ಕಳೆಯುವುದು ಹೇಗೆ? ಓದುವ ವಯಸ್ಸಿನಲ್ಲಿ ಕೆಲಸ ಸೇರಿಕೊಂಡು ನಾಲ್ಕು ವರ್ಷಗಳ ನಂತರ ಏನು ಮಾಡುವುದು? ಹೀಗಾಗಿ ನಮ್ಮನ್ನು ಪೂರ್ಣಾವಧಿ ನೌಕರಿಗೆ ಪರಿಗಣಿಸಿ ಎನ್ನುವುದು ಆಕಾಂಕ್ಷಿಗಳ ಬೇಡಿಕೆಯಾಗಿದ್ದು, ಶೀಘ್ರ ಬೇಡಿಕೆ ಈಡೇರಿಕೆಗೆ ದೇಶದಾದ್ಯಂತ ಹೋರಾಟಗಳು ನಡೆಯುತ್ತಿವೆ.
ಇದನ್ನು ಓದಿ: ಸಿಹಿ ಸುದ್ದಿ ಕೊಟ್ಟ ಹರ್ಷಿಕಾ ಪೂಣಚ್ಚ ಭುವನ್ ದಂಪತಿ; ಕೊಡವ ಉಡುಗೆಯಲ್ಲೇ ವಿಭಿನ್ನ ಫೋಟೋಶೂಟ್