ಆಗಸ್ಟ್​ 1ರಿಂದ ಬೆಂಗಳೂರು-ಅಬುಧಾಬಿಗೆ ಇಂಡಿಗೋ ನೇರ ವಿಮಾನ ಸೇವೆ ಆರಂಭ

ಬೆಂಗಳೂರು : ಇದೀಗ ಪ್ರಯಾಣಿಕರಿಗೆ ಇಂಡಿಗೋ ಸಿಹಿ ಸುದ್ದಿ ನೀಡಿದೆ.ಬೆಂಗಳೂರು ಹಾಗೂ ಅಬುಧಾಬಿ ಮಧ್ಯೆ ಆಗಸ್ಟ್ 1ರಿಂದ ನೇರ ವಿಮಾನ ಸೇವೆ ಆರಂಭಿಸುವುದಾಗಿ ಇಂಡಿಗೋ ಏರ್​ಲೈನ್ಸ್ ತಿಳಿಸಿದೆ. ವಾರದಲ್ಲಿ ಆರು ಬಾರಿ ಬೆಂಗಳೂರು ಅಬುಧಾಬಿ…

ಬೆಂಗಳೂರು : ಇದೀಗ ಪ್ರಯಾಣಿಕರಿಗೆ ಇಂಡಿಗೋ ಸಿಹಿ ಸುದ್ದಿ ನೀಡಿದೆ.ಬೆಂಗಳೂರು ಹಾಗೂ ಅಬುಧಾಬಿ ಮಧ್ಯೆ ಆಗಸ್ಟ್ 1ರಿಂದ ನೇರ ವಿಮಾನ ಸೇವೆ ಆರಂಭಿಸುವುದಾಗಿ ಇಂಡಿಗೋ ಏರ್​ಲೈನ್ಸ್ ತಿಳಿಸಿದೆ.

ವಾರದಲ್ಲಿ ಆರು ಬಾರಿ ಬೆಂಗಳೂರು ಅಬುಧಾಬಿ ವಿಮಾನಗಳು ಕಾರ್ಯನಿರ್ವಹಿಸಲಿವೆ. ಇದರೊಂದಿಗೆ ಭಾರತದ ವಿವಿಧ ನಗರಗಳಿಂದ ಅಬುಧಾಬಿಗೆ ತೆರಳುವ ಇಂಡಿಗೋ ವಿಮಾನಗಳ ಸಂಖ್ಯೆ 75 ಕ್ಕೆ ತಲುಪಿದೆ. ಹೊಸ ವಿಮಾನ ಸೇವೆಯು ಯುನೈಟೆಡ್ ಅರಬ್ ಎಮಿರೇಟ್ಸ್‌ ರಾಜಧಾನಿಗೆ ಸಂಪರ್ಕವನ್ನು ಮತ್ತಷ್ಟು ಬಲಪಡಿಸಲಿದೆ ಎಂದು ಇಂಡಿಗೋ ತಿಳಿಸಿದೆ.

ಬೆಂಗಳೂರು ಅಬುಧಾಬಿ ಇಂಡಿಗೋ ವಿಮಾನ ವೇಳಾಪಟ್ಟಿ ಇಂಡಿಗೋ ವಿಮಾನ ಸಂಖ್ಯೆ 6E 1438 ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಂಗಳವಾರ ಹೊರತುಪಡಿಸಿ ಎಲ್ಲಾ ದಿನಗಳಲ್ಲಿ ರಾತ್ರಿ 9.25 ಕ್ಕೆ ಹೊರಟು ರಾತ್ರಿ 11.30 ಕ್ಕೆ ಅಬುಧಾಬಿ ತಲುಪಲಿದೆ. ಅಬುಧಾಬಿಯಿಂದ, ವಿಮಾನ ಸಂಖ್ಯೆ 6E 1439 ಬುಧವಾರ ಹೊರತುಪಡಿಸಿ ಎಲ್ಲಾ ದಿನಗಳಲ್ಲಿ (ಆಗಸ್ಟ್ 2 ರಿಂದ) 12.30 ಕ್ಕೆ ಹೊರಟು ಬೆಳಗ್ಗೆ 5.45ಕ್ಕೆ ವಿಮಾನ ಬೆಂಗಳೂರು ತಲುಪಲಿದೆ. Ad

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.