ಮಳೆಗಾಲ ಆರಂಭಗೊಂಡಿದೆ. ಮಳೆಗಾಲದಲ್ಲಿ ಆರೋಗ್ಯದ ಕಡೆಗೆ ತುಸು ಹೆಚ್ಚು ಗಮನ ಕೊಡಬೇಕಾಗುತ್ತದೆ. ಅದರಲ್ಲೂ ಮಕ್ಕಳು ಹಾಗೂ ವೃದ್ಧರ ಕುರಿತಂತೆ ಹೆಚ್ಚು ಗಮನ ನೀಡಬೇಕಾಗುತ್ತದೆ. ಮಳೆಗಾಲದಲ್ಲಿ ಕಾಯಿಲೆಗಳ ಉಂಟುಮಾಡುವ ಹತ್ತಾರು ಅಂಶಗಳು ನಮ್ಮ ಮನೆ ಹೊಸ್ತಿಲಿಗೆ ಬರುತ್ತವೆ. ಮಳೆಗಾಲ ಬಂತೆಂದರೆ ಆಹಾರಗಳು ಸಹ ಕೆಲವು ಅನಾರೋಗ್ಯಕ್ಕೆ ಕಾರಣವಾಗಬಹುದು.
ಹೀಗಾಗಿ ಮಳೆಗಾಲದಲ್ಲಿ ಕೆಲವೊಂದು ಆಹಾರಗಳನ್ನು ಸೇವಿಸದಿರುವುದು ಉತ್ತಮ. ಆದ್ರೆ ಮಳೆಗಾಲದಲ್ಲಿ ಅತ್ಯುತ್ತಮ ಫುಡ್ ಸೇವಿಸಬೇಕು ಎನ್ನುವುದು ಹಲವರ ಆಸೆ. ಏಕೆಂದರೆ ಮಳೆಗಾಲದಲ್ಲಿ ಬಿಸಿ ಬಿಸಿಯ ಫುಡ್ ಸೇವಿಸಬೇಕು. ನಾಲಿಗೆ ರುಚಿಗೆ ಫಾಸ್ಟ್ ತಿನ್ನಬೇಕು ಎಂಬ ಬಯಕೆ ಇರಲಿದೆ. ಮಳೆಯಲ್ಲಿ ಬಿಸಿ ಬಿಸಿ ಫುಡ್ ಸೇವಿಸೋದು ಅಂದ್ರೆ ಎಲ್ಲರಿಗೂ ಇಷ್ಟವೆ.
ಬೀದಿ ಬದಿಯ ಫಾಸ್ಟ್‌ಫುಡ್
ಸಮುದ್ರದ ಆಹಾರ
ಕತ್ತರಿಸಿ ಇಟ್ಟ ಹಣ್ಣುಗಳು
ಕೆಲ ಡೈರಿ ಉತ್ಪನ್ನಗಳು




