ವೈದ್ಯರು ಮೂಳೆ ಮುರಿತ ಶಸ್ತ್ರಚಿಕಿತ್ಸೆಗೆ ಔಷಧಿಯಾಗಿ ಮೆಹಂದಿ ಕೋನ್ ಬಳಕೆ

ಕಾಲು ನೋವಿನ ‌ಸಮಸ್ಯೆಯಿಂದ ಇಲ್ಲಿನ ಜಯಚಾಮರಾಜೇಂದ್ರ ಜಿಲ್ಲಾ ಆಸ್ಪತ್ರೆಗೆ ಮಂಗಳವಾರ ಬಂದಿದ್ದ ವೃದ್ಧ ಈರಯ್ಯ ಅವರಿಗೆ, ಬ್ಯಾಂಡೇಜ್‌ ಜೊತೆಗೆ ಮೆಹಂದಿ ಕೋನ್‌ ತರಲು ಸೂಚಿಸಿದ್ದು ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಆದರೆ, ‌ಕಾಲಿನ…

ಕಾಲು ನೋವಿನ ‌ಸಮಸ್ಯೆಯಿಂದ ಇಲ್ಲಿನ ಜಯಚಾಮರಾಜೇಂದ್ರ ಜಿಲ್ಲಾ ಆಸ್ಪತ್ರೆಗೆ ಮಂಗಳವಾರ ಬಂದಿದ್ದ ವೃದ್ಧ ಈರಯ್ಯ ಅವರಿಗೆ, ಬ್ಯಾಂಡೇಜ್‌ ಜೊತೆಗೆ ಮೆಹಂದಿ ಕೋನ್‌ ತರಲು ಸೂಚಿಸಿದ್ದು ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು.

ಆದರೆ, ‌ಕಾಲಿನ ಉಬ್ಬಿದ ರಕ್ತನಾಳ ಶಸ್ತ್ರಚಿಕಿತ್ಸೆ ನಡೆಸಬೇಕಿದ್ದು, ಬಾಧಿತ ಭಾಗವನ್ನು ಗುರುತು ಮಾಡಲು ಮೆಹಂದಿ ಕೋನ್‌ ತರಿಸಿದ್ದಾಗಿ ವೈದ್ಯರು ಸ್ಪಷ್ಟಪಡಿಸಿದ ಬಳಿಕ ಕುತೂಹಲಕ್ಕೆ ತೆರೆ ಬಿತ್ತು. ಈರಯ್ಯ ಅವರಿಗೆ ಔಷಧಿ ಚೀಟಿ ನೀಡಿದ್ದ ದಾದಿಯೊಬ್ಬರು, ಎರಡು ಕ್ರೇಪ್‌ ಬ್ಯಾಂಡೇಜ್‌ ಹಾಗೂ ಒಂದು ಮೆಹಂದಿ ಕೋನ್‌ ತರಬೇಕೆಂದು ಬರೆದಿದ್ದರು. ಔಷಧಿ ಅಂಗಡಿಯಲ್ಲಿ ಚೀಟಿಯನ್ನು ತೋರಿಸಿದಾಗ, ಮೊದಲನೆಯದ್ದು ಮೆಹಂದಿ ಕೋನ್‌. ಔಷಧಿಯಲ್ಲ. ಏಕೆ ಬರೆದುಕೊಟ್ಟಿದ್ದಾರೆ ಎಂದು ಅಂಗಡಿಯವರು ಪ್ರಶ್ನಿಸಿದ್ದರು. ಈರಯ್ಯ ಭೇಟಿ ನೀಡಿದ ಎಲ್ಲ ಔಷಧ ಅಂಗಡಿಗಳಲ್ಲೂ ಇದೇ ಪ್ರಶ್ನೆ ಎದುರಾಗಿತ್ತು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.