ನಂದಿನಿ ಹಾಲು ದರ ಏರಿಕೆ ಶಾಕ್‌; ಅರ್ಧ ಲೀಟರ್‌ಗೂ 2ರೂ. ಹೆಚ್ಚಳ, ಒಂದು ಲೀಟರ್‌ಗೂ 2ರೂ. ಹೆಚ್ಚಳ!

ಬೆಂಗಳೂರು: ಕರ್ನಾಟಕ ಹಾಲು ಒಕ್ಕೂಟದ (KMF) ನಂದಿನಿ ಹಾಲಿನ (Nandini milk) ದರಗಳನ್ನು (milk price hike) ಏರಿಸಲಾಗಿದೆ. ಲೀಟರ್‌ಗೆ 2 ರೂ. ಏರಿಕೆ ಮಾಡಲಾಗಿದ್ದು, ಒಂದು ಲೀಟರ್‌ ಹಾಲಿನ ದರ ನಾಳೆಯಿಂದ 44…

ಬೆಂಗಳೂರು: ಕರ್ನಾಟಕ ಹಾಲು ಒಕ್ಕೂಟದ (KMF) ನಂದಿನಿ ಹಾಲಿನ (Nandini milk) ದರಗಳನ್ನು (milk price hike) ಏರಿಸಲಾಗಿದೆ. ಲೀಟರ್‌ಗೆ 2 ರೂ. ಏರಿಕೆ ಮಾಡಲಾಗಿದ್ದು, ಒಂದು ಲೀಟರ್‌ ಹಾಲಿನ ದರ ನಾಳೆಯಿಂದ 44 ರೂ. ಆಗುತ್ತಿದೆ. ಈ ಮೂಲಕ ತೈಲ ಬೆಲೆ ಏರಿಕೆ (petrol price hike) ಬೆನ್ನಲ್ಲೇ ಜನ ಸಾಮಾನ್ಯರಿಗೆ ಮತ್ತೊಂದು ಶಾಕ್ ನೀಡಿದೆ ರಾಜ್ಯ ಸರಕಾರ.

ಇಷ್ಟು ದಿನ 1000 ml ಹಾಲು 42 ರೂ.ಗೆ ಮಾರಾಟವಾಗುತ್ತಿತ್ತು. ಆದರೆ ನಾಳೆಯಿಂದ 50 ml ಹಾಲನ್ನು ಹೆಚ್ಚುವರಿಯಾಗಿ ಸೇರಿಸಿ, ಅದರ ದರ 2 ರೂ.ಗಳನ್ನು ಸೇರಿಸಿ ನಾಳೆಯಿಂದ ಮಾರಾಟ ಮಾಡಲಾಗುತ್ತದೆ. ಒಟ್ಟು 1050 ml ಹಾಲಿನ ದರ 44 ರೂ. ಆಗುತ್ತಿದೆ ಎಂದು KMF ಅಧ್ಯಕ್ಷ ಭೀಮಾ ನಾಯ್ಕ್ ತಿಳಿಸಿದ್ದಾರೆ.

ಆದರೆ ಅರ್ಧ ಲೀಟರ್ ಪ್ಯಾಕೇಟ್ ಹಾಲಿಗೂ 2 ರೂಪಾಯಿ ಏರಿಕೆ ಮಾಡಲಾಗುತ್ತಿದೆ. ಯಾಕೆಂದರೆ ಅರ್ಧ ಲೀಟರ್‌ ಹಾಲಿನ ಪ್ಯಾಕೆಟ್‌ಗೂ 50 ml ಹಾಲನ್ನು ಹೆಚ್ಚುವರಿಯಾಗಿ ಸೇರಿಸಲಾಗುತ್ತಿದೆ. ಪ್ರತಿಯೊಂದು ಪ್ಯಾಕೆಟ್‌ಗೂ 50 ML ಹಾಲು ಹೆಚ್ಚುವರಿಯಾಗಿ ಸೇರಿಸುವುದರಿಂದ 2 ರೂಪಾಯಿ ಏರಿಕೆ ಮಾಡಲಾಗುತ್ತಿದೆ. ಈ ಲೆಕ್ಕಾಚಾರದಲ್ಲಿ ಅರ್ಧ ಲೀಟರ್‌ ಹಾಲಿನ ಎರಡು ಪ್ಯಾಕೆಟ್‌ಗಳನ್ನು ತೆಗೆದುಕೊಳ್ಳುವುದಕ್ಕಿಂತಲೂ, ಒಂದು ಲೀಟರ್‌ ಹಾಲಿನ ಪ್ಯಾಕೆಟ್‌ ತೆಗೆದುಕೊಳ್ಳುವುದು ಅಗ್ಗವಾಗಲಿದೆ.

Vijayaprabha Mobile App free

“ಕೆಎಂಎಫ್‌ ಇಡೀ ರಾಷ್ಟ್ರದಲ್ಲಿ ಅತಿ ದೊಡ್ಡ ಎರಡನೇ ದೊಡ್ಡ ಹಾಲಿನ ಮಂಡಲಿ. 98 ಲಕ್ಷದ 17 ಸಾವಿರ ಲೀಟರ್ ಹಾಲು ನಮ್ಮಲ್ಲಿ ಶೇಖರಣೆ ಆಗುತ್ತಿದೆ. ಒಂದು ಕೋಟಿ ಲೀಟರ್ ಹಾಲಿನ ಶೇಖರಣೆ ಮಾಡಲು ಸಿದ್ಧರಾಗಿದ್ದೇವೆ. 27 ಲಕ್ಷ ಹಾಲು ಉತ್ಪಾದಕ ರೈತರಿಂದ ನಮಗಿದು ಸಾಧ್ಯವಾಗಿದೆ. 30 ಲಕ್ಷ ಲೀಟರ್ ಹಾಲು, ಹಾಲಿನ ಪೌಡರ್‌ಗೆ ಮೀಸಲಾಗಿದೆ” ಎಂದು ಭೀಮಾ ನಾಯ್ಕ್‌ ಮಾಹಿತಿ ನೀಡಿದ್ದಾರೆ.

ಹೊಸ ದರಗಳು ಹೀಗಿವೆ:

  • ನೀಲಿ ಪ್ಯಾಕೆಟ್ ಹಾಲು 42 ರಿಂದ 44 ರೂ
  • ನೀಲಿ ಪ್ಯಾಕೆಟ್ (ಟೋನ್ಡ್ ಹಾಲು) 43 ರಿಂದ 45ರೂ
  • ಆರೆಂಜ್ ಪ್ಯಾಕೆಟ್ ಹಾಲು 46ರಿಂದ 48 ರೂ
  • ಆರೆಂಜ್ ಸ್ಪೆಷಲ್ ಹಾಲು 48 ರಿಂದ 50 ರೂ
  • ಶುಭಂ ಹಾಲು 48ರಿಂದ 50 ರೂ
  • ಸಮೃದ್ದಿ ಹಾಲು 51ರಿಂದ 53ರೂ
  • ಶುಭಂ (ಟೋನ್ಡ್ ಹಾಲು) 49ರಿಂದ 51ರೂ
  • ಸಂತೃಪ್ತಿ ಹಾಲು 55 ರಿಂದ 57 ರೂ
  • ಶುಭಂ ಗೋಲ್ಡ್ ಹಾಲು 49ರಿಂದ 51ರೂ
  • ಶುಭಂ ಡಬಲ್ ಟೋನ್ಡ್ ಹಾಲು 41 ರಿಂದ 43 ರೂ ಗೆ ಏರಿಕೆ
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.