ಈ ಜಿಲ್ಲೆಯ ರೈತರಿಗೆ 85.76 ಕೋಟಿ ರೂ. ಬೆಳೆ ವಿಮೆ ಬಿಡುಗಡೆ

ರಾಜ್ಯದಲ್ಲಿ ಕಳೆದ ವರ್ಷ ಮಳೆ ಕೈ ಕೊಟ್ಟ ಕಾರಣ ಎಲ್ಲೆಡೆ ಬರ ಆವರಿಸಿತ್ತು. ಈ ಕಾರಣದಿಂದ ರೈತರು ಬೆಳೆದಿರುವ ಬೆಳೆ ನಾಶವಾಗಿತ್ತು. ಇದರಿಂದಾಗಿ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬೆಳೆ ವಿಮೆ ಅರ್ಹ ರೈತರ ಖಾತೆಗೆ…

ರಾಜ್ಯದಲ್ಲಿ ಕಳೆದ ವರ್ಷ ಮಳೆ ಕೈ ಕೊಟ್ಟ ಕಾರಣ ಎಲ್ಲೆಡೆ ಬರ ಆವರಿಸಿತ್ತು. ಈ ಕಾರಣದಿಂದ ರೈತರು ಬೆಳೆದಿರುವ ಬೆಳೆ ನಾಶವಾಗಿತ್ತು. ಇದರಿಂದಾಗಿ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬೆಳೆ ವಿಮೆ ಅರ್ಹ ರೈತರ ಖಾತೆಗೆ ಜಮಾ ಮಾಡಲಾಗುತ್ತಿದ್ದು, ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಲ್ಲಿ, 2023-24ನೇ ಸಾಲಿನ ಮುಂಗಾರಿನ ಬೆಳೆಗಳಿಗೆ ರೈತರು ಪಾವತಿಸಿದಂತ ಬೆಳೆವಿಮೆ ಪ್ರೀಮಿಯಂ ಹಣಕ್ಕೆ ಸರ್ಕಾರ ಕಡೆಯಿಂದ ಸುಮಾರು 19.14 ಲಕ್ಷ ರೈತರಿಗೆ ಒಟ್ಟು 1,791 ಕೋಟಿ ರೂ. ಸರ್ಕಾರ ಕಡೆಯಿಂದ ಬಿಡುಗಡೆ ಮಾಡಲಾಗಿದೆ. ಇನ್ನುಳಿದ ಬಾಕಿ ಹಣವನ್ನು ರೈತರ ಬ್ಯಾಂಕ್ ಖಾತೆಗೆ ಬಿಡುಗಡೆ ಮಾಡಲಾಗುತ್ತದೆ ಎಂದು ಕೃಷಿ ಇಲಾಖೆ ಸಚಿವರು ತಿಳಿಸಿದ್ದಾರೆ.

ಎಷ್ಟು ಬೆಳೆ ವಿಮೆ ಜಮಾ:
ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಲ್ಲಿ ಅರ್ಹ ರೈತರಿಗೆ ಪ್ರತಿ ಎಕರೆಗೆ 29,000 ರಿಂದ 86,000 ವರೆಗೆ ಬೆಳೆ ವಿಮೆ ಮೊತ್ತವನ್ನು ನಿಗದಿ ಮಾಡಲಾಗಿದೆ.

Vijayaprabha Mobile App free

ಈ ಜಿಲ್ಲೆಯ ರೈತರಿಗೆ 85 ಕೋಟಿ ರೂ. ಬಿಡುಗಡೆ:
ಹೌದು, ಕಳೆದ ವರ್ಷ ಮಳೆ ಕೈ ಕೊಟ್ಟ ಕಾರಣ ಬರ ಆವರಿಸಿ ರೈತರು ಬೆಳೆದ ಬೆಳೆಗಳು ನಾಶವಾಗಿತ್ತು. ಈ ಕಾರಣದಿಂದಾಗಿ ವಿಜಯಪುರ ಜಿಲ್ಲೆಯ ಅರ್ಹ ರೈತರಿಗೆ 85.76 ಕೋಟಿ ರೂಪಾಯಿಯನ್ನು ಬಿಡುಗಡೆ ಮಾಡಲಾಗಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.