ಮೊಟ್ಟೆಗಳು ಪ್ರೋಟೀನ್, ವಿಟಮಿನ್ ಮತ್ತು ಖನಿಜಾಂಶಗಳನ್ನು ಹೊಂದಿದ್ದು, ಬಿಳಿ ಮತ್ತು ಹಳದಿ ಭಾಗ ಎರಡನ್ನೂ ಸೇವಿಸಬಹುದೇ?

ಸಾಮಾನ್ಯವಾಗಿ, ಮೊಟ್ಟೆಗಳನ್ನು ಕುದಿಸಿಕೊಂಡು ಅಥವಾ ಆಮ್ಲೆಟ್ ಮಾಡಿಕೊಂಡು ಸಹ ಸೇವಿಸಬಹುದು. ಮೊಟ್ಟೆಗಳು ಪ್ರೋಟೀನ್, ವಿಟಮಿನ್ ಮತ್ತು ಖನಿಜಾಂಶಗಳನ್ನು ಹೊಂದಿದ್ದು, ನಿಮ್ಮ ಡಯಟ್ಗೆ ಇದು ಆರೋಗ್ಯಕರವಾದ ಸೇರ್ಪಡೆಯಾಗಿದೆ ಅಂತ ಹೇಳಲಾಗುತ್ತದೆ. ನೀವು ಈ ಇದನ್ನು ಹೇಗೆ…

ಸಾಮಾನ್ಯವಾಗಿ, ಮೊಟ್ಟೆಗಳನ್ನು ಕುದಿಸಿಕೊಂಡು ಅಥವಾ ಆಮ್ಲೆಟ್ ಮಾಡಿಕೊಂಡು ಸಹ ಸೇವಿಸಬಹುದು. ಮೊಟ್ಟೆಗಳು ಪ್ರೋಟೀನ್, ವಿಟಮಿನ್ ಮತ್ತು ಖನಿಜಾಂಶಗಳನ್ನು ಹೊಂದಿದ್ದು, ನಿಮ್ಮ ಡಯಟ್ಗೆ ಇದು ಆರೋಗ್ಯಕರವಾದ ಸೇರ್ಪಡೆಯಾಗಿದೆ ಅಂತ ಹೇಳಲಾಗುತ್ತದೆ. ನೀವು ಈ ಇದನ್ನು ಹೇಗೆ ಸೇವಿಸಿದರೂ ಸಹ ಇದರೊಳಗಿರುವ ಪೌಷ್ಟಿಕಾಂಶಗಳು ನಮ್ಮ ದೇಹಕ್ಕೆ ಸಿಕ್ಕೆ ಸಿಗುತ್ತವೆ.

ಆದ್ದರಿಂದಲೇ ಇದನ್ನು ವಿಶ್ವದ ಪೌಷ್ಟಿಕಾಂಶದ ಆಹಾರಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಅನೇಕ ಮಂದಿ ಹಳದಿ ಲೋಳೆಯನ್ನು ಹೊರತುಪಡಿಸಿ ಮೊಟ್ಟೆಯ ಬಿಳಿ ಭಾಗವನ್ನು ಮಾತ್ರ ತಿನ್ನುತ್ತಾರೆ. ಏಕೆಂದರೆ ಮೊಟ್ಟೆಗಳನ್ನು ತಿನ್ನುವುದರಿಂದ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ. ಇದು ಅಧಿಕ ರಕ್ತದೊತ್ತಡ ಮತ್ತು ಪಾರ್ಶ್ವವಾಯು ಅಪಾಯವನ್ನು ಹೆಚ್ಚಿಸುತ್ತದೆ. ಈ ಕಲ್ಪನೆಯು ದೀರ್ಘಕಾಲದವರೆಗೆ ನಿಜವಲ್ಲ. ಮೊಟ್ಟೆಗಳನ್ನು ತಿನ್ನುವುದರಿಂದ ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟವು ಹೆಚ್ಚಾಗುವುದಿಲ್ಲ. ಆರೋಗ್ಯವಂತ ವ್ಯಕ್ತಿಯು ದಿನಕ್ಕೆ ಸರಾಸರಿ 300 ಮಿಗ್ರಾಂ ಕೊಲೆಸ್ಟ್ರಾಲ್ ಅನ್ನು ಸೇವಿಸಬಹುದು. ಇನ್ನೊಂದು ಮೊಟ್ಟೆಯಲ್ಲಿ ಕೇವಲ 200 ಮಿಗ್ರಾಂ ಕೊಲೆಸ್ಟ್ರಾಲ್ ಇರುತ್ತದೆ.

ಆದ್ದರಿಂದ ಅಮೇರಿಕನ್ ಹಾರ್ಟ್ ಅಸೋಸಿಯೇಷನ್ ಸಂಕಲಿಸಿದ ಅವರ ಆಹಾರದ ಮಾರ್ಗಸೂಚಿಗಳಲ್ಲಿ ಮೊಟ್ಟೆಯ ಸೇವನೆಯು ಅಪಾಯವಲ್ಲ. ಆರೋಗ್ಯಕ್ಕೆ ಒಳ್ಳೆಯದು. ಮೊಟ್ಟೆಯನ್ನು ಪ್ರತಿ ದಿನ ತಿನ್ನುವುದರಿಂದ ತುಂಬಾನೇ ಮುಖ್ಯವಾದ ಪ್ರಯೋಜನ ಎಂದರೆ ಇದರಲ್ಲಿರುವ ಪ್ರೋಟೀನ್ ಅಂಶ ಮೂಳೆಗಳ ಆರೋಗ್ಯವನ್ನು ಸುಧಾರಿಸುತ್ತದೆ ಅಂತ. ಮೊಟ್ಟೆಯಲ್ಲಿರುವ ಪ್ರೋಟೀನ್ ಅಂಶವು ಎಲ್ಲಾ 9 ಅಮೈನೋ ಆಸಿಡ್ಗಳನ್ನು ಹೊಂದಿದೆ, ಇದು ಜಿಮ್ಗೆ ಹೋಗಿ ತಾಲೀಮು ಮಾಡುವವರಿಗೆ ಸ್ನಾಯುಗಳನ್ನು ಬಲಗೊಳಿಸಲು ಮತ್ತು ಅದರ ಆರೋಗ್ಯವನ್ನು ವೃದ್ಧಿಸಲು ತುಂಬಾನೇ ಸಹಾಯ ಮಾಡುತ್ತದೆ. ಎಲ್ಲಾ ವಯೋಮಾನದವರೂ ಸಹ ಮೊಟ್ಟೆ ತಿನ್ನುವುದರಿಂದ ಅನೇಕ ಆರೋಗ್ಯಕರ ಪ್ರಯೋಜನಗಳನ್ನು ಪಡೆಯಬಹುದು. ಮೆದುಳಿನ ಆರೋಗ್ಯ: ಲುಟೀನ್, ಜಿಯಾಕ್ಸಾಂತಿನ್ ಎಂಬ ಆಂಟಿಆಕ್ಸಿಡೆಂಟ್ಗಳನ್ನು ಹೊಂದಿರುತ್ತದೆ ಈ ಮೊಟ್ಟೆಗಳು. ಇದು ಅರಿವಿನ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ. ಮೊಟ್ಟೆಯಲ್ಲಿರುವ ಇನ್ನೊಂದು ಅಂಶವಾದ ಚೋಲೈನ್ ಮಿದುಳಿನ ಆರೋಗ್ಯವನ್ನು ವೃದ್ಧಿಸುತ್ತದೆ. ಅಷ್ಟೇ ಅಲ್ಲದೆ ಪ್ರತಿ ದಿನ ಮೊಟ್ಟೆ ತಿನ್ನುವುದು ನಮ್ಮ ಮನಸ್ಥಿತಿಯನ್ನು ಸಹ ಚೆನ್ನಾಗಿರುಸುತ್ತದೆ ಅಂತ ಹೇಳಲಾಗುತ್ತದೆ.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.