Surya Grahan : 54 ವರ್ಷಗಳ ನಂತರ ಇಂದೇ ವರ್ಷದ ಮೊದಲ ಸೂರ್ಯಗ್ರಹಣ; ಯಾವಾಗ ಪ್ರಾರಂಭ? ಭಾರತದಲ್ಲಿ ಗೋಚರಿಸುತ್ತಾ?

Surya Grahan: ಇಂದು ವರ್ಷದ ಮೊದಲ ಸೂರ್ಯಗ್ರಹಣ ಇಂದು (ಏಪ್ರಿಲ್ 8) ರಂದು ಸಂಭವಿಸಲಿದೆ. ಹೌದು, ಯುಗಾದಿ ಹಬ್ಬಕ್ಕೂ ಮೊದಲೇ ಸೋಮಾವತಿ ಅಮವಾಸ್ಯೆ ದಿನವಾದ ಇಂದು 54 ವರ್ಷಗಳ ನಂತರ ವರ್ಷದ ಮೊದಲ ಸೂರ್ಯಗ್ರಹಣ…

Surya Grahan

Surya Grahan: ಇಂದು ವರ್ಷದ ಮೊದಲ ಸೂರ್ಯಗ್ರಹಣ ಇಂದು (ಏಪ್ರಿಲ್ 8) ರಂದು ಸಂಭವಿಸಲಿದೆ. ಹೌದು, ಯುಗಾದಿ ಹಬ್ಬಕ್ಕೂ ಮೊದಲೇ ಸೋಮಾವತಿ ಅಮವಾಸ್ಯೆ ದಿನವಾದ ಇಂದು 54 ವರ್ಷಗಳ ನಂತರ ವರ್ಷದ ಮೊದಲ ಸೂರ್ಯಗ್ರಹಣ ಸಂಭವಿಸಲಿದೆ. ಕೊನೆಯ ಬಾರಿಗೆ ಇಂತಹ ಸೂರ್ಯಗ್ರಹಣ ಸಂಭವಿಸಿದ್ದು 1970ರಲ್ಲಿ.

ಇದನ್ನು ಓದಿ: ಯುಗಾದಿ ಅಮಾವಾಸ್ಯೆ ದಿನವೇ ಸೂರ್ಯಗ್ರಹಣ; ಈ ರಾಶಿಗಳ ಮೇಲೆ ಗ್ರಹಣದ ಪ್ರಭಾವ

Surya Grahan: ಯಾವಾಗ ಪ್ರಾರಂಭ?

Surya Grahan
Surya Grahan 2024 date and time

ಈ ಗ್ರಹಣವು ಭಾರತೀಯ ಕಾಲಮಾನದ ಪ್ರಕಾರ ರಾತ್ರಿ 09:12 ಕ್ಕೆ ಪ್ರಾರಂಭವಾಗಿ ಮಧ್ಯರಾತ್ರಿ 02:22 ರವರೆಗೆ ಇರುತ್ತದೆ. ಇದು ಸುಮಾರು 4 ಗಂಟೆ 25 ನಿಮಿಷಗಳ ಕಾಲ ವರ್ಷದ ಮೊದಲ ಸೂರ್ಯಗ್ರಹಣದಂದು ಹಲವು ಬಗೆಯ ಅಪರೂಪದ ಯೋಗಗಳೂ ರೂಪುಗೊಳ್ಳಲಿವೆ.

Vijayaprabha Mobile App free

ಇದನ್ನು ಓದಿ: ರಾಜ್ಯದಲ್ಲಿ ಮುಂದಿನ 4 ದಿನ ಮಳೆ; 25ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ

Surya Grahan: ಎಲ್ಲಿ ಗೋಚರಿಸುತ್ತದೆ; ಭಾರತದಲ್ಲಿ ಕಾಣುತ್ತಾ?

54 ವರ್ಷಗಳ ನಂತರ ಸಂಭವಿಸುವ ಈ ಸೂರ್ಯಗ್ರಹಣವೂ ಭಾರತೀಯ ಕಾಲಮಾನದ ಪ್ರಕಾರ ಏಪ್ರಿಲ್ 8ರ ರಾತ್ರಿ 9:12ಕ್ಕೆ ಆರಂಭವಾಗಲಿದ್ದು, ರಾತ್ರಿಯ ಕಾರಣ ಭಾರತದಲ್ಲಿ ಸೂರ್ಯಗ್ರಹಣ ಗೋಚರಿಸುವುದಿಲ್ಲ. ಆದ್ದರಿಂದ ಅದರ ಸೂತಕ ಅವಧಿಯು ಮಾನ್ಯವಾಗಿರುವುದಿಲ್ಲ.

ಸೂರ್ಯಗ್ರಹಣದಲ್ಲಿ, ಸೂತಕ ಅವಧಿಯು ಗ್ರಹಣ ಪ್ರಾರಂಭವಾಗುವ 12 ಗಂಟೆಗಳ ಮೊದಲು ಪ್ರಾರಂಭವಾಗುತ್ತದೆ. ಸೂರ್ಯಗ್ರಹಣದ ಸಮಯದಲ್ಲಿ ರೇವತಿ ನಕ್ಷತ್ರದಲ್ಲಿ ಸೂರ್ಯ ಮತ್ತು ರಾಹು ಇಬ್ಬರೂ ಇರುತ್ತಾರೆ.

ಇದನ್ನು ಓದಿ: ಊಟ ಮಾಡಿದ ತಕ್ಷಣ ಟೀ, ಕಾಫಿ ಕುಡಿದ್ರೆ ಏನಾಗುತ್ತೆ ಗೊತ್ತಾ? ಈ ಸಮಸ್ಯೆ ನಿಮಗೂ ಬರಬಹುದು

ಈ ಸೂರ್ಯಗ್ರಹಣವು ಪಶ್ಚಿಮ ಯುರೋಪ್, ಅಟ್ಲಾಂಟಿಕ್, ಆರ್ಕ್ಟಿಕ್ ಮೆಕ್ಸಿಕೋ, ಉತ್ತರ ಅಮೆರಿಕಾ, ಕೆನಡಾ, ಐರ್ಲೆಂಡ್‌, ಮಧ್ಯ ಅಮೆರಿಕ, ದಕ್ಷಿಣ ಅಮೆರಿಕಾ, ಇಂಗ್ಲೆಂಡ್‌ನ ವಾಯುವ್ಯ ಪ್ರದೇಶ ಮತ್ತು ಐರ್ಲೆಂಡ್‌ನಲ್ಲಿ ಗೋಚರಿಸುತ್ತದೆ.

ಈ ಸೂರ್ಯಗ್ರಹಣದ ಸಮಯದಲ್ಲಿ ಧೂಮಕೇತು ನಕ್ಷತ್ರವೂ ಸ್ಪಷ್ಟವಾಗಿ ಗೋಚರಿಸುತ್ತದೆ. ಈ ಸೂರ್ಯಗ್ರಹಣ ಸಂಭವಿಸುವ ಪ್ರಪಂಚದ ಎಲ್ಲಾ ಭಾಗಗಳಲ್ಲಿ, ಸೌರವ್ಯೂಹದಲ್ಲಿ ಇರುವ ಶುಕ್ರ ಮತ್ತು ಗುರುವನ್ನು ಸಹ ಕಾಣಬಹುದು.

ವಾಟ್ಸಾಪ್ ಗ್ರೂಪ್ಇಲ್ಲಿ ಕ್ಲಿಕ್ ಮಾಡಿ
ಫೇಸ್ ಬುಕ್ ಪೇಜ್ಇಲ್ಲಿ ಕ್ಲಿಕ್ ಮಾಡಿ
ಟೆಲಿಗ್ರಾಮ್ ಗ್ರೂಪ್ಇಲ್ಲಿ ಕ್ಲಿಕ್ ಮಾಡಿ
ಟ್ವಿಟ್ಟರ್ಇಲ್ಲಿ ಕ್ಲಿಕ್ಮಾಡಿ
ಶೇರ್ ಚಾಟ್ಇಲ್ಲಿಕ್ಲಿಕ್ಮಾಡಿ

 

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.