‘ಕೊಹ್ಲಿ-ಅನುಷ್ಕಾ’ ಬಗ್ಗೆ ಗವಾಸ್ಕರ್ ಅಶ್ಲೀಲ ಪದ ಬಳಕೆ? ಗವಾಸ್ಕರ್ ಹೇಳಿಕೆಗೆ ಅನುಷ್ಕಾ ಕಿಡಿ..!

ಮುಂಬೈ : ವಿರಾಟ್ ಕೊಹ್ಲಿಯನ್ನು ಟೀಕಿಸುವ ಭರದಲ್ಲಿ ಅನುಷ್ಕಾ ಹೆಸರನ್ನು ಪ್ರಸ್ತಾಪಿಸಿರುವ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಹೊಸ ವಿವಾದವೊಂದನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ನಿನ್ನೆ ನಡೆದ ಪಂಜಾಬ್ ವಿರುದ್ದದ ಪಂದ್ಯದಲ್ಲಿ ಕೊಹ್ಲಿ ಎರಡು ಸುಲಭ…

ಮುಂಬೈ : ವಿರಾಟ್ ಕೊಹ್ಲಿಯನ್ನು ಟೀಕಿಸುವ ಭರದಲ್ಲಿ ಅನುಷ್ಕಾ ಹೆಸರನ್ನು ಪ್ರಸ್ತಾಪಿಸಿರುವ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಹೊಸ ವಿವಾದವೊಂದನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ನಿನ್ನೆ ನಡೆದ ಪಂಜಾಬ್ ವಿರುದ್ದದ ಪಂದ್ಯದಲ್ಲಿ ಕೊಹ್ಲಿ ಎರಡು ಸುಲಭ ಕ್ಯಾಚ್‌ಗಳನ್ನು ಕೈಚೆಲ್ಲಿದ್ದರು. ಇದಾದ ಬಳಿಕ ವೀಕ್ಷಕ ವಿವರಣೆ ನೀಡುತ್ತಿದ್ದ ಗವಾಸ್ಕರ್, ಲಾಕ್‌ಡೌನ್ ವೇಳೆ ವಿರಾಟ್ ತಮ್ಮ ಪತ್ನಿಯ ಬೌಲಿಂಗ್‌ನ್ನು ಮಾತ್ರ ಅಭ್ಯಾಸ ನಡೆಸಿದ್ದಾರೆ. ಆ ವಿಡಿಯೋವನ್ನು ನೋಡಿದ್ದೇನೆ ಎಂದಿದ್ದು, ವಿವಾದ ಸೃಷ್ಟಿಸಿದೆ.

Vijayaprabha Mobile App free

ಕ್ರಿಕೆಟಿಗ ಸುನಿಲ್ ಗವಾಸ್ಕರ್ ಈ ಹೇಳಿಕೆ ನೀಡಿದ ನಂತರ ವಿರಾಟ್ ಕೊಹ್ಲಿಗೆ ನಟಿ ಅನುಷ್ಕಾ ಶರ್ಮಾ ಬೌಲಿಂಗ್ ಮಾಡುವ ವಿಡಿಯೋ ಸದ್ಯ ವೈರಲ್ ಆಗುತ್ತಿದೆ.

ಕೊಹ್ಲಿ-ಅನುಷ್ಕಾ ಕುರಿತು ಗವಾಸ್ಕರ್ ನೀಡಿದ್ದ ಅಸಭ್ಯ ಹೇಳಿಕೆಗೆ ಉತ್ತರವಾಗಿ ಖಾರವಾಗಿ ಪ್ರತಿಕ್ರಿಯಿಸಿರುವ ಅನುಷ್ಕಾ ಶರ್ಮಾ, ಸನ್ಮಾನ್ಯ ಗವಾಸ್ಕರ್ ಅವರೇ ನಿಮ್ಮ ಆ ಹೇಳಿಕೆ ಅಸಹ್ಯಕರವಾಗಿದೆ. ಯಾಕೆ ಹೀಗೆ ಹೇಳಿದಿರಿ? ಕಳೆದ ಕೆಲವು ವರ್ಷಗಳಿಂದ ಪ್ರತಿ ಕ್ರಿಕೆಟಿಗರ ಹಾಗೂ ಅವರ ಕುಟುಂಬದ ಖಾಸಗಿತನವನ್ನು ನೀವು ಗೌರವಿತ್ತೀರಿ ಎಂದು ಭಾವಿಸುತ್ತೇನೆ. ನಿಮಗೆಷ್ಟು ಸಮಾಜದಲ್ಲಿ ಗೌರವವಿದೆಯೋ, ನಮಗೂ ಅಷ್ಟೇ ಗೌರವವಿದೆ ಎಂದು ನಿಮಗೆ ಅನಿಸುವುದಿಲ್ಲವೇ? ಎಂದು ಕಿಡಿಕಾರಿದ್ದಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.