ಡ್ರಗ್ಸ್ ತೆಗೆದುಕೊಂಡಿದ್ದೆ ಎಂದ ಕಂಗನಾಳನ್ನು ಏಕೆ ಬಿಟ್ಟಿದ್ದೀರಿ?; ಸಂಚಲನ ಹೇಳಿಕೆ ನೀಡಿದ ಖ್ಯಾತ ನಟಿ…!

ಮುಂಬೈ : ಬಾಲಿವುಡ್‌ನ ಯುವ ನಟ ಸುಶಾಂತ್ ಸಿಂಗ್ ರಜಪೂತ್ ಅವರ ನಿಧನದ ನಂತರ ಅನಿರೀಕ್ಷಿತವಾಗಿ ಬೆಳಕಿಗೆ ಬಂದ ಡ್ರಗ್ ಪ್ರಕರಣ ಸಿನಿ ವಲಯಗಳಲ್ಲಿ ಬಾರಿ ಸಂಚಲನ ಮೂಡಿಸಿದೆ. ಮಾದಕ ದ್ರವ್ಯ ಮಾಫಿಯಾದಲ್ಲಿ ಸುಶಾಂತ್…

nagma

ಮುಂಬೈ : ಬಾಲಿವುಡ್‌ನ ಯುವ ನಟ ಸುಶಾಂತ್ ಸಿಂಗ್ ರಜಪೂತ್ ಅವರ ನಿಧನದ ನಂತರ ಅನಿರೀಕ್ಷಿತವಾಗಿ ಬೆಳಕಿಗೆ ಬಂದ ಡ್ರಗ್ ಪ್ರಕರಣ ಸಿನಿ ವಲಯಗಳಲ್ಲಿ ಬಾರಿ ಸಂಚಲನ ಮೂಡಿಸಿದೆ. ಮಾದಕ ದ್ರವ್ಯ ಮಾಫಿಯಾದಲ್ಲಿ ಸುಶಾಂತ್ ಗೆಳತಿ ರಿಯಾ ಚಕ್ರವರ್ತಿ ಭಾಗಿಯಾಗಿರುವ ಬಗ್ಗೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ತನಿಖೆ ನಡೆಸುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ನಟಿ ರಕುಲ್ ಪ್ರೀತ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಸೇರಿದಂತೆ ಹಲವಾರು ಸ್ಟಾರ್ ನಾಯಕಿಯರ ಹೆಸರುಗಳು ಹೊರಬಂದಿವೆ.

ಈಗಾಗಲೇ ಎನ್‌ಸಿಬಿ ಯಿಂದ ನಟಿ ದೀಪಿಕಾ ಪಡುಕೋಣೆ, ಸಾರಾ ಅಲಿಖಾನ್, ಶ್ರದ್ಧಾ ಕಪೂರ್ ಮತ್ತು ಟಾಲಿವುಡ್ ನಾಯಕಿ ರಾಕುಲ್‌ಪ್ರೀತ್ ಸಿಂಗ್ ಅವರಿಗೆ ನೋಟಿಸ್ ನೀಡಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡೆ, ಖ್ಯಾತ ನಟಿ ನಗ್ಮಾ ಸಂಚಲನ ಹೇಳಿಕೆ ನೀಡಿದ್ದಾರೆ.

ವಾಟ್ಸಾಪ್ ಸಂದೇಶಗಳ ಆಧಾರದ ಮೇಲೆ ಎನ್‌ಸಿಬಿ ಅಧಿಕಾರಿಗಳು ನಾಯಕಿಯರಿಗೆ ಸಮನ್ಸ್ ಜಾರಿಗೊಳಿಸಿದ್ದು, ನಾನು ಡ್ರಗ್ಸ್ ತೆಗೆದುಕೊಂಡಿದ್ದೆ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದ ನಟಿ ಕಂಗನಾ ರಣಾವತ್ ಅವರನ್ನು ಏಕೆ ಬಿಟ್ಟಿದ್ದೀರಿ? ಎಂದು ಎನ್‌ಸಿಬಿ ವಿರುದ್ಧ ಖ್ಯಾತ ನಟಿ ನಗ್ಮಾ ಕಿಡಿಕಾರಿದ್ದಾರೆ.

Vijayaprabha Mobile App free

ಈ ಕುರಿತು ಟ್ವೀಟ್ ಮಾಡಿರುವ ನಟಿ ನಗ್ಮಾ ನಾಯಕಿಯರನ್ನು ಅಪಖ್ಯಾತಿಗೊಳಿಸಲು ಮಾಹಿತಿಯನ್ನು ಮಾಧ್ಯಮಗಳಿಗೆ ಸೋರಿಕೆ ಮಾಡುವುದು ಎನ್‌ಸಿಬಿ ಅಧಿಕಾರಿಗಳ ಕೆಲಸವೇ? ಇದು ನಿಜಕ್ಕೂ ಬೇಸರದ ಸಂಗತಿ ಎಂದು ಎನ್‌ಸಿಬಿ ಅಧಿಕಾರಿಗಳ ಮೇಲೆ ಕಿಡಿಕಾರಿದ್ದಾರೆ. ನಟಿ ನಗ್ಮಾ ಅವರ ಈ ಟ್ವೀಟ್ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ನಾಯಕಿ ಕಂಗನಾ ರನೌತ್ ಕೂಡ ತಾನು ಮಾದಕ ವ್ಯಸನಿಯಾಗಿದ್ದೇನೆ ಎಂದು ಹೇಳಿಕೊಳ್ಳುವ ಹಳೆಯ ವಿಡಿಯೋ ಪ್ರಸ್ತುತ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ವೀಡಿಯೊದಲ್ಲಿ ಕಂಗನಾ, “ನಾನು ನಟಿಯಾಗಬೇಕೆಂಬ ಆಸೆಯಿಂದ ಮನೆಯಿಂದ ಓಡಿಬಂದು ಮುಂಬೈಗೆ ಬಂದೆ. ಕೆಲವು ವರ್ಷಗಳ ನಂತರ ನಾನು ನಾಯಕಿಯಾಗಿದೆ. ಈ ಸಂದರ್ಭದಲ್ಲೇ ನಾನು ಮಾದಕ ವ್ಯಸನಕ್ಕೆ ಒಳಗಾಗಿದ್ದೆ. ನಾನು ಹದಿಹರೆಯದ ವಯಸ್ಸಿನಲ್ಲಿದ್ದಾಗಲೇ ಇದು ನಡೆದಿದೆ. ನಾನು ಬಹಳಷ್ಟು ವ್ಯಕ್ತಿಗಳೊಂದಿಗೆ ತೊಂದರೆ ಅನುಭವಿಸಿದ್ದೇನೆ ಎಂದು ಹೇಳಿದ್ದಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.