ನವದೆಹಲಿ : ರಾಜ್ಯ ಮತ್ತು ಕೇಂದ್ರ ರೈಲ್ವೆ ಸಚಿವ ಸುರೇಶ್ ಅಂಗಡಿ (65) ಅವರು ಮೃತಪಟ್ಟಿದ್ದಾರೆ. ಆನಾರೋಗ್ಯ ಹಿನ್ನೆಲೆಯಲ್ಲಿ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು, ಬುಧವಾರ ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದ್ದಾರೆ. ಮತ್ತು
ಕಳೆದ ಕೆಲವು ದಿನಗಳ ಹಿಂದೆ ಸುರೇಶ್ ಅಂಗಡಿ ಅವರಿಗೆ ಕರೋನ ಪಾಸಿಟಿವ್ ದೃಢಪಟ್ಟಿತ್ತು. ಈ ಕುರಿತು ಅವರೇ ಟ್ವೀಟ್ ಮಾಡಿ ನನಗೆ ಕರೋನ ಪಾಸಿಟಿವ್ ದೃಢಪಟ್ಟಿದ್ದು ಶೀಘ್ರವೇ ಗುಣಮುಖವಾಗಿ ಬರುತ್ತೇನೆ ಎಂದು ಹೇಳುದ್ದರು.
ಬೆಳಗಾವಿ ತಾಲ್ಲೂಕಿನ ಕೆ.ಕೆ. ಕೊಪ್ಪಾ ಗ್ರಾಮದಲ್ಲಿ ಜನಿಸಿದ ಸುರೇಶ್ ಅಂಗಡಿ, ಮೇ 2019ರಲ್ಲಿ ರೈಲ್ವೆ ಖಾತೆಯ ರಾಜ್ಯ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ಅಂಗಡಿ ಅವರ ಅಕಾಲಿಕ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಸಿದ್ದರಾಮಯ್ಯ, ಕುಮಾರಸ್ವಾಮಿ, ಗೋವಿಂದ ಕಾರಜೋಳ, ಸದಾನಂದ ಗೌಡ, ವಿ ಸೋಮಣ್ಣ, ನಟಿ ಸಂಸದೆ ಸುಮಲತಾ ಸೇರಿ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ.