ಶಾರ್ಜಾ : ಕಳೆದ ಬಾರಿ ಫೈನಲ್ನ ಸೋಲಿಗೆ ಮೊದಲ ಪಂದ್ಯದಲ್ಲಿ ಪ್ರತೀಕಾರ ತೀರಿಸಿಕೊಂಡು ಐಪಿಎಲ್ 13ನೇ ಆವೃತ್ತಿಯಲ್ಲಿ ಶುಭಾರಂಭ ಮಾಡಿರುವ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಇಂದು ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೆಣಸಲಿದೆ. ಇನ್ನು, ರಾಜಸ್ಥಾನ್ ರಾಯಲ್ಸ್ಗೆ ಈ ಆವೃತ್ತಿಯಲ್ಲಿ ಇದು ಮೊದಲ ಪಂದ್ಯ.
ಇನ್ನು ಮುಂಬೈ ಇಂಡಿಯನ್ ವಿರುದ್ಧ ನಡೆದ ಆರಂಭಿಕ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ವಿಜಯಶಾಲಿಯಾಗಿತ್ತು. ಈ ಪಂದ್ಯದಲ್ಲಿ ಡುಪ್ಲೆಸಿಸ್, ಅಂಬಟಿ ರಾಯುಡು ಅರ್ಧ ಶತಕ ಸಿಡಿಸಿ ತಾವು ಫಾರ್ಮ್ ನಲ್ಲಿ ಇದ್ದೇವೆ ತಿಳಿಸಿದ್ದರು, ಇನ್ನು ಬೌಲಿಂಗ್ ವಿಭಾಗದಲ್ಲಿ ಬಲಿಷ್ಠವಾಗಿದ್ದು ಲುಂಗಿ ಎಂಗಿಡಿ, ದೀಪಕ್ ಚಾಹರ್ ಅವರಂತಹ ಬೌಲರ್ ಗಳಿದ್ದು ರವೀಂದ್ರ ಜಡೇಜಾ, ಸ್ಯಾಮ್ ಕರಣ್ ಅವರಂತ ಆಲ್ರೌಂಡರ್ ಗಳಿದ್ದಾರೆ.
ರಾಜಸ್ತಾನ್ ರಾಯಲ್ಸ್ ತಂಡ ಆರಂಭದಲ್ಲೇ ಆಘಾತಕ್ಕೊಳಾಗಿದ್ದು
ಇಂಗ್ಲೆಂಡ್ನ ಆಲ್ರೌಂಡರ್ ಬೆನ್ ಸ್ಟೋಕ್ಸ್, ಸ್ಫೋಟಕ ಬ್ಯಾಟ್ಸ್ಮನ್ ಜೋಸ್ ಬಟ್ಲರ್ ಅವರ ಅನುಪಸ್ಥಿತಿ ಯಲ್ಲಿ ಇಂದು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೆಣಸಲಿದೆ. ಇನ್ನು ನಾಯಕ ಸ್ಟೀವ್ ಸ್ಮಿತ್ ಅವರ ಲಭ್ಯತೆ ಬಗೆಗಿನ ಸಂದೇಹ ತಂಡಕ್ಕೆ ತಲೆನೋವಾಗಿದೆ.
ಉಳಿದಂತೆ ತಂಡದಲ್ಲಿ ಅಂಡರ್ 19 ವಿಶ್ವಕಪ್ ಕ್ರಿಕೆಟ್ ತಂಡದ ಆಟಗಾರ ಯಶಸ್ವಿ ಜೈಸ್ವಾಲ್, ರಾಬಿನ್ ಉತ್ತಪ್ಪ, ಡೇವಿಡ್ ಮಿಲ್ಲರ್, ಸಂಜು ಸ್ಯಾಮ್ ಸನ್, ಜೊಫ್ರಾ ಆರ್ಚರ್, ಜಯದೇವ ಉನದ್ಕತ್ ಅವರನ್ನು ನೆಚ್ಚಿಕೊಂಡಿದೆ.
ಇಂದು ಸಂಜೆ 7:30 ಕ್ಕೆ ಯುಎಇ ನ ಶಾರ್ಜಾ ಕ್ರಿಕೆಟ್ ಸ್ಟೇಡಿಯಂ ನಲ್ಲಿ ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ತಾನ್ ರಾಯಲ್ಸ್ ತಂಡಗಳು ಸೆಣಸಲಿದ್ದು, ಗೆಲುವು ಯಾರಿಗೋ ಕಾದುನೋಡಬೇಕಾಗಿದೆ.