ಸಚಿವ ಆನಂದ್ ಸಿಂಗ್ ಮತ್ತು ಹಲವು ಸಂಘಟನೆಗಳ ಪರಿಶ್ರಮ; ಶೀಘ್ರವೇ ನೂತನ ವಿಜಯನಗರ ಜಿಲ್ಲೆ ಘೋಷಣೆ..?

ಬಳ್ಳಾರಿ: ಸಚಿವ ಆನಂದ್ ಸಿಂಗ್ ಮತ್ತು ಹಲವು ಸಂಘಟನೆಗಳ ಒತ್ತಾಯದಂತೆ ಶೀಘ್ರವೇ ನೂತನ ವಿಜಯನಗರ ಜಿಲ್ಲೆಗೆ ವಿರೋಧದ ನಡುವೆಯೂ ಬಿ.ಎಸ್  ಯಡಿಯೂರಪ್ಪ ಅವರ ಸರ್ಕಾರ ಸೂಚನೇ ನೀಡಿದೆ ಎನ್ನಲಾಗಿದೆ. ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು…

ಬಳ್ಳಾರಿ: ಸಚಿವ ಆನಂದ್ ಸಿಂಗ್ ಮತ್ತು ಹಲವು ಸಂಘಟನೆಗಳ ಒತ್ತಾಯದಂತೆ ಶೀಘ್ರವೇ ನೂತನ ವಿಜಯನಗರ ಜಿಲ್ಲೆಗೆ ವಿರೋಧದ ನಡುವೆಯೂ ಬಿ.ಎಸ್  ಯಡಿಯೂರಪ್ಪ ಅವರ ಸರ್ಕಾರ ಸೂಚನೇ ನೀಡಿದೆ ಎನ್ನಲಾಗಿದೆ.

ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಬರೆದಿರುವ ಟಿಪ್ಪಣಿಯಲ್ಲಿ, “ಪ್ರಸ್ತುತ ಬಳ್ಳಾರಿ ಜಿಲ್ಲೆ ತುಂಬಾ ವಿಸ್ತಾರವಾಗಿದೆ, ಜನರ ಹಿತದೃಷ್ಟಿಯಿಂದ ಜಿಲ್ಲೆ ಇಬ್ಬಾಗ ಮಾಡಬೇಕಿದೆ, ಬಳ್ಳಾರಿ ಜಿಲ್ಲೆಯಲ್ಲಿ 5 ತಾಲೂಕುಗಳನ್ನು ಬಳ್ಳಾರಿ ಸೇರಿ ಸಿರುಗುಪ್ಪ, ಕುರುಗೋಡು, ಕೂಡ್ಲಿಗಿ, ಸಂಡೂರು, ಉಳಿಸಿಕೊಳ್ಳಿ, ಮತ್ತು  ಹೊಸಪೇಟೆ, ಕಂಪ್ಲಿ, ಹಗರಿ ಬೊಮ್ಮನಹಳ್ಳಿ, ಕೊಟ್ಟೂರು, ಹಡಗಲಿ, ಹರಪನಹಳ್ಳಿ 6 ತಾಲೂಕುಗಳನ್ನು ಸೇರಿಸಿ ವಿಜಯನಗರ ಜಿಲ್ಲೆ ರಚಿಸಿ, ವಿಜಯನಗರ ಜಿಲ್ಲೆಗೆ ಹೊಸಪೇಟೆ ಪಟ್ಟಣವೇ ಕೇಂದ್ರಸ್ಥಾನವನ್ನು ಮಾಡಿ ಕಡತ ಮಂಡಿಸಲು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಈ ಹಿನ್ನಲೆಯಲ್ಲಿ ಪ್ರಸ್ತುತ ವಿಷಯವನ್ನು ಸಚಿವ ಸಂಪುಟ ಸಭೆಯಲ್ಲಿ ವಿಷಯ ಮಂಡಿನೆಗೆ ಮಾನ್ಯ ಮುಖ್ಯಮಂತ್ರಿಗಳು ಬಿ.ಎಸ್ ಯಡಿಯೂರಪ್ಪ ಅವರು ಸೂಚನೆ ನೀಡಿದ್ದಾರೆ ಎನ್ನಲಾಗಿದ್ದು, ಸಚಿವ ಆನಂದ್ ಸಿಂಗ್ ಒತ್ತಾಯದಂತೆ ವಿಜಯನಗರ ಜಿಲ್ಲೆ ರಚನೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಬಳ್ಳಾರಿ ಜಿಲ್ಲೆ ವಿಭಜಿಸಿ ನೂತನ ವಿಜಯನಗರ ಜಿಲ್ಲೆ ರಚನೆಗೆ, ರೆಡ್ಡಿ ಬ್ರದರ್ಸ್ ಅವರಿಂದ ತೀವ್ರ ವಿರೋಧ ವ್ಯಕ್ತವಾಗಿದೆ ಎನ್ನಲಾಗಿದೆ.

Vijayaprabha Mobile App free

ನೂತನ ವಿಜಯನಗರ ಜಿಲ್ಲೆ ಏಕೆ ಆಗಬೇಕು?

ಬಳ್ಳಾರಿ ಜಿಲ್ಲೆಯಿಂದ ವಿಭಜನೆಗೊಂಡು ಶೀಘ್ರವೇ ನೂತನ ವಿಜಯನಗರ ಜಿಲ್ಲೆ ರಚನೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಬಳ್ಳಾರಿ ಜಿಲ್ಲೆಯಲ್ಲಿ ಪ್ರಸ್ತುತ 11 ತಾಲೂಕುಗಳಿದ್ದು ತ್ವರಿತ ಆಡಳಿತ ಮಾಡುವುದು ಕಷ್ಟಕರವಾಗಿದೆ. ಕೆಲವೊಂದು ತಾಲೂಕುಗಳು ಮತ್ತು ತಾಲೂಕುಗಳಲ್ಲಿ ಬರುವ ಹಳ್ಳಿಗಳು ಬಳ್ಳಾರಿ ಜಿಲ್ಲೆಯಿಂದ ಸುಮಾರು 200 ಕಿ.ಮೀ ದೂರದಲ್ಲಿದ್ದು ಜಿಲ್ಲಾ ಕಚೇರಿಗೆಳಿಗೆ ಸಂಬಂಧಪಟ್ಟಂತೆ ಬಳ್ಳಾರಿಗೆ ಜಿಲ್ಲೆಗೆ ಬರುವುದು ಅಲ್ಲಿನ ಜನಸಾಮಾನ್ಯರಿಗೆ ಕಷ್ಟಕರವಾಗಿದೆ ಎನ್ನಲಾಗಿದ್ದು, ಜನರ ಹಿತದೃಷ್ಟಿ ಮತ್ತು ಸುಗಮ ಆಡಳಿತ ದೃಷ್ಟಿಯಿಂದ ವಿಜಯನಗರ ಜಿಲ್ಲೆ ರಚಿಸಲು ಬಿ ಎಸ್ ಯಡಿಯೂರಪ್ಪ ಅವರ ಸರ್ಕಾರ ಸೂಚನೆ ನೀಡಿದ್ದು , ನವಂಬರ್ 1 ರಂದು ನೂತನ ವಿಜಯನಗರ ಜಿಲ್ಲೆ ಘೋಷಣೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.