ರಾಹುಲ್ ಗಾಂಧಿ ಸಂಸತ್ ಸದಸ್ಯತ್ವ ರದ್ದುಗೊಳಿಸಿ ಲೋಕಸಭೆ ಸಚಿವಾಲಯ ಅಧಿಸೂಚನೆ ಹೊರಡಿಸಿದೆ. 2019ರಲ್ಲಿ ಕೋಲಾರದಲ್ಲಿ ನಡೆದ ರಾಜಕೀಯ ಪ್ರಚಾರದಲ್ಲಿ ರಾಹುಲ್ ಅವರು, ಪ್ರಧಾನಿ ಮೋದಿ ಅವರನ್ನು ನೀರವ್ ಮೋದಿ ಮತ್ತು ಲಲಿತ್ ಮೋದಿಯಂತಹ ಪರಾರಿಯಾದ ವ್ಯಕ್ತಿಗಳೊಂದಿಗೆ ಹೆಸರಿಸಿದ್ದರು. ಈ ಹೇಳಿಕೆಯಿಂದ ಗಾಂಧಿ ಸಮುದಾಯವನ್ನು ‘ಮೋದಿ’ ಉಪನಾಮ ಹೊಂದಿರುವ ಎಲ್ಲರೂ ಕಳ್ಳರು ಎಂದು ದೂಷಿಸಿದ್ದರು ಅಂತ ಅರ್ಜಿದಾರರಾದ ಪೂರ್ಣೇಶ್ ಮೋದಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದರು.
ಇದನ್ನು ಓದಿ: ಖ್ಯಾತ ನಟಿ ಪವಿತ್ರಾ ಲೋಕೇಶ್, ನರೇಶ್ ಲವ್ವಿಡವ್ವಿ, ಮದುವೆ, ಹನಿಮೂನ್ ಬಣ್ಣ ಬಯಲು; ಇದಕ್ಕಾಗಿ ಇಷ್ಟೆಲ್ಲಾ ಮಾಡಿದ್ರಾ..?
ಕಾಯಿದೆ ಏನು ಹೇಳುತ್ತದೆ?
ಪ್ರಧಾನಿ ಮೋದಿ ಸರ್ ನೇಮ್ ಹೇಳಿಕೆ ಪ್ರಕರಣದಲ್ಲಿ ಗುಜರಾತಿನ ಸೂರತ್ ಜಿಲ್ಲಾ ನ್ಯಾಯಾಲಯ 2 ವರ್ಷ ಜೈಲು ಶಿಕ್ಷೆ ಹಾಗೂ 15 ಸಾವಿರ ರೂ.ದಂಡ ವಿಧಿಸಿದ ಹಿನ್ನೆಲೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರ ಸದಸ್ಯತ್ವವನ್ನು ರದ್ದುಗೊಳಿಸಿ ಸ್ಪೀಕರ್ ಓಂ ಬಿರ್ಲಾ ಆದೇಶಿಸಿದ್ದಾರೆ.
ಜನಪ್ರತಿನಿಧಿಗಳ ಕಾಯಿದೆ ಅಡಿ ಯಾವುದೇ ಓರ್ವ ಚುನಾಯಿತ ಜನಪ್ರತಿನಿಧಿ 2 ವರ್ಷಕ್ಕಿಂತ ಹೆಚ್ಚು ದಿನಗಳವರೆಗೆ ಜೈಲು ಶಿಕ್ಷೆಗೆ ಒಳಪಟ್ಟರೆ ಅಂಥವರ ಸದಸ್ಯತ್ವ ರದ್ದಾಗಲಿದೆ. ರಾಹುಲ್ ಕೇರಳದ ವಯನಾಡು ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದರು.
ಇದನ್ನು ಓದಿ: ಬೆಂಗಳೂರು ಮೆಟ್ರೋದಲ್ಲಿ ಖಾಯಂ ಉದ್ಯೋಗ; ತಿಂಗಳಿಗೆ 25,000 ರಿಂದ 94500 ರೂ ಸಂಬಳ, ಇಂದೇ ಅರ್ಜಿ ಸಲ್ಲಿಸಿ
ಮೋದಿ ವಿರುದ್ಧ ಮಾನಹಾನಿ ಪ್ರಕರಣ?
ಇನ್ನು, ಮೋದಿ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸುತ್ತೇನೆ ಎಂದು ಕಾಂಗ್ರೆಸ್‌ನ ಹಿರಿಯ ನಾಯಕಿ ರೇಣುಕಾ ಚೌಧರಿ ಹೇಳಿದ್ದಾರೆ. ರಾಹುಲ್ ಅವರಿಗೆ ಮಾನಹಾನಿ ಪ್ರಕರಣದಲ್ಲಿ ಜೈಲುಶಿಕ್ಷೆಯಾಗಿರುವುದಕ್ಕೆ ಪ್ರತಿಕ್ರಿಯಿಸಿರುವ ಅವರು, 2018ರ ಸಂಸತ್ ಅಧಿವೇಶನದಲ್ಲಿ ಮೋದಿಯವರು, ನನ್ನನ್ನು ಶೂರ್ಪನಖಿ ಎಂದು ಜರಿದಿದ್ದರು. ಇದರ ವಿರುದ್ಧ ಕೇಸ್ ಹಾಕುತ್ತೇನೆ. ಕೋರ್ಟ್ ಎಷ್ಟು ವೇಗವಾಗಿ ಕೆಲಸ ಮಾಡುತ್ತದೆ ನೋಡೋಣ ಎಂದಿರುವ ಅವರು, ಇದಕ್ಕೆ ಸಂಬಂಧಿಸಿದ ವಿಡಿಯೊವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.
ಇದನ್ನು ಓದಿ: ITR Filing: ಈ ತಿಂಗಳೊಳಗೆ ಆದಾಯ ತೆರಿಗೆ ಸಲ್ಲಿಸಲು ತಪ್ಪಿದರೆ, 5000ರೂ ಬಾರಿ ದಂಡ, ಕಾನೂನು ಕ್ರಮ