Atal Pension Scheme: ಕೇಂದ್ರ ಸರ್ಕಾರದ ಪ್ರಮುಖ ಯೋಜನೆಗಳಲ್ಲಿ ‘ಅಟಲ್ ಪಿಂಚಣಿ ಯೋಜನೆ’ (Atal Pension Scheme) ಒಂದು. ಅಸಂಘಟಿತ ವಲಯದ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆಯ ಮೂಲಕ 60 ವರ್ಷದ ನಂತರ ಮಾಸಿಕ 1000 ರಿಂದ 5000 ರೂ.ವರೆಗೆ ಪಿಂಚಣಿ(Pension) ನೀಡಲಾಗುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರು ಸೇರಿದಂತೆ ಇತರ ಸಂಘಟಿತ ವಲಯಕ್ಕೆ ಸೇರಿದವರು ಎನ್‌ಪಿಎಸ್ ಸದಸ್ಯರಾಗಿದ್ದರೆ, ಅಸಂಘಟಿತ ವಲಯಕ್ಕೆ ಸೇರಿದವರು ಅಟಲ್ ಪಿಂಚಣಿ ಯೋಜನೆಗೆ ಅರ್ಹರಾಗಿರುತ್ತಾರೆ. ನಿಮ್ಮಲ್ಲಿ ಯಾರಾದರೂ ಈ ಯೋಜನೆಗೆ ಸೇರಲು ಯೋಚಿಸುತ್ತಿದ್ದರೆ.. ತಕ್ಷಣವೇ ಸೇರಿಕೊಳ್ಳಿ.
ಇದನ್ನು ಓದಿ: ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್; ಇನ್ಮುಂದೆ ಸಿಗಲಿದೆ ಎಟಿಎಂನಿಂದ ರೇಷನ್
ಭಾರತ ಸರ್ಕಾರವು ನೀಡುವ ‘ಅಟಲ್ ಪಿಂಚಣಿ ಯೋಜನೆಗೆ (Atal Pension Scheme) ಸೇರಲು 18 ರಿಂದ 40 ವರ್ಷ ವಯಸ್ಸಿನವರು ಅರ್ಹರಾಗಿದ್ದಾರೆ. ಆದ್ದರಿಂದ ನೀವು ಈ ವಯಸ್ಸಿನ ವ್ಯಾಪ್ತಿಯಲ್ಲಿದ್ದರೆ ನೀವು ಈ ಯೋಜನೆಗೆ ಸೇರಬಹುದು. 40 ವರ್ಷಗಳ ನಂತರ ಸೇರಲು ಅವಕಾಶವಿಲ್ಲ. ಈ ಯೋಜನೆಗೆ ಸೇರಲು ಬಯಸುವವರು ಪ್ರತಿ ತಿಂಗಳು ನಿರ್ದಿಷ್ಟ ಮೊತ್ತವನ್ನು ಪಾವತಿಸಬೇಕು. ನಿಮ್ಮ ವಯಸ್ಸಿನ ಆಧಾರದ ಮೇಲೆ ಪಾವತಿಸಬೇಕಾದ ಮೊತ್ತವೂ ಬದಲಾಗುತ್ತದೆ. ಅಲ್ಲದೆ ಪ್ರತಿ ತಿಂಗಳು ಪಡೆಯುವ ಪಿಂಚಣಿಗೆ(Pension) ಅನುಗುಣವಾಗಿ ಪಾವತಿಸಬೇಕಾದ ಮಾಸಿಕ ಮೊತ್ತವು ಬದಲಾಗುತ್ತದೆ.
ಈ ಯೋಜನೆಗೆ ಸೇರುವವರಿಗೆ 60 ವರ್ಷ ತುಂಬಿದ ನಂತರವೇ ಪಿಂಚಣಿ ಸಿಗುತ್ತದೆ. ರೂ. 1000, ರೂ. 2 ಸಾವಿರ, ರೂ. 3000, ರೂ. 4 ಸಾವಿರ, ರೂ. 5000 ಪಿಂಚಣಿ ಪಡೆಯಬಹುದು. ನೀವು ರೂ.1000 ಪಿಂಚಣಿ ಪಡೆಯಲು ಬಯಸಿದರೆ .. ತಿಂಗಳಿಗೆ ರೂ 42 ಪಾವತಿಸಬೇಕಾಗುತ್ತದೆ. ಅದೇ ತಿಂಗಳಿಗೆ 2 ಸಾವಿರ ರೂ ಪಿಂಚಣಿ ಪಡೆಯಲು ಬಯಸಿದರೆ ರೂ.84 ಪಾವತಿಸಬೇಕಾಗುತ್ತದೆ. ಅಲ್ಲದೆ 3 ಸಾವಿರ ಪಿಂಚಣಿ ಪಡೆಯಲು, ತಿಂಗಳಿಗೆ ರೂ.126 ರಿಂದ ಪಾವತಿಸಬೇಕಾಗುತ್ತದೆ. ಅದೇ ರೀತಿ ತಿಂಗಳಿಗೆ 4 ಸಾವಿರ ಪಡೆಯಲು, ರೂ.168 ಕಟ್ಟಬೇಕು. ಇನ್ನು, ತಿಂಗಳಿಗೆ 5 ಸಾವಿರ ಪಿಂಚಣಿಗ ಪಡೆಯಲು ರೂ. 210 ಪಾವತಿಸಬೇಕು. 18 ವರ್ಷ ವಯಸ್ಸಿನಲ್ಲಿ ಯೋಜನೆಗೆ ಸೇರುವವರಿಗೆ ಈ ದರಗಳು ಅನ್ವಯಿಸುತ್ತವೆ.
ಇದನ್ನು ಓದಿ: ಖ್ಯಾತ ನಟಿ ಪವಿತ್ರಾ ಲೋಕೇಶ್ ಎಷ್ಟು ಮದುವೆಯಾಗಿದ್ದಾರೆ? 1500 ಕೋಟಿ ಆಸ್ತಿ ಕಬಳಿಸಲು ಈ ಮದುವೆಯಾದ್ರಾ ಪವಿತ್ರಾ..!