ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಬಹುನಿರೀಕ್ಷಿತ ಚಿತ್ರ ಕಬ್ಜ ವಿಶ್ವದೆಲ್ಲೆಡೆ ಬಿಡುಗಡೆಯಾಗಿದೆ. ಕನ್ನಡ, ತೆಲುಗು, ತಮಿಳು, ಹಿಂದಿ, ಮಲೆಯಾಳಂ ಸೇರಿದಂತೆ ಹಲವು ಭಾಷೆಗಳಲ್ಲಿ ಬಿಡುಗಡೆಯಾಗಿರುವ ಈ ಸಿನಿಮಾಕ್ಕೆ ಉತ್ತಮ ಓಪನಿಂಗ್ ಸಿಕ್ಕಿದೆ ಎಂದು ವರದಿಯಾಗಿದೆ. ವಿಶ್ವದೆಲ್ಲೆಡೆ 4000 ಥಿಯೇಟರ್‌ಗಳಲ್ಲಿ ಈ ಚಿತ್ರ ಬಿಡುಗಡೆಯಾಗಿದೆ. ಆರ್. ಚಂದ್ರು ಕಬ್ಜ ಸಿನಿಮಾದ ನಿರ್ದೇಶಕರಾಗಿದ್ದಾರೆ. ಈ ಸಿನಿಮಾದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಸೇರಿದಂತೆ ಶಿವಣ್ಣ, ಸುದೀಪ್, ಶ್ರೀಯಾ ಸರಣ್ ಸೇರಿದಂತೆ ಖ್ಯಾತ ನಟ-ನಟಿಯರ ತಾರಾಗಣವಿದೆ.
ಇದನ್ನು ಓದಿ: ʻವೀಕೆಂಡ್ ವಿಥ್ ರಮೇಶ್ ಸೀಸನ್ 5ʼಗೆ ದಿನಾಂಕ ಫಿಕ್ಸ್; ಈ ಸೀಸನ್ ಮೊದಲ ಅಥಿತಿ ಯಾರು ಗೊತ್ತಾ?
ಗ್ರ್ಯಾಂಡ್ ಎಂಟ್ರಿ ಕೊಟ್ಟ ಶಿವಣ್ಣ..!
ಬಹಳಷ್ಟು ನಿರೀಕ್ಷೆ ಮೂಡಿಸಿರುವ ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ ಯಲ್ ಸ್ಟಾರ್ ಉಪೇಂದ್ರ, ಕಿಚ್ಚ ಸುದೀಪ್ ಅಭಿನಯದ ‘ಕಬ್ಜ’ ಇಂದು ಗ್ರ್ಯಾಂಡ್ ರಿಲೀಸ್ ಆಗಿದೆ. ಈ ಸಿನಿಮಾದಲ್ಲಿ ಶಿವಣ್ಣ ಗ್ರ್ಯಾಂಡ್ ಎಂಟ್ರೀ ಕೊಡುವ ಮೂಲಕ ಭಾರೀ ಸದ್ದು ಮಾಡಿದ್ದಾರೆ. ಆದರೆ, ಇವರು ಸಂಪೂರ್ಣವಾಗಿ ಕಬ್ಜ-2ನಲ್ಲಿ ಕಾಣಬಹುದು ಎಂದು ಸಿನಿ ಪ್ರಕ್ಷರ ಅಭಿಪ್ರಾಯವಾಗಿದೆ.
ಇದನ್ನು ಓದಿ: ಖ್ಯಾತ ನಟಿ ಪವಿತ್ರಾ ಲೋಕೇಶ್ ಮಕ್ಕಳ ತಂದೆ ಇವರಲ್ಲ..!
‘ಕಬ್ಜ’ ಸಿನಿಮಾಗೆ ಪ್ರೇಕ್ಷಕ ಪ್ರಭುಗಳು ಹೇಳಿದ್ದೇನು?
ಈ ಚಿತ್ರವು ವಿಶ್ವದಾದ್ಯಂತ 4,000 ಸ್ಕ್ರೀನ್‌ಗಳಲ್ಲಿ ಅಬ್ಬರಿಸುತ್ತಿದ್ದು, ಈ ಸಿನಿಮಾದಲ್ಲಿ ಉಪ್ಪಿ, ಸುದೀಪ್, ಶಿವಣ್ಣ ಗ್ರ್ಯಾಂಡ್ ಎಂಟ್ರೀ ಕೊಡುವ ಮೂಲಕ ಭಾರೀ ಸದ್ದು ಮಾಡಿದ್ದಾರೆ. ಚಿತ್ರದ ಬಗ್ಗೆ ಸಿನಿ ಪ್ರಕ್ಷರ ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದು, ‘ಕಬ್ಜ’ದ ಕ್ಯಾಮರಾ ವರ್ಕ್, ಸಂಗೀತ ಈ ವಿಷಯಗಳ ಬಗ್ಗೆ ಸಿನಿ ರಸಿಕರು ಮಾತನಾಡುತ್ತಿದ್ದಾರೆ.
ಇದನ್ನು ಓದಿ: Adhar Card:: ರಿಜಿಸ್ಟರ್ ಮೊಬೈಲ್ ಸಂಖ್ಯೆ ಇಲ್ಲದೆಯೂ ‘ಆಧಾರ್’ ಕಾರ್ಡ್ ಹೀಗೆ ಡೌನ್‌ಲೋಡ್ ಮಾಡಿ!
ಉಪೇಂದ್ರ ಸಿನಿಮಾಗೆ ಹಿಟ್ ಟಾಕ್.. ಕೆಜಿಎಫ್ ಮರೆತು ಥಿಯೇಟರ್ ಹೋಗಿ
ಈಗಾಗಲೇ ಈ ಚಿತ್ರವು ವಿಶ್ವದಾದ್ಯಂತ 4,000 ಸ್ಕ್ರೀನ್‌ಗಳಲ್ಲಿ ಅಬ್ಬರಿಸುತ್ತಿದ್ದು, ಈ ನಡುವೆ ಮುಂಬೈನಲ್ಲಿ ‘ಕಬ್ಜಾ’ ಸಿನಿಮಾ ಈಗಾಗಲೇ ಪ್ರೀಮಿಯರ್ ಆರಂಭವಾಗಿದ್ದು, ಅಲ್ಲದೇ ಬೆಂಗಳೂರಿನಲ್ಲಿ ಬೆಳಗ್ಗೆನೇ ರಂಭವಾಗಿದ್ದು,.ವಿದೇಶಗಳಲ್ಲೂ ಪ್ರೀಮಿಯರ್‌ಗಳನ್ನು ಪ್ರದರ್ಶಿಸಲಾಯಿತು. ಅಲ್ಲಿ ಸಿನಿಮಾ ನೋಡಿದವರು ಟ್ವಿಟ್ಟರ್ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನು ಓದಿ: ರಾಜ್ಯದಲ್ಲಿ ಮಳೆಗೆ ಮೊದಲ ಬಲಿ.. ಇನ್ನೆರಡು ದಿನ ಮಳೆಯ ಆರ್ಭಟ ಮುಂದುವರಿಕೆ
ಹೌದು, ಸಿನಿಮಾ ತುಂಬಾ ಚೆನ್ನಾಗಿದೆ ಎಂದು ಕೆಲವರು ಹೇಳಿದರೆ, ಹಲವರು ಈ ಸಿನಿಮಾವನ್ನು ‘ಕೆಜೆಎಫ್’ ಜೊತೆ ಹೋಲಿಸುತ್ತಿದ್ದು, ಆ ಸಿನಿಮಾ ನೋಡಿದಂತೆ ಇದೆ ಎನ್ನುತ್ತಾರೆ. ಆದರೆ, ಥಿಯೇಟರ್‌ಗೆ ಹೋಗುವ ಮೊದಲು ನೀವು ‘ಕೆಜೆಎಫ್’’ ಆಲೋಚನೆಗಳನ್ನು ಬಿಟ್ಟುಬಿಡಿ ಎಂದು ಕೆಲವರು ಸಲಹೆ ನೀಡುತ್ತಾರೆ. ಫ್ರೆಶ್ ಫೀಲಿಂಗ್ ನಲ್ಲಿ ನೋಡಿದ್ರೆ ಮಾತ್ರ ‘ಕಬ್ಜಾ’ ಎಂಜಾಯ್ ಮಾಡುತ್ತಾರೆ ಎಂದು ಹೇಳುತ್ತಿದ್ದಾರೆ.