ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಯಲ್ಲಿ ಅಭಿನಯಿಸಿ ಮನೆ ಮಾತಾಗಿದ್ದ ಖ್ಯಾತ ನಟಿ ಯಮುನಾ ಅವರನ್ನು12 ವರ್ಷಗಳ ಹಿಂದೆ ಬೆಂಗಳೂರಿನ ಐಷಾರಾಮಿ ಹೋಟೆಲ್ನಲ್ಲಿ ವೇಶ್ಯಾವಾಟಿಕೆ ಆರೋಪದಡಿ ಪೊಲೀಸರು ರೇಡ್ ಮಾಡಿ ವಶಕ್ಕೆ ಪಡೆದಿದ್ದರು. ಈ ಘಟನೆಯಲ್ಲಿ ತಾನು ನಿರಪರಾಧಿ ಎಂದು ಸಾಬೀತು ಮಾಡಿದ್ದರೂ, ಜನರು ಪದೆ ಪದೇ ಸಾಮಾಜಿಕ ಜಾಲತಾಣದಲ್ಲಿ ನನ್ನನ್ನು ಟಾರ್ಗೆಟ್ ಮಾಡುತ್ತಿರುವುದು ತಪ್ಪು ಎಂದು ಖ್ಯಾತ ನಟಿ ಯಮುನಾ ಹೇಳಿಕೊಂಡಿದ್ದಾರೆ.
ಇದನ್ನು ಓದಿ: ವಿಜಯ್ ವರ್ಮಾ ಜೊತೆ ಖ್ಯಾತ ನಟಿ ಲಿಪ್ಲಾಕ್ ವಿಡಿಯೋ; ಬಾಯಿ ಬಿಟ್ಟ ನಟಿ ತಮನ್ನಾ..!
ಹೌದು ಈ ಕುರಿತು ಮಾತನಾಡಿರುವ ಖ್ಯಾತ ನಟಿ ಯಮುನಾ, ಜೀವನದಲ್ಲಿ ನನ್ನನ್ನು ನಾನು ಎಷ್ಟು ಮೋಟಿವೇಟ್ ಮಾಡಿಕೊಂಡರೂ ಕಾಡುತ್ತಿರುವುದು ಒಂದೇ ನೋವು. ಆ ನೋವು ಇಷ್ಟು ವರ್ಷವಾದರೂ ನನ್ನಲ್ಲಿ ಉಳಿದು ಬಿಟ್ಟಿದೆ. ಇದಕ್ಕೆ ಕಾರಣ ಸೋಷಿಯಲ್ ಮೀಡಿಯಾ. ಬಹಳ ವರ್ಷಗಳ ಹಿಂದೆಯೇ ದೊಡ್ಡ ಸಮಸ್ಯೆಯೊಂದನ್ನು ಎದುರಿಸಿ ಅದರಿಂದ ಹೊರ ಬಂದು ನಿಶ್ಚಿಂತೆಯಿಂದ ಜೀವನ ನಡೆಸುತ್ತಿದ್ದೇನೆ ಎಂದು ನಟಿ ಯಮುನಾ ಹೇಳಿದ್ದಾರೆ
ಇದನ್ನು ಓದಿ: ಭಾರತಕ್ಕೆ ಒಲಿದು ಬಂತು ಎರಡು ‘ಆಸ್ಕರ್’ ಪ್ರಶಸ್ತಿ..; ಆಸ್ಕರ್ ಗೆದ್ದ ಭಾರತೀಯರು ಇವರೇ ನೋಡಿ
ಸಾಮಾಜಿಕ ಜಾಲತಾಣವನ್ನು ಕಂಟ್ರೋಲ್ ಮಾಡಲು ಆಗುತ್ತಿಲ್ಲ;
ಆದರೆ, ಆ ಸಮಸ್ಯೆಯಲ್ಲಿ ಹೇಗೆ ಸಿಲುಕಿಕೊಂಡೆ ಎಂದು ಈಗಾಗಲೇ ಅನೇಕ ಸಂದರ್ಶನದಲ್ಲಿ ಹೇಳಿಕೊಂಡು, ಕ್ಲಾರಿಟಿ ಕೊಟ್ಟಿದ್ದು, ಈ ವಿಚಾರದಲ್ಲಿ ಸ್ವತಃ ಕೋರ್ಟ್ ಕೂಡ ನನಗೆ ಕ್ಲೀನ್ ಚಿಟ್ ಕೊಟ್ಟಿದ್ದು, ನನ್ನನ್ನು ನ್ಯಾಯ ಗೆಲ್ಲಿಸಿದ್ದು, ನ್ಯಾಯಯುತವಾಗಿ ನಾನು ಗೆಲುವು ಸಾಧಿಸಿರುವೆ. ಆದರೆ ಸಾಮಾಜಿಕ ಜಾಲತಾಣವನ್ನು ನಾನು ಕಂಟ್ರೋಲ್ ಮಾಡಲು ಆಗುತ್ತಿಲ್ಲ,’ ಎಂದು ವಿಡಿಯೋದಲ್ಲಿ ನಟಿ ಯಮುನಾ ತಮಗಾಗಿರುವ ನೋವನ್ನು ಹೇಳಿಕೊಂಡಿದ್ದಾರೆ.
ಇದನ್ನು ಓದಿ: ಬೆಣ್ಣೆನಗರಿ ಜನರ ಬಿಚ್ಚಿಬೀಳಿಸುವ ಸ್ಟೋರಿ; ಪ್ರಿಯಕರನ ಜತೆ ಸೇರಿ ಪತಿಯನ್ನೇ ಕೊಲೆ ಮಾಡಿಸಿದ ಪತ್ನಿ..!
ಇನ್ನು, 1987ರಲ್ಲಿ ಟಾಲಿವುಡ್ ಚಿತ್ರಗಳ ಮೂಲಕ ಸಿನಿ ಜರ್ನಿ ಆರಂಭಿಸಿದ ಖ್ಯಾತ ನಟಿ ಯಮುನಾ 1989ರಲ್ಲಿ ಮೋಡದ ಮರೆಯಲ್ಲಿ ನಟಿಸುವ ಕನ್ನಡ ಸಿನಿಮಾ ರಂಗ ಪ್ರವೇಶಿಸಿದ್ದರು. ನಂತರ ಚಿನ್ನ, ಶ್ರೀಮಂಜುನಾಥ, ಹಾಗೆ ಸುಮ್ಮನೆ, ಕಂಠೀರವ, ದಿಲ್ ರಂಗೀಲಾ ಸೇರಿದಂತೆ ಹಲವು ಸಿನಿಮಾಗಳಲ್ಲೂ ನಟಿಸಿ ಎನಿಸಿಕೊಂಡಿದ್ದಾರೆ.
View this post on Instagram