ಮಹಾ ಶಿವರಾತ್ರಿ ಹಬ್ಬ ಯಾವಾಗ ಅನ್ನುವ ಗೊಂದಲಗಳು ಭಕ್ತರಲ್ಲಿದೆ.ಹಿಂದೂ ಕ್ಯಾಲೆಂಡರ್ ಪ್ರಕಾರ, 2023ರಲ್ಲಿ ಫಾಲ್ಗುಣ ಮಾಸದ ಕೃಷ್ಣ ಪಕ್ಷದ ಚತುರ್ದಶಿಯು ಫೆಬ್ರವರಿ 17 ರಂದು ರಾತ್ರಿ 8.02 ರಿಂದ ಪ್ರಾರಂಭವಾಗಿ ಫೆಬ್ರವರಿ 18 ರಂದು ಸಂಜೆ 4.18 ಕ್ಕೆ ಕೊನೆಗೊಳ್ಳುತ್ತದೆ.
ಹಾಗಾಗಿ, ಈ ಬಾರಿ ಶಿವರಾತ್ರಿ ಹಬ್ಬವನ್ನು ಫೆ.18, 2023 ರಂದು ಆಚರಿಸಲಾಗುತ್ತದೆ. ಜ್ಯೋತಿಷಿಗಳ ಪ್ರಕಾರ, ಚತುರ್ದಶಿ ತಿಥಿಯು ಫೆ. 18ರ 08:02 pm ಫೆಬ್ರವರಿ 19ರ 4.18 pm ತನಕ ಇದೆ. ಪೂಜೆಯ ಶುಭ ಮುಹೂರ್ತ ರಾತ್ರಿ 12:09 – 1:00ರವರೆಗೆ ಇದೆ. ಫೆ. 18 ರಂದು ಉಪವಾಸ ಕೈಗೊಳ್ಳುವ ಭಕ್ತರು ಮಾರನೆಯ ದಿನ (ಫೆ. 19 ರಂದು ) ಉಪವಾಸವನ್ನು ಬಿಡಬಹುದು. ಫೆ. 19 ರಂದು 6.59 am-3.24pm ತನಕ ಉಪವಾಸವನ್ನು ಬಿಡಲು ಶುಭ ಮುಹೂರ್ತವಿದೆ.
ಶಿವನ ಆರಾಧನೆ ಮಾಡುವುದು ಹೇಗೆ?
ಮಹಾಶಿವರಾತ್ರಿ ಹತ್ತಿರ ಬರುತ್ತಿದ್ದಂತೆ ಶಿವನ ಆರಾಧನೆ ಮಾಡುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಶಾಸ್ತ್ರಜ್ಞರ ಪ್ರಕಾರ, ಪೂಜೆಯ ಸಮಯದಲ್ಲಿ, ಶಿವಲಿಂಗದ ದಕ್ಷಿಣ ದಿಕ್ಕಿನಲ್ಲಿ ಉತ್ತರಕ್ಕೆ ಅಭಿಮುಖವಾಗಿ ಪೂಜಿಸಬೇಕು. ಬಿಲ್ವಪತ್ರೆಯನ್ನು ಬಳಸಿ ಶಿವ ಪೂಜೆ ಮಾಡಬೇಕು. ಸಕ್ಕರೆ ಮತ್ತು ಕಬ್ಬಿನ ರಸದ ಅಭಿಷೇಕ ಶಿವನಿಗೆ ಬಹುಇಷ್ಟ.
ಇನ್ನು, ಶಿವರಾತ್ರಿ ದಿನ ಅಹೋರಾತ್ರಿ ಶಿವಪಂಚಾಕ್ಷರಿ ಮಂತ್ರವನ್ನು ಪಠಿಸುವುದರಿಂದ ಶಿವನ ಅನುಗ್ರಹಕ್ಕೆ ಪಾತ್ರರಾಗುವುದಕ್ಕೆ ಸಾಧ್ಯವಾಗುತ್ತದೆ ಅನ್ನುವುದು ಅವರ ಸಲಹೆಗಳು.