ಕೊಪ್ಪಳ: ಆಸ್ತಿಗಾಗಿ ಒಡ ಹುಟ್ಟಿದ ಅಣ್ಣನನ್ನೇ ತಮ್ಮ ಕೊಲೆ ಮಾಡಿರುವ ಘಟನೆ ಕೊಪ್ಪಳ ಜಿಲ್ಲೆಯ ಕುಷ್ಟಗಿಯಲ್ಲಿ ನಡೆದಿದ್ದು, ಯಮನೂರಪ್ಪ ಬಸಪ್ಪ ಕಡಿವಾಲರ್ (35) ಕೊಲೆಯಾದ ಮೃತ ದುರ್ದೈವಿ ಅಣ್ಣ.
ಹೌದು, ಕುಷ್ಟಗಿಯ ಯಮನೂರಪ್ಪ ಬಸಪ್ಪ ಕಡಿವಾಲರ್ (35) ಕೊಲೆಯಾಗಿದ್ದು, ಇನ್ನು ಆರೋಪಿ ತಮ್ಮನನ್ನು ಮಲ್ಲಪ್ಪ ಕಡಿವಾಲರ್ (30) ಎಂದು ಗುರುತಿಸಲಾಗಿದೆ. ಆಸ್ತಿ ಹಂಚಿಕೆ ವಿಚಾರವಾಗಿ ನಿನ್ನೆ (ಫೆ.2) ರಾತ್ರಿ ಮನೆಯ ಸ್ನಾನದ ಕೋಣೆಯಲ್ಲಿ ಚಾಕು, ಕಟ್ಟಿಗೆಯಿಂದ ಹೊಡೆದು ಭೀಕರವಾಗಿ ಕೊಲೆ ಮಾಡಿದ್ದಾನೆ. ನಂತರ ಕೊಲೆ ನಡೆದ ಸ್ಥಳದಲ್ಲಿ ಕದಲದೇ ಕುಳಿತು ಪೊಲೀಸರಿಗೆ ಶರಣಾಗಿದ್ದಾನೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.



