ರೈತರು ಕೆಲವು ಸೌಲಭ್ಯ ಪಡೆಯಲು ಮತ್ತು ಬ್ಯಾಂಕ್‌ಗಳಲ್ಲಿ ಅತ್ಯಂತ ಕಡ್ಡಾಯವಾಗಿರುವ ಕೆವೈಸಿ ( ನೋ ಯುವರ್ ಕಸ್ಟಮರ್) ಪ್ರಕ್ರಿಯೆಯನ್ನು ಅತ್ಯಂತ ಸರಳಗೊಳಿಸುವುದಾಗಿ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಇನ್ನು, ಡಿಜಿಟಲೀಕರಣ ವಿಭಾಗದಲ್ಲಿ ಇನ್ಮುಂದೆ ಕೆವೈಸಿ ವಿಚಾರದಲ್ಲಿ ಯಾವುದೇ ಕಠಿಣ ಪ್ರಕ್ರಿಯೆ ಇರುವುದಿಲ್ಲ ಎಂದು ಬಜೆಟ್‌ನಲ್ಲಿ ಘೋಷಿಸಲಾಗಿದೆ. ಕೇಂದ್ರ ಸರ್ಕಾರದ ಎಲ್ಲಾ ಯೋಜನೆಗಳಿಗೆ ಪ್ಯಾನ್ ಕಾರ್ಡ್ ಅನ್ನು ಕಾಮನ್ ಐಡೆಂಟಿಟಿಯಾಗಿ ಪರಿಗಣಿಸಲಾಗುತ್ತದೆ ಎಂದು ಘೋಷಿಸಲಾಗಿದೆ.
ದೇಶದ ಅಭಿವೃದ್ಧಿಗೆ ಬಜೆಟ್ ನಲ್ಲಿ ʻಸಪ್ತʼಸೂತ್ರ ವನ್ನು ಪಾಲಿಸಿದೆ.
1. ಅಂತರ್ಗತ ಅಭಿವೃದ್ಧಿ
2. ದೇಶದ ಕಟ್ಟ ಕಡೆಯ ವ್ಯಕ್ತಿಗೂ ಸರ್ಕಾರಿ ಸೌಲಭ್ಯಗಳು
3. ಮೂಲಸೌಕರ್ಯ ಮತ್ತು ಹೂಡಿಕೆ
4. ಸಾಮರ್ಥ್ಯವನ್ನು ಹೆಚ್ಚಿಸುವುದು
5. ಹಸಿರು ಬೆಳವಣಿಗೆ
6. ಯುವ ಶಕ್ತಿ
7. ಹಣಕಾಸು ವಲಯ




