ಪಿಎಂ ಕಿಸಾನ್ ಮಂದನ್ ಯೋಜನೆಯು ದೇಶದ ಸಣ್ಣ ಮತ್ತು ಅತಿ ಸಣ್ಣ ರೈತರ ಕಲ್ಯಾಣಕ್ಕಾಗಿ ವಿನ್ಯಾಸಗೊಳಿಸಲಾದ ಕೇಂದ್ರ ಸರ್ಕಾರದ ಪಿಂಚಣಿ ಯೋಜನೆಯಾಗಿದ್ದು,18 ರಿಂದ 40 ವರ್ಷದೊಳಗಿನ ರೈತರು ಈ ಯೋಜನೆಯಡಿ ನೋಂದಾಯಿಸಿಕೊಳ್ಳಬಹುದು.
ಇನ್ನು, ಪಿಎಂ ಕಿಸಾನ್ ಮಂದನ್ ಯೋಜನೆಯಡಿ ರೈತರು ತಮ್ಮ ವಯಸ್ಸಿನ ಪ್ರಕಾರ ಪ್ರತಿ ತಿಂಗಳು 55 ರಿಂದ 200 ರೂ.ವರೆಗೆ ಕಂತುಗಳನ್ನು ಸರ್ಕಾರಿ ಖಾತೆಗೆ ಜಮಾ ಮಾಡಬೇಕು.
2 ರೂ ಉಳಿಸಿ, ಮಾಸಿಕ 3 ಸಾವಿರ ಪಡೆಯಿರಿ..!
ಅಷ್ಟೇ ಅಲ್ಲ, ಕಟ್ಟಡ ನಿರ್ಮಾಣ ಕೆಲಸದಲ್ಲಿ ತೊಡಗಿರುವ ಕಾರ್ಮಿಕರಿಗೆ, ಅಸಂಘಟಿತ ವಲಯದ ಇತರ ಕಾರ್ಮಿಕರಿಗೂ ಕೂಡ ವೃದ್ಧಾಪ್ಯದಲ್ಲಿ ಆರ್ಥಿಕ ಸಹಾಯ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರವು ಪ್ರಧಾನಮಂತ್ರಿ ಶ್ರಮಯೋಗಿ ಮಾನ್‌ಧನ್ ಯೋಜನೆ ಪ್ರಾರಂಭಿಸಿದೆ.
ಇನ್ನು, ಈ ಯೋಜನೆಯ ಲಾಭ ಪಡೆಯಲು 18ನೇ ವಯಸ್ಸಿನಲ್ಲಿ ಈ ಯೋಜನೆ ಆರಂಭಿಸಿದ್ರೆ 2 ರೂ. 40 ವಯಸ್ಸಿನಿಂದ ಪ್ರಾರಂಭಿಸಿದರೆ 200 ರೂ. ಪಾವತಿಸಬೇಕು. ಈ ಯೋಜನೆ ಅಡಿ ಕಾರ್ಮಿಕರಿಗೆ 60 ವರ್ಷದ ನಂತರ ಕನಿಷ್ಟ 3,000 ರೂ,ಗಳ ಮಾಸಿಕ ಪಿಂಚಣಿ ನೀಡಲಾಗುತ್ತದೆ.