ಹೊಸಪೇಟೆ(ವಿಜಯನಗರ),: ವಿಜಯನಗರ ಜಿಲ್ಲೆಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಸಂಘ, ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆ ಅಡಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿಗಳನ್ನು ವೆಬ್‍ಸೈಟ್ https://vijayanagara.nic.in ನಲ್ಲಿ ಅಥವಾ ಹೊಸಪೇಟೆಯ ಹೊಸ ಎಮ್.ಸಿ.ಹೆಚ್ ಆಸ್ಪತ್ರೆ ಹಿಂಭಾಗದ ಆರ್.ಸಿ.ಹೆಚ್ ಅಧಿಕಾರಿಗಳ ಕಚೇರಿಯಲ್ಲಿ ಪಡೆಯಬಹುದು. ಅರ್ಜಿಗಳನ್ನು ಜ.13ರಿಂದ 21ರವರೆಗೆ ವಿತರಿಸಲಾಗುವುದು. ಭರ್ತಿ ಮಾಡಿದ ಅರ್ಜಿಗಳನ್ನು ಜ.21 ಸಂಜೆ 5.30ರೊಳಗಾಗಿ ಸಲ್ಲಿಸಬೇಕು.
ಹುದ್ದೆಗಳ ವಿವರ: ಎಸ್‍ಎನ್‍ಸಿಯು ವೈದ್ಯಾಧಿಕಾರಿಗಳ ಹುದ್ದೆ 02 ಇದ್ದು, ವಿದ್ಯಾರ್ಹತೆ ಎಂಬಿಬಿಎಸ್ ಆಗಿರಬೇಕು. ಯುಪಿಹೆಚ್‍ಸಿ ವೈದ್ಯಾಧಿಕಾರಿಗಳ ಹುದ್ದೆ 03 ಇದ್ದು, ವಿದ್ಯಾರ್ಹತೆ ಎಂಬಿಬಿಎಸ್ ಪದವಿ ಹೊಂದಿರಬೇಕು. ಆರ್.ಬಿ.ಎಸ್.ಕೆ ವೈದ್ಯಾಧಿಕಾರಿಗಳು-03 ಹುದ್ದೆಗೆ ಎಂಬಿಬಿಎಸ್ ಅಥವಾ ಬಿಎಎಂಎಸ್ ಪದವಿ, ಆಯುಷ ವೈದ್ಯಾಧಿಕಾರಿಗಳು-02 ಹುದ್ದೆಗೆ ಬಿಎಎಂಎಸ್, ಎನ್‍ಹೆಚ್‍ಎಂಎಸ್, ಬಿಎನ್‍ವೈಎಸ್, ಬಿಯುಎಂಎಸ್ ಪದವಿ, ಆಶಾ ಮೇಲ್ವಿಚಾರಕರು (ಮಹಿಳೆ)-01 ಹುದ್ದೆಗೆ ಜಿಎನ್‍ಎಂ, ಬಿಎಸ್ಸಿ ನರ್ಸಿಂಗ್, ಡಿಪ್ಲೋಮಾ ಇನ್ ನರ್ಸಿಂಗ್ ಹೊಂದಿರಬೇಕು.
ಶುಶ್ರೂಷಕಿಯರು (ಮಹಿಳೆ)-10 ಹುದ್ದೆಗೆ ಬಿಎಸ್ಸಿ, ಪಿಬಿಬಿಎಸ್, ಡಿಪ್ಲೋಮಾ ಇನ್ ನರ್ಸಿಂಗ್ ವಿದ್ಯಾರ್ಹತೆ, ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ-01 ಹುದ್ದೆಗೆ ಎಲ್‍ಹೆಚ್‍ವಿ ಯುಪಿಹೆಚ್‍ಸಿ ಪದವಿ, ಪಿ.ಹೆಚ್.ಸಿ.ಓ (ಮಹಿಳೆ ಎ.ಎನ್.ಎಂ)-05 ಹುದ್ದೆಗೆ ಎಎನ್‍ಎಂ, ಪ್ರಯೋಗಶಾಲಾ ತಂತ್ರಜ್ಞರು (ರಕ್ತ ಶೇಖರಣ ಘಟಕ)-01 ಹುದ್ದೆಗೆ ಬಿಎಂಎಲ್‍ಟಿ, ಡಿಎಂಎಲ್‍ಟಿ ಪದವಿ, ಪ್ರಯೋಗಶಾಲಾ ತಂತ್ರಜ್ಞರು (ಓUಊಒ)-01 ಹುದ್ದೆಗೆ ಬಿಎಂಎಲ್‍ಟಿ, ಡಿಎಂಎಲ್‍ಟಿ ಪದವಿ, ನೇತ್ರ ಸಹಾಯಕರು-01 ಹುದ್ದೆಗೆ ಡಿಪ್ಲೋಮಾ ಇನ್ ಆಪ್ತೋಮೆಟ್ರಿ, ಆಪ್ತಲ್ಮಿಕ್ ಅಸಿಸ್ಟಂಟ್ ವಿದ್ಯಾರ್ಹತೆ, ಒಟಿ ಟೆಕ್ನಿಷಿಯನ್ 01 ಹುದ್ದೆಗೆ ಡಿಪ್ಲೋಮಾ ಇನ್ ಆಪರೇಷನ್ ಥೇಯಟರ್ ವಿದ್ಯಾರ್ಹತೆ ಹೊಂದಿರಬೇಕು.
ಸೂಚನೆ: ಹುದ್ದೆಗಳ ಸಂಖ್ಯೆಯಲ್ಲಿ ಹೆಚ್ಚುಗೊಳಿಸುವುದು ಅಥವಾ ಕಡಿಮೆಗೊಳಿಸುವುದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘದ ನಿರ್ಧಾರದಂತಿರುತ್ತದೆ. ಆಯ್ಕೆಯ ಪ್ರಕ್ರಿಯೆ ಯಾವುದೇ ಬದಲಾವಣೆಯಾದರು ಆಯ್ಕೆ ಸಮಿತಿ ತಿರ್ಮಾನವೇ ಅಂತಿಮವಾಗಿರುತ್ತದೆ. ಕೋವಿಡ್-19 ರಲ್ಲಿ ಸರ್ಕಾರಿ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸದವರಿಗೆ ಆದ್ಯತೆ ನೀಡಲಾಗುವುದು, 6 ತಿಂಗಳವರೆಗೆ ಸೇವೆ ಸಲ್ಲಿಸಿದವರಿಗೆ ಶೇ.2, 6 ತಿಂಗಳು 1 ದಿನದಿಂದÀ 12 ತಿಂಗಳವರೆಗೆ ಸೇವೆ ಸಲ್ಲಿಸಿದವರಿಗೆ ಶೇ.4, 12 ತಿಂಗಳು 1 ದಿನದಿಂದ 18 ತಿಂಗಳವರೆಗೆ ಸೇವೆ ಸಲ್ಲಿಸಿದವರಿಗೆ ಶೇ.6, 18 ತಿಂಗಳು 1 ದಿನದಿಂದÀ 24 ತಿಂಗಳವರೆಗೆ ಸೇವೆ ಸಲ್ಲಿಸಿದವರಿಗೆ ಶೇ.8ರಷ್ಟು ಕೃಪಾಂಕವನ್ನು ನೀಡಲಾಗುವುದು.
ವಿದ್ಯಾರ್ಹತೆಯಲ್ಲಿ ಪಡೆದ ಅಂಕಗಳ ಶೇಕಡ ಮತ್ತು ಕೋವಿಡ್-19 ಸೇವಾ ಅವಧಿಯ ಕೃಪಾಂಕವನ್ನು ಒಟ್ಟುಗೂಡಿಸಿ ಮೆರಿಟ್ ಪಟ್ಟಿಯನ್ನು ತಯಾರಿಸಲಾಗುವುದು ಮತ್ತು ಹೊಸ ರೋಸ್ಟರ್ ಆಧಾರದ ಮೇಲೆ ಮೇರಿಟ್ ಕಂ ರೋಸ್ಟರ್ ಆಧಾರ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ನೇಮಕಾತಿ ಮಾಡಲಾಗುವುದು. ಎಂ.ಬಿ.ಬಿ.ಎಸ್ ವೈದ್ಯಾಧಿಕಾರಿಗಳ ಹುದ್ದೆಗೆ (SಓಅU & UPಊಅ ವೈದ್ಯಾಧಿಕಾರಿಗಳು) ಹುದ್ದೆಗಳ ಸಂಖ್ಯೆ ತುಂಬುವವರೆಗೆ ವಾಕ್ ಇನ್ ಮೂಲಕ ಆಯ್ಕೆ ಪ್ರಕ್ರಿಯೆ ಮಾಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ವಿಜಯನಗರ ಜಿಲ್ಲೆಯ ಜಾಲತಾಣ https://vijayanagara.nic.in ನಲ್ಲಿ ಅಥವಾ ಹೊಸಪೇಟೆ ಆರ್.ಸಿ.ಹೆಚ್ ಕಚೇರಿಗೆ ಸಂಪರ್ಕಿಸಬಹುದಾಗಿದೆ ವಿಜಯನಗರ ಜಿಲ್ಲೆಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಸಂಘದ ಉಪಾಧ್ಯಕ್ಷರು ತಿಳಿಸಿದ್ದಾರೆ.