UPI ನಿಂದ ಎಷ್ಟು ಹಣ ವರ್ಗಾಹಿಸಬಹುದು? ಆಧಾರ್‌ ಮೂಲಕ ಬ್ಯಾಂಕ್‌ ಬ್ಯಾಲೆನ್ಸ್‌ ಹೀಗೆ ಚೆಕ್‌ ಮಾಡಿ

ಯುಪಿಐ ವಹಿವಾಟುಗಳನ್ನು ಮಾಡಲು ಮಿತಿಯನ್ನು ಸಹ ನಿಗದಿ ಪಡಿಸಲಾಗಿದೆ. ನ್ಯಾಷನಲ್ ಪೇಮೆಂಟ್ ಕಾರ್ಪೋರೇಷನ್ ಆಫ್ ಇಂಡಿಯಾ ವೆಬ್ ಸೈಟ್ ನಲ್ಲಿ ಲಭ್ಯವಿರುವ ಮಾಹಿತಿ ಪ್ರಕಾರ, ಒಂದು ಬಾರಿಗೆ ಯುಪಿಐ ಮೂಲಕ ಗರಿಷ್ಠ 2 ಲಕ್ಷ…

Aadhaar

ಯುಪಿಐ ವಹಿವಾಟುಗಳನ್ನು ಮಾಡಲು ಮಿತಿಯನ್ನು ಸಹ ನಿಗದಿ ಪಡಿಸಲಾಗಿದೆ. ನ್ಯಾಷನಲ್ ಪೇಮೆಂಟ್ ಕಾರ್ಪೋರೇಷನ್ ಆಫ್ ಇಂಡಿಯಾ ವೆಬ್ ಸೈಟ್ ನಲ್ಲಿ ಲಭ್ಯವಿರುವ ಮಾಹಿತಿ ಪ್ರಕಾರ, ಒಂದು ಬಾರಿಗೆ ಯುಪಿಐ ಮೂಲಕ ಗರಿಷ್ಠ 2 ಲಕ್ಷ ರೂ ವಹಿವಾಟು ಮಾಡಬಹುದು.

ಇನ್ನು BHIM UPI ಸಹಾಯದಿಂದ ಒಂದು ವಹಿವಾಟಿನಲ್ಲಿ ಗರಿಷ್ಠ 1 ಲಕ್ಷ ರೂ, ಬ್ಯಾಂಕ್ ಖಾತೆಯಿಂದ ಒಂದು ದಿನದ ಮಿತಿ ಕೇವಲ 1 ಲಕ್ಷ ರೂ ಮಾಡಬಹುದು. HDFC ಬ್ಯಾಂಕ್ ಯುಪಿಐ ಸಹಾಯದಿಂದ ದಿನಕ್ಕೆ 10 ಬಾರಿ ಪಾವತಿ ಮಾಡಬಹುದು. ಅಂದರೆ 1 ಲಕ್ಷ ರೂ ಮೀರಬಾರದು.

ಆಧಾರ್ ನಂಬರ್ ಬಳಸಿ ಬ್ಯಾಂಕ್ ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ..?

Vijayaprabha Mobile App free

ಸ್ಮಾರ್ಟ್ ಫೋನ್ ಇಲ್ಲದವರು & ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಲು ಬ್ಯಾಂಕ್/ ATMಗಳಿಗೆ ಹೋಗಲು ಸಾಧ್ಯವಾಗದ ಜನರು ಆಧಾರ್ ಸಂಖ್ಯೆಯನ್ನು ಬಳಸಿ ತಮ್ಮ ಬ್ಯಾಲೆನ್ಸ್ ಪರಿಶೀಲಿಸಬಹುದು. ಈಗ ಆಧಾರ್ ಸಂಖ್ಯೆಯನ್ನು ಬಳಸಿಕೊಂಡು ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಬಹುದು.

ಹಂತ 1: ಇದಕ್ಕಾಗಿ ನೀವು ಬ್ಯಾಂಕ್‌ಗೆ ರಿಜಿಸ್ಟರ್ ಆದ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ *99*99*1# ಅನ್ನು ಡಯಲ್ ಮಾಡಿ

ಹಂತ 2: 12 ಅಂಕಿಗಳ ಆಧಾರ್ ಕಾರ್ಡ್ ಸಂಖ್ಯೆಯನ್ನು ಟೈಪ್ ಮಾಡಿ ನಮೂದಿಸಿ.

ಹಂತ 3: ಪರಿಶೀಲನೆಗಾಗಿ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ಮತ್ತೊಮ್ಮೆ ನಮೂದಿಸಿ.

ಹಂತ 4: ಆಗ ನಿಮಗೆ ಯುಐಡಿಎಐನಿಂದ ಫ್ಲಾಶ್ ಎಸ್ಎಂಎಸ್ ನೋಟಿಫಿಕೇಶನ್ ಬರುತ್ತದೆ.

ಹಂತ 5: ನೀವು ಪಡೆದ ನೋಟಿಫಿಕೇಶನ್‌ನಲ್ಲಿ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ವಿವರ ಲಭ್ಯವಿರಲಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.