ಕೇಂದ್ರ ಸರ್ಕಾರದ ಮಹತ್ವದ ಯೋಜನೆ ಜನೌಷಧ ಕೇಂದ್ರದಲ್ಲಿ ಸರಿಯಾದ ಔಷಧಿಗಳೇ ಸಿಗುತ್ತಿಲ್ಲ ಎಂದು ವರದಿಯಾಗಿದೆ. ಹೈ ಡಿಮ್ಯಂಡ್ ಇರುವ ಶುಗರ್, ಬಿಪಿ ಕಾಯಿಲೆಗಳಿಗೆ ಇಲ್ಲಿ ಔಷಧಿಗಳು ಲಭ್ಯವಿಲ್ಲ.
1650 ಔಷಧಗಳ ಪೈಕಿ ಕೇವಲ 650-700 ಮೆಡಿಸಿನ್ಗಳು ಮಾತ್ರ ಲಭ್ಯವಿದೆ. ಈ ಕೇಂದ್ರಗಳಲ್ಲಿ ಕಡಿಮೆ ದುಡ್ಡಿಗೆ ಮಾತ್ರೆಗಳು ಸಿಗುವ ಕಾರಣದಿಂದ ಹೆಚ್ಚು ಬೇಡಿಕೆ ಇದೆ. ಆದರೆ ಮೆಡಿಕಲ್ ಲಾಬಿಯಿಂದ ಔಷಧಗಳ ಕೊರತೆ ಉಂಟಾಗಿದೆ ಅನ್ನುವ ಅನುಮಾನವಿದೆ. ಬೇಡಿಕೆ ಮತ್ತು ಪೂರೈಕೆ ನಡುವೆ ಅಂತರ ಹೆಚ್ಚಿದೆ.
ಜನರಿಂದ ದೂರ ಆಗುತ್ತಿದೆ ಜನೌಷಧ..?
ದೇಶದಲ್ಲಿ 8,675 PM ಭಾರತೀಯ ಜನೌಷಧಿ ಕೇಂದ್ರ ಯೋಜನೆ ಕೇಂದ್ರಗಳಿದ್ದು, ರಾಜ್ಯದಲ್ಲಿ 850ಕ್ಕೂ ಅಧಿಕ ಕೇಂದ್ರಗಳಿವೆ. ದೇಶವ್ಯಾಪಿ ವರ್ಷಕ್ಕೆ 680 ಕೋಟಿ ವಹಿವಾಟು ಆಗುತ್ತಿದ್ದು, ಕರ್ನಾಟಕದ ಪಾಲು 25% ಇದೆ.
ಪರಿಸ್ಥಿತಿ ಹೀಗಿರುವಾಗ ಸಕ್ಕರೆ ಕಾಯಿಲೆ, ರಕ್ತದೊತ್ತಡ ಕಾಯಿಲೆಗಳಿಗೆ ಅಗತ್ಯವಿರುವ ಔಷಧಗಳೇ ಲಭ್ಯವಾಗುತ್ತಿಲ್ಲ. ಈ ಮಾತ್ರೆಗಳಿಗೆ 10ರಲ್ಲಿ 7 ಜನರಿಂದ ಬೇಡಿಕೆ ಇದೆ. ಆದರೆ, ಇವುಗಳು 4 ತಿಂಗಳಿಗೊಮ್ಮೆ ಪೂರೈಕೆ ಆಗುತ್ತಿವೆ. ಇದರಿಂದ ಸಕಾಲಕ್ಕೆ ಔಷಧ ಸಿಗದೆ ಜನ ಪರದಾಡುವಂತಾಗಿದೆ.