ದಿನಕ್ಕೆ ಒಂದು ಸೇಬನ್ನು ತಿನ್ನುವುದರಿಂದ ರಕ್ತದೊತ್ತಡದ ಮಟ್ಟ ತಗ್ಗುತ್ತದೆ ಎನ್ನುವ ಸಂಗತಿ, ಆಸ್ಟ್ರೇಲಿಯಾದ ತಜ್ಞರು ನಡೆಸಿದ ಸಂಶೋಧನೆಯಿಂದ ಬಹಿರಂಗಗೊಂಡಿದೆ.
ಹೌದು, ಸಿಪ್ಪೆಯೊಂದಿಗೆ ಸೇಬುಗಳನ್ನು ತಿನ್ನುವುದರಿಂದ ಹೃದಯದ ಆರೋಗ್ಯ ಸುಧಾರಿಸುತ್ತದೆ. ಅಧಿಕ BP ಅನ್ನು ಕಡಿಮೆ ಮಾಡುವುದಲ್ಲದೆ ಕೆಲವೇ ವಾರಗಳಲ್ಲಿ ಬಿಪಿಯನ್ನು ನಿಯಂತ್ರಿಸಬಹುದು ಎಂದು ತಜ್ಞರು ಹೇಳುತ್ತಾರೆ. ಹಾಗಾಗಿ ದಿನಕ್ಕೊಂದು ಸೇಬುಹಣ್ಣು ತಿನ್ನುವುದನ್ನು ರೂಢಿಸಿಕೊಳ್ಳಿ ಎಂದು ತಜ್ಞರು ಸಲಹೆ ನೀಡಿದ್ದಾರೆ.
ಬಿಪಿ ಕಡಿಮೆ ಮಾಡುತ್ತೆ ಬೆಳ್ಳುಳ್ಳಿ:
ಇನ್ನು, ಬೆಳ್ಳುಳ್ಳಿ ಆಹಾರವಾಗಿ ಎಷ್ಟು ಪ್ರಯೋಜನಕಾರಿಯೋ ಆರೋಗ್ಯದ ವಿಚಾರದಲ್ಲೂ ಅಷ್ಟೇ ಉತ್ತಮ ಅಂಶಗಳನ್ನು ಇದು ಹೊಂದಿದೆ. ಬೆಳ್ಳುಳ್ಳಿಯ ಆರೋಗ್ಯ ಪ್ರಯೋಜನವನ್ನು ನೋಡುವುದಾದರೆ:
➤ಕೊಲೆಸ್ಟ್ರಾಲ್ ಸುಧಾರಿಸಲು ಅತ್ಯುತ್ತಮವಾಗಿದೆ.
➤ರೋಗನಿರೋಧಕ ಶಕ್ತಿಯನ್ನು ನೀಡುತ್ತದೆ.
➤ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಮತೋಲನಗೊಳಿಸುತ್ತದೆ.
➤ರಕ್ತದೊತ್ತಡ ನಿಯಂತ್ರಿಸಲು ಸಹಾಕಾರಿ.
➤ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.
➤ಕೆಮ್ಮು ಮತ್ತು ಶೀತವನ್ನು ಶಮನಗೊಳಿಸುತ್ತದೆ.