ಇಂದು ನೊಬೆಲ್ ಶಾಂತಿ ಪ್ರಶಸ್ತಿ ಪ್ರಕಟಗೊಳ್ಳಲಿದೆ. ಪ್ರಸಕ್ತ ಸಾಲಿನ ನೊಬೆಲ್ ಶಾಂತಿ ಪ್ರಶಸ್ತಿ ರೇಸ್ ನಲ್ಲಿ ಭಾರತೀಯ ಮೂಲದ, ಸುಳ್ಳುಸುದ್ದಿಗಳ ಸತ್ಯಾಸತ್ಯತೆ ಬಹಿರಂಗಪಡಿಸುವ ಆಲ್ಟ್ ನ್ಯೂಸ್ ಸಂಸ್ಥಾಪಕರಾದ ಮೊಹಮ್ಮದ್ ಜುಬೇರ್, ಪ್ರತೀಕ್ ಸಿನ್ಹಾ, ಸಾಮಾಜಿಕ ಕಾರ್ಯಕರ್ತರಾದ ಹಷ್ ಮಂದರ್ ಇದ್ದಾರೆ.
ಈ ಪ್ರಶಸ್ತಿ ಪ್ರಕಟವಾಗುವ ಮೂಲಕ ಈ ವರ್ಷದ ನೊಬೆಲ್ ಪ್ರಶಸ್ತಿ ವಿತರಣೆ ಮುಕ್ತಾಯಗೊಳ್ಳಲಿದ್ದು, ಈ ಹಿಂದೆ ಮದರ್ ತೆರೆಸಾ(1979) & ಸತ್ಯಾರ್ಥಿ (2014) ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ಲಭಿಸಿದೆ.
ನೊಬೆಲ್ ಪ್ರಶಸ್ತಿ ಪಡೆದ ಭಾರತೀಯರು!
1. ರವೀಂದ್ರನಾಥ್ ಟ್ಯಾಗೋರ್ (1913)- ಸಾಹಿತ್ಯ
2. ಡಾ.ಸಿ.ವಿ. ರಾಮನ್ (1930)- ಭೌತಶಾಸ್ತ್ರ –
3. ಡಾ.ಹರಗೋವಿಂದ ಖುರಾನಾ (1968)- ವೈದ್ಯಕೀಯ
4. ಮದರ್ ತೆರೆಸಾ (1979)- ಶಾಂತಿ
5. ಡಾ. ಎಸ್.ಚಂದ್ರಶೇಖರ್ (1983)- ಭೌತಶಾಸ್ತ್ರ
6. ಅಮರ್ತ್ಯ ಸೇನ್ (1998)- ಅರ್ಥಶಾಸ್ತ್ರ
7. ವೆಂಕಟರಮಣ ರಾಮಕೃಷ್ಣನ್ (2009)- ರಸಾಯನಶಾಸ್ತ್ರ
8. ಕೈಲಾಶ ಸತ್ಯಾರ್ಥಿ (2014)- ಶಾಂತಿ
9. ಅಭಿಜಿತ್ ಬ್ಯಾನರ್ಜಿ (2019)- ಅರ್ಥಶಾಸ್ತ್ರ