ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆ ಇಪಿಎಫ್ಒನ 7 ಕೋಟಿ ಚಂದಾದಾರರಿಗೆ ಈ ತಿಂಗಳ ಅಂತ್ಯದ ವೇಳೆಗೆ ಸಿಹಿ ಸುದ್ದಿ ಸಿಗಲಿದ್ದು, ಸರ್ಕಾರವು 2022ರ ಹಣಕಾಸು ವರ್ಷದ ಬಡ್ಡಿಯನ್ನು ಇಪಿಎಫ್ ಖಾತೆದಾರರ ಖಾತೆಗೆ ವರ್ಗಾಯಿಸಲಿದೆ. ಹೀಗಾಗಿ ಈ ಬಾರಿ ಶೇ 8.1 ರ ದರದಲ್ಲಿ ಬಡ್ಡಿ ಲಭ್ಯವಾಗಲಿದೆ.
ಹೌದು, ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆ ಮಾಹಿತಿಯ ಪ್ರಕಾರ, ನಿಮ್ಮ ಪಿಎಫ್ ಖಾತೆಯಲ್ಲಿ 10 ಲಕ್ಷ ರೂ ಇದ್ದರೆ ನಿಮಗೆ ಬಡ್ಡಿಯಾಗಿ 81,000 ರೂ ಸಿಗುತ್ತದೆ. ನಿಮ್ಮ ಪಿಎಪ್ ಖಾತೆಯಲ್ಲಿ 7 ಲಕ್ಷ ಇದ್ದರೆ ಬಡ್ಡಿಯಾಗಿ 56,700 ರೂ ಲಭಿಸುತ್ತದೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.