ಇತ್ತೀಚಿಗೆ ರೆಪೋ ಏರಿಕೆ ಮಾಡಿದ್ದ ಆರ್‌ಬಿಐ, ಬ್ಯಾಂಕ್ ಗ್ರಾಹಕರಿಗೆ ಶಾಕ್ ನೀಡಿದ್ದು ಇಂದು ಮತ್ತೆ ಪರಿಷ್ಕೃತ ರೆಪೋ ದರ ಪ್ರಕಟಿಸಿದ್ದು, ಮತ್ತೆ ಏರಿಕೆಯಾಗಿದ್ದು, ಇಎಂಐ ಮತ್ತು ಬಡ್ಡಿದರಗಳು ಮತ್ತಷ್ಟು ಏರಿಕೆಯಾಗಲಿದೆ.
ಏರುತ್ತಿರುವ ಹಣದುಬ್ಬರ, ಜಾಗತಿಕ ಹೆಡ್ ವಿಂಡ್ ಗಳು ಮತ್ತು ಅದರ ದಾಖಲೆಯ ಕನಿಷ್ಠ ಮಟ್ಟಕ್ಕೆ ರೂಪಾಯಿಯ ಕುಸಿತ ಬಗ್ಗೆ ಹೆಚ್ಚುತ್ತಿರುವ ಕಳವಳಗಳ ಮಧ್ಯೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಹಣಕಾಸು ನೀತಿ ಸಮಿತಿ (ಎಂಪಿಸಿ) ಶುಕ್ರವಾರ ರೆಪೊ ದರವನ್ನು 50 ಬೇಸಿಸ್ ಪಾಯಿಂಟ್‌ಗಳಿಂದ (ಬಿಪಿಎಸ್) 5.90ಕ್ಕೆ ಹೆಚ್ಚಿಸಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಘೋಷಿಸಿದ್ದಾರೆ.
ಈ ಹಣಕಾಸು ಆರ್‌ಬಿಐ ರೆಪೊ ದರವನ್ನು ಸತತ 4ನೇ ಬಾರಿಗೆ ಹೆಚ್ಚಿಸಿದೆ. ಇದಕ್ಕೂ ಮೊದಲು, ಆರ್‌ಬಿಐ ರೆಪೊ ದರವನ್ನು ಮೇ ತಿಂಗಳಲ್ಲಿ 40 ಬಿಪಿಎಸ್ ಮತ್ತು ಜೂನ್ ಮತ್ತು ಆಗಸ್ಟ್‌ನಲ್ಲಿ 50 ಬಿಪಿಎಸ್ ಹೆಚ್ಚಿಸಿತ್ತು. ಅಂತರಾಷ್ಟ್ರೀಯ ಮಾರುಕಟ್ಟೆ ಹಾಗೂ ಹಣದುಬ್ಬರ ಮೇಲೆ ನಿಯಂತ್ರಣ ಸಾಧಿಸಲು ಈ ಕ್ರಮಕ್ಕೆ ಮುಂದಾಗಲಾಗಿದೆ. ಇನ್ನು, ಆರ್‌ಬಿಐ ರೆಪೊ ದರ ಹೆಚ್ಚಳದಿಂದ ಇಎಂಐ ಮತ್ತು ಬಡ್ಡಿದರಗಳು ಮತ್ತಷ್ಟು ಏರಿಕೆಯಾಗಲಿದೆ.