72 ಗಂಟೆಯಲ್ಲಿ ಮನೆ ಬಾಗಿಲಿಗೆ ಈ ಸೇವೆ: ರಾಜ್ಯ ಸರ್ಕಾರ ಮಹತ್ವದ ನಿರ್ಧಾರ

ಬಡತನ ರೇಖೆಗಿಂತ ಕೆಳಗಿರುವವರು ಪಿಂಚಣಿಗೆ ಅರ್ಜಿ ಸಲ್ಲಿಕೆ ಮಾಡಿದ 72 ಗಂಟೆಗಳೊಳಗೆ ಮಂಜೂರಾತಿ ಜಾರಿಗೆ ಮಾಡುವ ವ್ಯವಸ್ಥೆ ತರಲಾಗುತ್ತದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ. ಹೌದು, ಈ ಕುರಿತು ಮಾತನಾಡಿರುವ ಸಚಿವ ಆರ್.ಅಶೋಕ್,…

Minister R Ashok vijayaprabha

ಬಡತನ ರೇಖೆಗಿಂತ ಕೆಳಗಿರುವವರು ಪಿಂಚಣಿಗೆ ಅರ್ಜಿ ಸಲ್ಲಿಕೆ ಮಾಡಿದ 72 ಗಂಟೆಗಳೊಳಗೆ ಮಂಜೂರಾತಿ ಜಾರಿಗೆ ಮಾಡುವ ವ್ಯವಸ್ಥೆ ತರಲಾಗುತ್ತದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.

ಹೌದು, ಈ ಕುರಿತು ಮಾತನಾಡಿರುವ ಸಚಿವ ಆರ್.ಅಶೋಕ್, ಮಧ್ಯವರ್ತಿಗಳ ಕಾಟವಿಲ್ಲದೆ, ಫಲಾನುಭವಿಗಳಿಗೆ ಅಲೆದಾಟ ಇಲ್ಲದೆ 72 ಗಂಟೆಗಳೊಳಗೆ ಅರ್ಹರಿಗೆ ಪಿಂಚಣಿ ಮಂಜೂರು ಮಾಡಲಾಗುವುದು. ಇದಕ್ಕಾಗಿ ಫಲಾನಿಭವಿಗಳು ‘ಹಲೋ ಕಂದಾಯ ಸಚಿವರೇ’ ಸಹಾಯವಾಣಿ ಸಂಖ್ಯೆ 155245 ಸಂಖ್ಯೆಗೆ ಕರೆ ಮಾಡಿದರೆ ಸಾಕು, ಎಂದು ವಿವರಿಸಿದರು.

ಇನ್ನು, ಅಸಹಾಯಕರು ದೂರವಾಣಿ ಮೂಲಕ ಪಿಂಚಣಿ ಕೇಳಿದರೂ ಆಧಾರ್‌ ಕಾರ್ಡ್‌, ಮನೆಯ ಫೋಟೋ ದಾಖಲೆ ಪಡೆದು ಅವರಿಗೆ ಹಣ ಸಿಗುವ ವ್ಯವಸ್ಥೆ ಮಾಡಲಾಗುವುದು. ಪಿಂಚಣಿಯ ಯಾವುದೇ ಸಮಸ್ಯೆಯನ್ನು ಪರಿಹರಿಸಿ ಮನೆಬಾಗಿಲಿಗೆ ಸೇವೆ ನೀಡಲು ಸರ್ಕಾರ ವ್ಯವಸ್ಥೆ ಮಾಡಿಕೊಂಡಿದೆ. ಇದಕ್ಕಾಗಿ ಟೋಲ್‌ ಫ್ರೀ ನಂಬರ್‌ ಕೂಡ ಇದೆ ಎಂದು ಸಚಿವ ಆರ್ ಅಶೋಕ್‌ ತಿಳಿಸಿದ್ದಾರೆ.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.