ಜನಪ್ರಿಯ ಚಾಟಿಂಗ್ ಫ್ಲಾಟ್ ಫಾರ್ಮ್ ‘WhatsApp’ ತನ್ನ ಬಳಕೆದಾರರಿಗೆ ಒಂದಲ್ಲ ಒಂದು ಹೊಸ ಫೀಚರ್ ಗಳನ್ನು ಪರಿಚಯ ಮಾಡುತ್ತಿರುತ್ತದೆ. ಇದೀಗ 2GB ಫೈಲ್ ಹಂಚಿಕೆ, 512 ಗುಂಪು ಸದಸ್ಯರಿರುವ ಹೊಸ ಸೇವೆ ಆರಂಭಿಸಿದ್ದು, ಈ ಫೀಚರ್ ಲೇಟೆಸ್ಟ್ ಅಪ್ಡೇಟ್ ಗಳಲ್ಲಿ ಲಭ್ಯವಿದೆ.
ಹೌದು, ‘WhatsApp’ ನಲ್ಲಿ ಈ ಮೊದಲು ಫೈಲ್ ಹಂಚಿಕೆ 100MB ಮಿತಿ ಹೊಂದಿತ್ತು. ಈಗ 2GBಗೆ ಹೆಚ್ಚಿಸಲಾಗಿದ್ದು, ಗ್ರೂಪ್ ಸದಸ್ಯರ ಸಂಖ್ಯೆ ಹೆಚ್ಚಿಸಲು ಬಳಕೆದಾರರಿಂದ ಬಂದ ಮನವಿ ಹಿನ್ನೆಲೆ, ಅದನ್ನು 512ಕ್ಕೆ ಏರಿಸಲಾಗಿದೆ ಎಂದು ಕಂಪನಿ ಹೇಳಿದೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.