ಅರ್ಧಕ್ಕೆ ಸ್ಕೂಲ್ ಬಿಟ್ಟಿದ್ದ ವ್ಯಕ್ತಿ ಇಂದು 4,372 ಕೋಟಿಯ ಒಡೆಯ..!

ಟೆನಿಸ್‌ನ ದಿಗ್ಗಜ ಆಟಗಾರರ ಸ್ವಿಸ್ ನ ರೋಜರ್ ಫೆಡರರ್ ವೃತ್ತಿ ಬದುಕಿಗೆ ವಿದಾಯ ನಿವೃತ್ತಿ ಘೋಷಿಸಿದ್ದಾರೆ. ಇವರು 16 ನೇ ವಯಸ್ಸಿನಲ್ಲಿ ಶಾಲೆಯನ್ನು ಬಿಡಬೇಕಾಯಿತು. ಫೆಡರರ್ ಟೆನಿಸ್ ಆಟವನ್ನು ಮುಂದುವರಿಸಬೇಕಾಗಿದ್ದರಿಂದ ಶಾಲೆಯನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. 21…

Roger Federer

ಟೆನಿಸ್‌ನ ದಿಗ್ಗಜ ಆಟಗಾರರ ಸ್ವಿಸ್ ನ ರೋಜರ್ ಫೆಡರರ್ ವೃತ್ತಿ ಬದುಕಿಗೆ ವಿದಾಯ ನಿವೃತ್ತಿ ಘೋಷಿಸಿದ್ದಾರೆ. ಇವರು 16 ನೇ ವಯಸ್ಸಿನಲ್ಲಿ ಶಾಲೆಯನ್ನು ಬಿಡಬೇಕಾಯಿತು. ಫೆಡರರ್ ಟೆನಿಸ್ ಆಟವನ್ನು ಮುಂದುವರಿಸಬೇಕಾಗಿದ್ದರಿಂದ ಶಾಲೆಯನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ.

21 ನೇ ವಯಸ್ಸಿನಲ್ಲಿ ಫೆಡರರ್ ತನ್ನ ಮೊದಲ ವಿಂಬಲ್ಡನ್ ಪ್ರಶಸ್ತಿಯನ್ನು ಗೆಲ್ಲುವುದರೊಂದಿಗೆ, ಜೂಲಿಯೆಟ್ ಎಂಬ ಹೆಸರಿಸಿದ ಹಸುವನ್ನು ಉಡುಗೊರೆಯಾಗಿ ಪಡೆದಿದ್ದು, ಈಗ ಇವರ ಆಸ್ತಿ ಮೌಲ್ಯ 4372 ಕೋಟಿ ರೂ ಆಗಿದೆ.

ರೋಜರ್ ಫೆಡರರ್ ಗೆ ಶುಭಕೋರಿದ ಸಚಿನ್:

Vijayaprabha Mobile App free

ವೃತ್ತಿ ಜೀವನಕ್ಕೆ ವಿದಾಯ ಹೇಳಿದ ಸ್ವಿಸ್ ಟೆನಿಸ್ ಆಟಗಾರ ರೋಜರ್ ಫೆಡರರ್ ಗೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಶುಭಕೋರಿದ್ದಾರೆ.

ಹೌದು, ‘ಫೆಡರರ್ ಅವರೇ.. ನೀವು ಎಂಥಾ ಟೆನಿಸ್ ಆಟಗಾರ! ನಿಮ್ಮ ಟೆನಿಸ್ ಬ್ರಾಂಡ್ ಜೊತೆ ನಮಗೆ ಪ್ರೀತಿ ಬೆಳೆಸಿತ್ತು. ನಿಧಾನವಾಗಿ ಟೆನಿಸ್ ನಮಗೆ ಹವ್ಯಾಸವೂ ಆಯಿತು. ಹವ್ಯಾಸಗಳಿಗೆ ಎಂದಿಗೂ ನಿವೃತ್ತಿ ಎಂಬುದಿಲ್ಲ. ಅವು ನಮ್ಮ ಜೀವನದ ಭಾಗವಾಗಿರುತ್ತವೆ. ವೃತ್ತಿಯಲ್ಲಿ ಸಾಕಷ್ಟು ಸ್ಮೃತಿ ಮೂಡಿಸಿದ್ದ ನಿಮಗೆ ಧನ್ಯವಾದ’ ಎಂದು ಸಚಿನ್ ಟ್ವೀಟ್ ಮಾಡಿದ್ದಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.