ಉಕ್ರೇನ್ ಬಿಕ್ಕಟ್ಟು ಆರಂಭವಾದ ಬಳಿಕ ರಷ್ಯಾ ಮತ್ತು ಅರ್ಜೆಂಟೀನಾ ದೇಶಗಳು ಭಾರತಕ್ಕೆ ಪ್ರಮುಖ ಸೂರ್ಯಕಾಂತಿ ಎಣ್ಣೆ ಪೂರೈಕೆದಾರ ರಾಷ್ಟ್ರಗಳಾಗಿ ಹೊರಹೊಮ್ಮಿವೆ. ಈ ಹಿನ್ನೆಲೆ ಭಾರತಕ್ಕೆ ಎಣ್ಣೆ ಹೆಚ್ಚು ಪೂರೈಕೆಯಾಗುತ್ತಿದ್ದು, ತಾಳೆ ಎಣ್ಣೆಯ ಬೆಲೆ ಪ್ರತಿ ಮೆಟ್ರಿಕ್ ಟನ್‌ಗೆ 1800-1900 ಡಾಲರ್ ಇದ್ದದ್ದು, 1,000-1100 ಡಾಲರ್‌ಗಳಿಗೆ ಇಳಿದಿದೆ. ಇದರಿಂದ ಭಾರತವು ವಿದೇಶದಿಂದ ಹೆಚ್ಚು ತಾಳೆ ಎಣ್ಣೆಯನ್ನು ಆಮದು ಮಾಡಿಕೊಳ್ಳುತ್ತಿದೆ.
ಹೌದು, ಕಳೆದ ಜುಲೈನಲ್ಲಿ 530,420 ಟನ್‌ಗಳಷ್ಟು ಮತ್ತು ಆಗಸ್ಟ್‌ನಲ್ಲಿ 994,997 ಟನ್‌ಗಳಷ್ಟು ತಾಳೆ ಎಣ್ಣೆಯನ್ನು ಭಾರತ ಆಮದು ಮಾಡಿಕೊಂಡಿದೆ. ಆಗಸ್ಟ್ ತಿಂಗಳಲ್ಲಿ ಭಾರತವು ಬರೋಬ್ಬರಿ 1.35 ಲಕ್ಷ ಟನ್ ಸೂರ್ಯಕಾಂತಿ ಎಣ್ಣೆಯನ್ನು ಆಮದು ಮಾಡಿಕೊಂಡಿದೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಲೆ ಇಳಿಕೆಯಾಗಿರುವುದರಿಂದ ಮತ್ತು ಅಡುಗೆ ಎಣ್ಣೆ ದಾಸ್ತಾನು ಹೆಚ್ಚಾಗಿರುವುದರಿಂದ ಚಿಲ್ಲರೆ ಮಾರುಕಟ್ಟೆಯಲ್ಲಿ 10% ರಿಂದ 20 % ಬೆಲೆ ಕಡಿಮೆಯಾಗಬಹುದು ಎಂದು ತಜ್ಞರು ಹೇಳುತ್ತಿದ್ದಾರೆ.