ವಿರಾಟ್ ಶತಕ, ಭುವಿ ಮ್ಯಾಜಿಕ್ : ಅಫ್ಘಾನಿಸ್ತಾನ ವಿರುದ್ಧದ ಭಾರತಕ್ಕೆ 101 ರನ್ ಗಳ ಭರ್ಜರಿ ಗೆಲುವು

ಏಷ್ಯಾ ಕಪ್: ಅಫ್ಘಾನಿಸ್ತಾನ ವಿರುದ್ಧದ ಸೂಪರ್ 4 ಪಂದ್ಯದಲ್ಲಿ ಟೀಂ ಇಂಡಿಯಾ 101 ರನ್ ಗೆಲುವು ಸಾಧಿಸಿದ್ದು, ಶ್ರೀಲಂಕಾ ಹಾಗೂ ಪಾಕ್ ವಿರುದ್ಧ ಸೋತಿರುವ ಕಾರಣ, ಟೂರ್ನಿಯಿಂದ ಹೊರಬಿದ್ದಿದೆ. ಹೌದು, ಟೀಮ್ ಇಂಡಿಯಾ ನೀಡಿದ…

India and Afghanistan

ಏಷ್ಯಾ ಕಪ್: ಅಫ್ಘಾನಿಸ್ತಾನ ವಿರುದ್ಧದ ಸೂಪರ್ 4 ಪಂದ್ಯದಲ್ಲಿ ಟೀಂ ಇಂಡಿಯಾ 101 ರನ್ ಗೆಲುವು ಸಾಧಿಸಿದ್ದು, ಶ್ರೀಲಂಕಾ ಹಾಗೂ ಪಾಕ್ ವಿರುದ್ಧ ಸೋತಿರುವ ಕಾರಣ, ಟೂರ್ನಿಯಿಂದ ಹೊರಬಿದ್ದಿದೆ.

ಹೌದು, ಟೀಮ್ ಇಂಡಿಯಾ ನೀಡಿದ 213 ರನ್ ಗುರಿ ಬೆನ್ನತ್ತಿದ್ದ ಅಫ್ಘಾನಿಸ್ತಾನ, 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 111 ರನ್ ಕಲೆಹಾಕಿ 101 ರನ್ ಗಳ ಅಂತರದಿಂದ ಸೋಲೊಪ್ಪಿಕೊಂಡಿತು. ಅಫ್ಘಾನಿಸ್ತಾನ ಪರ ಇಬ್ರಾಹಿಂ ಜದ್ರಾನ್ 64 ರನ್, ರಶೀದ್ ಖಾನ್ 15, ಮುಜೀಬ್ ಉರ್ ರೆಹಮಾನ್ 18 ರನ್ ಗಳಿಸಿದರು. ಭಾರತ ಪರ ಭುವನೇಶ್ವರ್ ಕುಮಾರ್ 5, ರವಿಚಂದ್ರನ್ ಅಶ್ವಿನ್, ದೀಪಕ್ ಹೂಡಾ, ಅರ್ಷದೀಪ್ ಸಿಂಗ್ ತಲಾ ಒಂದು ವಿಕೆಟ್ ಪಡೆದರು.

ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್ ಮಾಡಿದ್ದ ಭಾರತ 20 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು 212 ರನ್ ಕಲೆಹಾಕಿತು. ಮಾಜಿ ನಾಯಕ ವಿರಾಟ್ ಕೊಹ್ಲಿ ಶತಕ ಬಾರಿಸುವ ಮೂಲಕ ತಂಡದ ಸ್ಕೋರ್ ಹೆಚ್ಚಿಸಿದರು. 61 ಎಸೆತಗಳಲ್ಲಿ ಕೊಹ್ಲಿ 122 ರನ್ ಬಾರಿಸಿದರು. ನಾಯಕ ರಾಹುಲ್ 62, ಸೂರ್ಯಕುಮಾರ್ 6, ರಿಷಬ್ ಪಂತ್ 20 ರನ್ ಗಳಿಸಿದರು. ಅಫ್ಘಾನಿಸ್ತಾನ ಪರ ಫರೀದ್ ಅಹ್ಮದ್ 2 ವಿಕೆಟ್ ಪಡೆದರು.

Vijayaprabha Mobile App free

ಇನ್ನು, ಅಫ್ಘಾನಿಸ್ತಾನ ವಿರುದ್ಧ ಭರ್ಜರಿ ಶತಕ ಸಿಡಿಸಿದ ಮಾಜಿ ನಾಯಕ ವಿರಾಟ್ ಕೊಹ್ಲಿ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.