ಬಿಗ್ ಬಾಸ್ ಕನ್ನಡ ಒಟಿಟಿ ಶೋನ ಅಂತಿಮ ಘಟ್ಟದಲ್ಲಿ ಸ್ಪರ್ಧಿಗಳ ನಡುವಿನ ಪೈಪೋಟಿ ಕೂಡ ಇನ್ನೊಂದು ಹಂತಕ್ಕೆ ಏರಿದೆ. ಸದ್ಯ ಬಿಗ್ ಬಾಸ್ ಮನೆಯಲ್ಲಿ 9 ಸ್ಪರ್ಧಿಗಳು ಇದ್ದು, ಐದನೇ ವಾರಕ್ಕೆ ಶೋ ಕಾಲಿಟ್ಟಿದ್ದು, ಆರನೇ ವಾರದಲ್ಲಿ ಫಿನಾಲೆ ನಡೆಯಲಿದೆ.
ಅಲ್ಲಿಯವರೆಗೂ ಯಾರು ತಮ್ಮ ಸ್ಥಾನ ಉಳಿಸಿಕೊಳ್ಳುತ್ತಾರೆ ಎಂಬುದು ಕೌತುಕದ ಪ್ರಶ್ನೆ, ವಿಶೇಷ ಏನೆಂದರೆ, ರಾಕೇಶ್ ಅಡಿಗ, ರೂಪೇಶ್ ಶೆಟ್ಟಿ ಮತ್ತು ಸಾನ್ಯಾ ಐಯ್ಯರ್ ಅವರು ನೇರವಾಗಿ ಫಿನಾಲೆ ವಾರಕ್ಕೆ ಟಿಕೆಟ್ ಪಡೆದಿದ್ದಾರೆ.
ಇನ್ನುಳಿದ ಸ್ಪರ್ಧಿಗಳಿಗೆ ಸವಾಲು ಎದುರಾಗಿದ್ದು, ಐದನೇ ವಾರದಲ್ಲಿ ಎಲ್ಲರೂ ಹೆಚ್ಚು ಶ್ರಮ ಹಾಕಿ ಆಡಬೇಕಿದೆ. ಬಿಗ್ ಬಾಸ್ ಕನ್ನಡ ಒಟಿಟಿ’ ಶೋ ಮುಗಿಯಲು ಇನ್ನು ಕೆಲವೇ ದಿನಗಳ ಮಾತ್ರ ಬಾಕಿ ಉಳಿದಿದ್ದು, ಈ ಅಂತಿಮ ಘಟ್ಟದಲ್ಲಿ ಆಟದ ಮಜಾ ಹೆಚ್ಚುತ್ತಿದೆ
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.




