ಬಡವರು ಹೆಚ್ಚಾಗಿ ವಾಸ ಮಾಡುವ ಹಾಗೂ ಭೂ ರಹಿತ ಕಾರ್ಮಿಕರು ಹೆಚ್ಚಾಗಿರುವ ರಾಜ್ಯದ ಗ್ರಾಮೀಣ ಭಾಗಗಳಲ್ಲಿ ಸಮಗ್ರ ಮಕ್ಕಳ ಅಭಿವೃದ್ಧಿ ಯೋಜನೆಯಡಿ ಹೊಸದಾಗಿ 4,244 ಅಂಗನವಾಡಿ ಕೇಂದ್ರಗಳನ್ನು ಆರಂಭಿಸಲು ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ.
ಹೌದು, ಕಡಿಮೆ ಆದಾಯವಿದ್ದು, ಹೆಚ್ಚು ಜನ ವಾಸಿಸುತ್ತಿರುವ ನಗರ ಪ್ರದೇಶದಲ್ಲಿ 2589 ಹಾಗೂ ಭೂರಹಿತ ವಲಸೆ ಕಾರ್ಮಿಕರು ಹೆಚ್ಚಿರುವ ಗ್ರಾಮೀಣ ಪ್ರದೇಶದಲ್ಲಿ 1655 ಅಂಗನವಾಡಿ ಕೇಂದ್ರಗಳನ್ನು ಆರಂಭಿಸುವಂತೆ ರಾಜ್ಯ ಸರ್ಕಾರ ಆದೇಶಿಸಿದೆ.
ಇನ್ನು ಈ ಅಂಗನವಾಡಿಗಳ ಸ್ಥಾಪನೆಗಾಗಿ ಒಟ್ಟು 268.98 ಕೋಟಿ ಮೀಸಲಿರಿಸಲಾಗಿದ್ದು, ಮಕ್ಕಳ ಸಮಗ್ರ ಅಭಿವೃದ್ಧಿ ಯೋಜನೆಯಡಿಯಲ್ಲಿ ಈ ಅಂಗನವಾಡಿ ಕೇಂದ್ರಗಳ ನಿರ್ಮಾಣ ಮಾಡಲಾಗುತ್ತದೆ. ಇದರಿಂದ 8,100 ಮಹಿಳೆಯರಿಗೆ ಈ ಮೂಲಕ ಉದ್ಯೋಗ ದೊರೆಯಲಿದೆ.