ಯಾವುದೇ ಕಾರಣಕ್ಕೂ ಪಲಾಯನ ಮಾಡಲ್ಲ: ಮುರುಘಾ ಶ್ರೀ

ಚಿತ್ರದುರ್ಗ: ಅರೆಸ್ಟ್ ಆಗಿದ್ದಾರೆ ಎಂಬ ಸುದ್ದಿಯ ನಡುವೆ ಮುರುಘಾ ಶ್ರೀ ಮಠಕ್ಕೆ ವಾಪಾಸ್ ಆಗಿದ್ದು, ಹಾವೇರಿಯಿಂದ ಚಿತ್ರದುರ್ಗದ ಮಠಕ್ಕೆ ಆಗಮಿಸಿರುವ ಮುರುಘಾ ಸ್ವಾಮೀಜಿ ಬೆಂಬಲಿಗರನ್ನು ಉದ್ದೇಶಿಸಿ ಯಾವುದೇ ಕಾರಣಕ್ಕೂ ಪಲಾಯನ ಮಾಡಲ್ಲ. ನಾನು ಆರೋಪ…

Muruga Math Shri

ಚಿತ್ರದುರ್ಗ: ಅರೆಸ್ಟ್ ಆಗಿದ್ದಾರೆ ಎಂಬ ಸುದ್ದಿಯ ನಡುವೆ ಮುರುಘಾ ಶ್ರೀ ಮಠಕ್ಕೆ ವಾಪಾಸ್ ಆಗಿದ್ದು, ಹಾವೇರಿಯಿಂದ ಚಿತ್ರದುರ್ಗದ ಮಠಕ್ಕೆ ಆಗಮಿಸಿರುವ ಮುರುಘಾ ಸ್ವಾಮೀಜಿ ಬೆಂಬಲಿಗರನ್ನು ಉದ್ದೇಶಿಸಿ ಯಾವುದೇ ಕಾರಣಕ್ಕೂ ಪಲಾಯನ ಮಾಡಲ್ಲ. ನಾನು ಆರೋಪ ಮುಕ್ತನಾಗುತ್ತೇನೆ ಎಂದು ಮುರುಘಾ ಶ್ರೀ ಹೇಳಿದರು.

ಹೌದು, ಈ ಕುರಿತು ಮಾತನಾಡಿದ ಮುರುಘಾ ಶ್ರೀಗಳು, ಮಠದ ಶ್ರೀಗಳ ನೋವು ನಮ್ಮ ನೋವೆಂದು ತಿಳಿದಿರುವ ನಿಮಗೆ ಧನ್ಯವಾದಗಳು. ನಾವೆಲ್ಲರೂ ಸೇರಿ ಈ ಕಳಂಕದ ವಿರುದ್ಧ ಹೊರಾಡೋಣ. ಮಠದ ವಿರುದ್ಧ ಪಿತೂರಿ ನಡೆಯುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಮಠದ ಒಳಗೆ ನಡೆಯುತ್ತಿದ್ದ ಪಿತೂರಿ ಈಗ ಹೊರಗೆ ನಡೆಯುತ್ತಿದೆ. ನಾವು ಕಾನೂನಿಗೆ ಸಂಪೂರ್ಣ ಸಹಕಾರ ಕೊಡುತ್ತೇವೆ. ಯಾವುದೇ ಕಾರಣಕ್ಕೂ ಪಲಾಯನ ಮಾಡಲ್ಲ. ನಾನು ಆರೋಪ ಮುಕ್ತನಾಗುತ್ತೇನೆ ಎಂದು ಮುರುಘಾ ಶ್ರೀ ಹೇಳಿದರು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.