ಮಾಜಿ ಪ್ರಿಯಕರನ ಜೊತೆ ಸುತ್ತಾಡುತ್ತಿರುವ ವಿಶ್ವ ಸುಂದರಿ ಸುಷ್ಮಿತಾ ಸೇನ್: ಲಲಿತ್ ಮೋದಿ ಕಥೆಯೇನು..?

ಕೆಲ ವರ್ಷಗಳ ಹಿಂದೆ ಮಾಜಿ ಕ್ರಿಕೆಟರ್ ಜೊತೆ ಸುಷ್ಮಿತಾ ಸೇನ್ ಪ್ರೇಮಾಯಣ ನಡೆದಿದ್ದು ಎಲ್ಲರಿಗು ತಿಳಿದ ವಿಷಯ. ನಂತರ ತನಗಿಂತ ಚಿಕ್ಕ ವಯಸ್ಸಿನ ರೊಹ್ಮನ್ ಶಾಲ್ ಜೊತೆ ಡೇಟಿಂಗ್ ಶುರು ಮಾಡಿದ್ದು, ಆತನಿಂದ ದೂರಾದ…

Sushmita Sen vijayaprabha news

ಕೆಲ ವರ್ಷಗಳ ಹಿಂದೆ ಮಾಜಿ ಕ್ರಿಕೆಟರ್ ಜೊತೆ ಸುಷ್ಮಿತಾ ಸೇನ್ ಪ್ರೇಮಾಯಣ ನಡೆದಿದ್ದು ಎಲ್ಲರಿಗು ತಿಳಿದ ವಿಷಯ. ನಂತರ ತನಗಿಂತ ಚಿಕ್ಕ ವಯಸ್ಸಿನ ರೊಹ್ಮನ್ ಶಾಲ್ ಜೊತೆ ಡೇಟಿಂಗ್ ಶುರು ಮಾಡಿದ್ದು, ಆತನಿಂದ ದೂರಾದ ಮೇಲೆ ಲಲಿತ್ ಮೋದಿಗೆ ಹತ್ತಿರವಾಗಿದ್ದರು. ಇನ್ನು ಲಲಿತ್ ಮೋದಿ ಜೊತೆ ಡೇಟಿಂಗ್ ನೋಡಿ ಜನರು ಅಚ್ಚರಿ ಪಟ್ಟಿದ್ದರು. ಲಲಿತ್ ಮೋದಿ ಅವರೊಂದಿಗೆ ಸುತ್ತಾಡಿದ ಹಲವು ಪೋಸ್ಟ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದಕ್ಕೆ ಹಲವರು ಪರ ವಿರೋಧ ವ್ಯಕ್ತ ಪಡಿಸಿದ್ದೂ ಇದೆ.

ಆದರೆ ಇದೀಗ ಮಾಜಿ ವಿಶ್ವ ಸುಂದರಿ ಸುಷ್ಮಿತಾ ಸೇನ್ ಮತ್ತೆ ತಮ್ಮ ಹಳೇ ಬಾಯ್‌ಫ್ರೆಂಡ್ ರೊಹ್ಮನ್ ಸಾವಲ್ ಜೊತೆ ಸುತ್ತಾಡುತ್ತಿದ್ದು, ಇದನ್ನು ನೋಡಿ ಕೆಲವರು ಅಯ್ಯೋ ಲಲಿತ್ ಮೋದಿ ಕಥೆ ಏನ್ ಆಯ್ತು? ಎಂದು ಕೇಳುತ್ತಿದ್ದಾರೆ. ಲಲಿತ್ ಮೋದಿ ಜೊತೆ ಡೇಟಿಂಗ್‌ನಲ್ಲಿರುವಾಗಲೇ, ಸುಷ್ಮಿತಾ ಸೇನ್ ಇತ್ತೀಚೆಗೆ ಪದೇ ಪದೇ ಹಳೇ ಬಾಯ್‌ಫ್ರೆಂಡ್ ಜೊತೆ ಕ್ಯಾಮೆರಾಗಳ ಕಣ್ಣಿಗೆ ಬಿದ್ದಿದ್ದಾರೆ.

Vijayaprabha Mobile App free

ಸುಷ್ಮಿತಾ ಈಗ ಸಿನಿಮಾಗಳ ವಿಚಾರಕ್ಕಿಂತ ಹೆಚ್ಚು ವೈಯಕ್ತಿಕ ವಿಚಾರಗಳಿಂದ ಹೆಚ್ಚು ಸುದ್ದಿಯಾಗುತ್ತಿದ್ದು, ಮಾಜಿ ಪ್ರಿಯಕರನ ಜೊತೆ ಸಿನಿಮಾ, ಶಾಪಿಂಗ್ ಅಂತ ಸುತ್ತಾಡುತ್ತಿರುವುದು ನೋಡಿ ಕೆಲವರು ಅಚ್ಚರಿ ವ್ಯಕ್ತಪಡಿಸಿದ್ದು, ಮತ್ತೆ ಕೆಲವರು ಬ್ರೇಕಪ್ ಆದಮೇಲೆ ಫ್ರೆಂಡ್ ಆಗಿ ಇರುವುದು ತಪ್ಪಾ? ಎಂದು ಕೇಳುತ್ತಿದ್ದಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.