ನಾಡು ಗೌರಿ-ಗಣೇಶ ಹಬ್ಬದ ಸಿದ್ದತೆಯಲ್ಲಿದ್ದು, ಬೆಂಗಳೂರಿಂದ ತಮ್ಮೂರಿಗೆ ಹಬ್ಬಕ್ಕೆ ತೆರಳುವ ಮಂದಿಗೆ ಸಾರಿಗೆ ಬಸ್ ಶಾಕ್ ನೀಡಿದ್ದು, ಈ ಬಾರಿ ಕೆಎಸ್ಆರ್ಟಿಸಿ ಬಸ್ ಸೌಲಭ್ಯ ಕೂಡಾ ಕಡಿಮೆ ಇದ್ದು, ಖಾಸಗಿ ಬಸ್‌ಗಳ ದರ ಮೂರು ಪಟ್ಟು ಹೆಚ್ಚಾಗಿದೆ.
ಹಬ್ಬದ ಮಜಾಕ್ಕೆ ಊರಿಗೆ ಹೊರಟವರಿಗೆ ಬಸ್ ಟಿಕೆಟ್ ದರ ಶಾಕ್ ನೀಡಿದ್ದು, ಗಣೇಶ ಚತುರ್ಥಿಗೆ 4-5 ದಿನ ಬಾಕಿ ಇರುವಂತೆಯೇ ಖಾಸಗಿ ಬಸ್‌ಗಳು ಪ್ರಯಾಣಿಕರಿಂದ ಸುಲಿಗೆಗೆ ನಿಂತಿವೆ. ಬೆಂಗಳೂರಿನಿಂದ ವಿವಿಧೆಡೆ ತೆರಳುವ ಖಾಸಗಿ ಬಸ್‌ಗಳ ಟಿಕೆಟ್ ದರ 2-3 ಪಟ್ಟು ಹೆಚ್ಚಳವಾಗಿದೆ.
ಖಾಸಗಿ ಬಸ್‌ಗಳ ಟಿಕೆಟ್ ದರ:
ಬೆಂಗಳೂರು-ಬೆಳಗಾವಿ: ಹಬ್ಬದ ದರ:1500-2000
ಬೆಂಗಳೂರು-ಹುಬ್ಬಳ್ಳಿ: ಹಬ್ಬದ ದರ:1300-2000
ಬೆಂಗಳೂರು-ಶಿವಮೊಗ್ಗ: ಹಬ್ಬದ ದರ: 900-1400
ಬೆಂಗಳೂರು-ಮಂಗಳೂರು: ಹಬ್ಬದ ದರ: 1100-1600
ಬೆಂಗಳೂರು -ದಾವಣಗೆರೆ: ಹಬ್ಬದ ದರ: 900 -1200
ಬೆಂಗಳೂರು-ಹೊಸಪೇಟೆ: ಹಬ್ಬದ ದರ: 1000-1400 ರೂ.ನಷ್ಟು ಟಿಕೆಟ್ ದರ ಹೆಚ್ಚಾಗಿದೆ.