ರಾಜ್ಯದಲ್ಲಿ 10 ದಿನಗಳಿಂದ ಕಡಿಮೆಯಾಗಿದ್ದ ವರುಣನ ಅಬ್ಬರ ಮತ್ತೆ ಹೆಚ್ಚಾಗುವ ಸಾಧ್ಯತೆಯಿದ್ದು, ಇಂದು ಮತ್ತು ನಾಳೆ ಸಾಧಾರಣ ಮಳೆಯಾಗಲಿದ್ದು, ಆಗಸ್ಟ್ 23 ಮತ್ತು 24ರಂದು ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.
ಹೌದು, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರ, ಮೈಸೂರು, ಶಿವಮೊಗ್ಗದಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಕರ್ನಾಟಕದ ನಾನಾ ಭಾಗಗಳಲ್ಲಿ ಶೀತಗಾಳಿ ಬೀಸುವ ಬಗ್ಗೆಯೂ ಮಾಹಿತಿ ನೀಡಲಾಗಿದೆ. ಉಷ್ಣಾಂಶದಲ್ಲಿ ಏರುಪೇರಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ವಿವಿಧ ನಗರಗಳ ತಾಪಮಾನ:
ಬೆಂಗಳೂರು: 28-19
ದಾವಣಗೆರೆ: 28-21
ಚಿತ್ರದುರ್ಗ: 28-21
ಹಾವೇರಿ: 28-21
ಬಳ್ಳಾರಿ: 32-23
ಗದಗ: 29-21
ಕೊಪ್ಪಳ: 31-22
ರಾಯಚೂರು: 32-23
ಯಾದಗಿರಿ: 32-23
ವಿಜಯಪುರ: 30-22
ಬೀದರ್: 28-21
ಕಲಬುರಗಿ: 31-22
ಬಾಗಲಕೋಟೆ: 30-22
ಮಂಗಳೂರು: 28-24
ಶಿವಮೊಗ್ಗ: 27-21
ಬೆಳಗಾವಿ: 26-21
ಮೈಸೂರು: 8-21
ಮಂಡ್ಯ: 29-21
ಕೊಡಗು: 22-17
ರಾಮನಗರ: 28-21
ಹಾಸನ: 26-19
ಚಾಮರಾಜನಗರ: 29-21
ಚಿಕ್ಕಬಳ್ಳಾಪುರ: 27-19
ಕೋಲಾರ: 30-21
ತುಮಕೂರು: 28-20
ಉಡುಪಿ: 28-24
ಚಿಕ್ಕಮಗಳೂರು: 24-18 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ.