ನಿರ್ವಹಣಾ & ಉತ್ಪಾದನಾ ವೆಚ್ಚ ಹೆಚ್ಚಳವಾದ ಹಿನ್ನೆಲೆ ಅಮೂಲ್ ಹಾಗೂ ಮದರ್ ಡೈರಿ ಹಾಲಿನ ದರ ಪ್ರತೀ ಲೀಟರ್ ಗೆ ₹2 ಏರಿಕೆಯಾಗಿದ್ದು, ಈ ಕುರಿತು ಅಧಿಕೃತ ಆದೇಶ ಹೊರಡಿಸಲಾಗಿದ್ದು ಇಂದಿನಿಂದಲೇ ಹಾಲಿನ ಬೆಲೆ ಹೆಚ್ಚಾಗಲಿದೆ.
ಈ ಪರಿಷ್ಕೃತ ದರವು ದೆಹಲಿ, ಎನ್‌ಸಿಆರ್, ಗುಜರಾತ್, ಪಶ್ಚಿಮ ಬಂಗಾಳ ಹಾಗೂ ಮುಂಬೈ ಸೇರಿ ಸರಬರಾಜಾಗುತ್ತಿರುವ ಎಲ್ಲಾ ಮಾರುಕಟ್ಟೆಗಳಲ್ಲಿ ಇಂದಿನಿಂದಲೇ ಅನ್ವಯವಾಗಲಿದೆ ಎಂದು ಸ್ಪಷ್ಟಪಡಿಸಿದ್ದು, ಅರ್ಧ ಲೀಟರ್ ಅಮೂಲ್ ಗೋಲ್ಡ್ ಬೆಲೆಯು 500 MLಗೆ ₹31, ಅಮೂಲ್ ತಾಜಾ 500 mlಗೆ ₹25 ಮತ್ತು ಅಮೂಲ್ ಶಕ್ತಿ ₹28ಗೆ ಮಾರಾಟ ಆಗಲಿದ್ದು, ಪ್ರತಿ ಲೀ.ಗೆ ರೂ 2 ಹೆಚ್ಚಳವಾಗಿದ್ದು, MRPಯಲ್ಲಿ ಶೇ.4ರಷ್ಟು ಹೆಚ್ಚಳವಾಗಿದೆ.
ಮದರ್ ಡೈರಿ ಹಾಲಿನ ದರ ಏರಿಕೆ:
ಅಮುಲ್ ಜೊತೆಗೆ ಮದರ್ ಡೈರಿ ಕೂಡ ಹಾಲಿನ ದರವನ್ನು ಹೆಚ್ಚಿಸಿದ್ದು, ಇದರಿಂದ ಫುಲ್ ಕ್ರೀಮ್ ಹಾಲಿನ ದರ ಲೀಟರ್ ಗೆ ರೂ.59ರಿಂದ ರೂ.61ಕ್ಕೆ ಏರಿಕೆಯಾಗಲಿದೆ. ಅಲ್ಲದೆ ಟೋನ್ಡ್ ಹಾಲಿನ ದರ 51 ರೂ.ಗೆ ಏರಿಕೆಯಾಗಲಿದ್ದು, ಡಬಲ್ ಟೋನ್ಡ್ ಹಾಲಿನ ದರ ಲೀಟರ್ ಗೆ 45 ರೂ. ಹಸುವಿನ ಹಾಲಿನ ದರ ಲೀಟರ್ ಗೆ 53 ರೂ.ಗೆ ಏರಿಕೆಯಾಗಿದ್ದು, ಟೋಕನ್ ಹಾಲಿನ ದರ ಲೀಟರ್ ಗೆ ರೂ.46ರಿಂದ ರೂ.48ಕ್ಕೆ ಏರಿಕೆಯಾಗಲಿದೆ. ಮದರ್ ಡೈರಿ ಸಂಸ್ಥೆಯು ಇನ್‌ಪುಟ್ ವೆಚ್ಚದಲ್ಲಿ ಹೆಚ್ಚಳದಿಂದ ಬೆಲೆಯನ್ನು ಹೆಚ್ಚಿಸಿದೆ ಎಂದು ತಿಳಿಸಿದೆ.
ಮದರ್ ಡೈರಿ ದೆಹಲಿ-ಎನ್‌ಸಿಆರ್ ಮಾರುಕಟ್ಟೆಯಲ್ಲಿ ಪ್ರಮುಖ ಹಾಲು ಪೂರೈಕೆದಾರರಲ್ಲಿ ಒಂದಾಗಿದ್ದು, ದಿನಕ್ಕೆ 30 ಲಕ್ಷ ಲೀಟರ್‌ಗೂ ಹೆಚ್ಚು ಹಾಲು ಮಾರಾಟವಾಗುತ್ತಿದೆ. ಮಾರ್ಚ್ ನಲ್ಲೂ ಮದರ್ ಡೈರಿ ಹಾಲಿನ ದರವನ್ನು ಲೀಟರ್ ಗೆ 2 ರೂ ಹೆಚ್ಚಳ ಮಾಡಿತ್ತು.
.