ದೇಶದ ಅತಿದೊಡ್ಡ ಸಾಲದಾತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 2 ಕೋಟಿ ರೂಗಿಂತ ಕಡಿಮೆ ಸ್ಥಿರ ಠೇವಣಿಗಳ (FD) ಮೇಲಿನ ಬಡ್ಡಿದರಗಳನ್ನ ಹೆಚ್ಚಿಸಲಾಗಿದ್ದು, ಆಗಸ್ಟ್ 13 ರಿಂದಲೇ ಪರಿಷ್ಕೃತ ದರಗಳು ಅನ್ವಯವಾಗಲಿವೆ ಎಂದು ಎಸ್‌ಬಿಐ ಬ್ಯಾಂಕ್ ತನ್ನ ವೆಬ್ಸೈಟ್ನಲ್ಲಿ ತಿಳಿಸಿದೆ.
ಹೌದು, 180 ದಿನಗಳಿಂದ 210 ದಿನಗಳಲ್ಲಿ ಪಕ್ವವಾಗುವ ನಿಶ್ಚಿತ ಠೇವಣಿಗೆ ಇನ್ನು 4.55% ಬಡ್ಡಿ ದರವನ್ನು ನೀಡಲಾಗುವುದು ಎಂದು ತಿಳಿಸಿದೆ. ಇದು ಈ ಹಿಂದೆ 4.40% ರಷ್ಟಿತ್ತು. ಇನ್ನು 2 ರಿಂದ 3 ವರ್ಷದೊಳಗಿನ ಕಡಿಮೆ ಅವಧಿಯ ನಿಶ್ಚಿತ ಠೇವಣಿಗಳ ಮೇಲಿನ ಬಡ್ಡಿ ದರವನ್ನೂ 5.35% ರಿಂದ 5.50% ಕ್ಕೆ ಹೆಚ್ಚಿಸಿದೆ.
ಪ್ರಸ್ತುತ 7 ದಿನಗಳಿಂದ 10 ವರ್ಷಗಳವರೆಗೆ ಪಕ್ವತೆಯೊಂದಿಗೆ ನಿಶ್ಚಿತ ಠೇವಣಿಗಳನ್ನು ಒದಗಿಸುತ್ತಿದೆ, ಸಾಮಾನ್ಯ ಜನರಿಗೆ 2.90% ರಿಂದ 5.65% ವರೆಗೆ ಬಡ್ಡಿದರಗಳನ್ನ ನೀಡುತ್ತಿದೆ ಎಂದು ಎಸ್‌ಬಿಐ ಬ್ಯಾಂಕ್ ತನ್ನ ವೆಬ್ಸೈಟ್ನಲ್ಲಿ ತಿಳಿಸಿದೆ.




