ಮನೆ ಕಟ್ಟುವವರಿಗೆ ಕೇಂದ್ರದಿಂದ ಭರ್ಜರಿ ಗುಡ್‌ನ್ಯೂಸ್..!

ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರದ ಪಿಎಂ ಆವಾಸ್ ಯೋಜನೆಯಡಿಯಲ್ಲಿ (ಪಿಎಂಎವೈ-ಯು) ಬಡವರ್ಗದವರಿಗೆ ಸೂರು ನೀಡುವ ಯೋಜನೆಯನ್ನು 2 ವರ್ಷಗಳ ಕಾಲ ಮುಂದುವರೆಸಿದ್ದು, ಈ ಯೋಜನೆಯಡಿ ಬಡ ಹಾಗೂ ದುರ್ಬಲ ವರ್ಗಗಳಿಗೆ…

ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರದ ಪಿಎಂ ಆವಾಸ್ ಯೋಜನೆಯಡಿಯಲ್ಲಿ (ಪಿಎಂಎವೈ-ಯು) ಬಡವರ್ಗದವರಿಗೆ ಸೂರು ನೀಡುವ ಯೋಜನೆಯನ್ನು 2 ವರ್ಷಗಳ ಕಾಲ ಮುಂದುವರೆಸಿದ್ದು, ಈ ಯೋಜನೆಯಡಿ ಬಡ ಹಾಗೂ ದುರ್ಬಲ ವರ್ಗಗಳಿಗೆ ಸ್ವಂತ ಮನೆಯನನ್ನು ನೀಡುವ ಹಾಗೂ ಮನೆ ಹೊಂದಿರದವರಿಗೆ ಆರ್ಥಿಕ ಸಹಾಯ ಮಾಡುವ ಚಿಂತನೆ ನಡೆಸಿದೆ.

ಪ್ರಸ್ತುತ ಯೋಜನೆಯಲ್ಲಿ 122 ಲಕ್ಷ ಮನೆಗಳನ್ನು ಅನುಮೋದಿಸಲಾಗಿದ್ದು, 65 ಮನೆ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಈ ಮನೆಗಳು ನೀರಿನ ಸಂಪರ್ಕ, ಶೌಚಾಲಯ, ವಿದ್ಯುತ್ ಸೇರಿ ಅನೇಕ ಮೂಲಭೂತ ಸೌಲಭ್ಯ ಹೊಂದಿರುತ್ತದೆ.

PM ಆವಾಸ್ ಯೋಜನೆಯ ಲಾಭ ಸಿಗದಿದ್ದರೆ ದೂರು ನೀಡಿ:

Vijayaprabha Mobile App free

ನಗರ ಮತ್ತು ಗ್ರಾಮೀಣ ಪ್ರದೇಶದ ಬಡವರು ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಲಾಭ ಪಡೆಯಬಹುದಾಗಿದ್ದು, ಈ ಬಗ್ಗೆ ನೀವು ಯಾವುದೇ ರೀತಿಯ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಸಹಾಯವಾಣಿ ಸಂಖ್ಯೆಯನ್ನು ಸಂಪರ್ಕಿಸುವ ಮೂಲಕ ನಿಮ್ಮ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದು.

ಸಹಾಯವಾಣಿ ಸಂಖ್ಯೆ ಈ ಕೆಳಗಿನಂತಿದ್ದು, 011-23060484, 011-23063285, 011-23061827, 011-23063620, 011-23063567 ಯೋಜನೆಯ ಫಲಾನುಭವಿಗಳಿಂದ ದೂರುಗಳು ಬಂದ ಹಿನ್ನಲೆಯಲ್ಲಿ ಸರ್ಕಾರ ಈ ಸಹಾಯವಾಣಿಯನ್ನು ಆರಂಭಿಸಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.