ರಾಜ್ಯದ ಕರಾವಳಿ, ಮಲೆನಾಡಿನಲ್ಲಿ ಇಂದು, ನಾಳೆ ಭಾರಿ ಮಳೆ; ಈ ಜಿಲ್ಲೆಗಳಿಗೆ ಆರೆಂಜ್ ,ಯೆಲ್ಲೋ ಅಲರ್ಟ್ ಘೋಷಣೆ

rain vijayaprabha news rain vijayaprabha news

ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದು ಮತ್ತು ನಾಳೆ ಗುಡುಗು ಸಹಿತ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಕರಾವಳಿ ಜಿಲ್ಲೆಗಳಿಗೆ ಆರೆಂಜ್ ಮತ್ತು ಒಳನಾಡು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದೆ.

ಕರಾವಳಿಯ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಹಾಗೂ ಮಲೆನಾಡಿನ ಕೊಡಗು, ಚಿಕ್ಕಮಗಳೂರು ಸೇರಿ 5 ಜಿಲ್ಲೆಗಳಲ್ಲಿ ಇಂದು, ನಾಳೆ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಗಾಳಿಯು ಗಂಟೆಗೆ 65 ಕಿ.ಮೀ. ವೇಗದಲ್ಲಿ ಬೀಸಲಿದ್ದು, ಸಮುದ್ರಕ್ಕೆ ಯಾರೂ ಇಳಿಯಬಾರದೆಂದು ಹವಾಮಾನ ಇಲಾಖೆ ಎಚ್ಚರಿಸಿದೆ.

ಅಷ್ಟೇ ಅಲ್ಲ, ರಾಜ್ಯದ ಬಹುತೇಕ ಕಡೆಗಳಲ್ಲಿ ಮಳೆಯಾಗಿದ್ದು, ಕೊಲ್ಲೂರು, ಭಾಗಮಂಡಲ ತಲಾ 16 ಸೆ.ಮೀ ಮಳೆಯಾಗಿದ್ದು, ಕಮ್ಮರಡಿ, ಕ್ಯಾಸಲ್ ರಾಕ್, ಸಿದ್ದಾಪುರ , ಉಡುಪಿ, ಮೂರ್ನಾಡು, ತಲಾ 11 ಸೆ.ಮಿ ನಿಲ್ಕುಂದ್ , ಜಿಕೋಟ , ಮಂಗಳೂರು ವಿಮಾನ ನಿಲ್ದಾಣ, ಸೋಮವಾರಪೇಟೆ ತಲಾ 10 ಸೆ.ಮಿ.ದಾಖಲಾಗಿದೆ. ರಾಜ್ಯದಲ್ಲಿ ಮಳೆಯ ಅಬ್ಬರ ಜೋರಾಗಿದ್ದು ಇನ್ನು ಮೂರು ದಿನಗಳಕಾಲ ಹೆಚ್ಚಾಗಿ ಮಳೆ ಬೀಳುವ ಸಾದ್ಯತೆ ಇದೆ ಎಂದು ಹವಾಮಾನ ಇಲಾಖೆ ಮೂನ್ಸೂಚನೆ ನೀಡಿದೆ.

Advertisement

ಇನ್ನು, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಮಂಡ್ಯ, ರಾಮನಗರ ಸೇರಿದಂತೆ ಹಲವೆಡೆ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಈಗಾಗಲೇ ಜಿಲ್ಲೆಗಳಲ್ಲಿ ಭಾರಿ ಮಳೆ ಮುಂದುವರೆದಿದ್ದು, ಜನರು ಸಂಕಸ್ಟಕ್ಕೆ ಸಿಲುಕಿದ್ದಾರೆ. ಉಳಿದೆಡೆ ಸಾಧಾರಣ ಮಳೆಯಾಗಬಹುದೆಂದು ನಿರೀಕ್ಷಿಸಲಾಗಿದ್ದು, ರಾಜ್ಯಾದಂತ ಚಳಿಯ ವಾತಾವರಣ ಉಂಟಾಗಿದ್ದು, ಮುಂದಿನ 4-5 ದಿನ ವಾತಾವರಣ ತಂಪಾಗಿ ಇರಲಿದೆ ಎನ್ನಲಾಗಿದೆ.

ವಿವಿಧ ಜಿಲ್ಲೆಗಳ ತಾಪಮಾನ:

ಬೆಂಗಳೂರು: 27-20
ದಾವಣಗೆರೆ: 28-22
ಚಿತ್ರದುರ್ಗ: 28-21
ಹಾವೇರಿ: 29-22
ಬಳ್ಳಾರಿ: 30-23
ಗದಗ: 29-22
ಕೊಪ್ಪಳ: 29-22
ಮಂಗಳೂರು: 28-24
ಶಿವಮೊಗ್ಗ: 27-21
ಬೆಳಗಾವಿ: 27-21
ಮೈಸೂರು: 27-21
ಮಂಡ್ಯ: 28-21
ಕೊಡಗು: 22-18
ರಾಮನಗರ: 29-24
ಹಾಸನ: 26-19
ಚಾಮರಾಜನಗರ: 27-21
ಚಿಕ್ಕಬಳ್ಳಾಪುರ: 26-18
ಕೋಲಾರ: 28-21
ತುಮಕೂರು: 27-20
ಉಡುಪಿ: 28-24
ಕಾರವಾರ: 29-25
ಚಿಕ್ಕಮಗಳೂರು: 24-29
ರಾಯಚೂರು: 31-24
ಯಾದಗಿರಿ: 31-24
ವಿಜಯಪುರ: 30-22
ಬೀದರ್: 28-22
ಕಲಬುರಗಿ: 29-23
ಬಾಗಲಕೋಟೆ: 31-22 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.
Add a comment

Leave a Reply

Your email address will not be published. Required fields are marked *

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement