ಅಮೆರಿಕದ ಪ್ರಸಿದ್ಧ ನಟಿ ಜೆನ್ನಿಫರ್ ಕೂಲಿಡ್ಜ್ ಸಂದರ್ಶನವೊಂದರಲ್ಲಿ 200 ಜನರೊಂದಿಗೆ ಮಲಗಿದ್ದನ್ನು ಒಪ್ಪಿಕೊಂಡಿದ್ದು, ಹಾಲಿವುಡ್ ಚಿತ್ರರಂಗದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಹೌದು, 1999ರಲ್ಲಿ ಬಿಡುಗಡೆಯಾಗಿದ್ದ ‘ಅಮೆರಿಕನ್ ಪೈ’ ಚಿತ್ರದಲ್ಲಿನ ನೆಗೆಟಿವ್ ಪಾತ್ರದಿಂದಾಗಿ ನಟಿ ಜೆನ್ನಿಫರ್ ಕೂಲಿಡ್ಜ್ ಸಿಕ್ಕಾಪಟ್ಟೆ ಫೇಮಸ್ ಆಗಿದ್ದರು. ‘ಆ ಚಿತ್ರದ ಬಳಿಕ 200 ಜನರ ಜೊತೆ ಮಲಗಿದ್ದೇನೆ. ‘ಅಮೆರಿಕನ್ ಪೈ’ ಚಿತ್ರದಿಂದ ನನಗೆ ಖ್ಯಾತಿಗಿಂತ ಆತ್ಮತೃಪ್ತಿ ಸಿಕ್ಕಿದೆ’ ಎಂದು ಈ ನಟಿ ಸಂದರ್ಶನವೊಂದರಲ್ಲಿ ಹೇಳಿರುವುದು ಹಾಲಿವುಡ್‌ನಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ನಟಿ ಜೆನ್ನಿಫರ್ ಕೂಲಿಡ್ಜ್ ಅವರು ಅಮೆರಿಕನ್ ಪೈ, ಎ ಬಕೆಟ್ ಆಫ್ ಬ್ಲಡ್, ಪ್ಲಂಪ್ ಫಿಕ್ಷನ್ ಮತ್ತು ಎ ನೈಟ್ ಅಟ್ ದಿ ರಾಕ್ಸ್‌ಬರಿ ಸೇರಿದಂತೆ ಹಲವು ಚಿತ್ರಗಲ್ಲಿ ನಟಿಸಿದ್ದು, ಸ್ಯಾಟರ್ಡೇ ನೈಟ್ ಷೋ, ಕಿಂಗ್ ಆಫ್ ದಿ ಹಿಲ್, ದಿ ವಾಚರ್ ಟೆಲಿವಿಶನ್ ಶೋಗಳನ್ನು ನಡೆಸಿಕೊಟ್ಟಿದ್ದಾರೆ