ನಾಳೆ ಹೊಸಪೇಟೆಯ ಸಂಕ್ಲಾಪುರ ವಿದ್ಯುತ್ ವಿತರಣಾ ಕೇಂದ್ರದ ವಿವಿಧೆಡೆ ವಿದ್ಯುತ್ ವ್ಯತ್ಯಯ

ಹೊಸಪೇಟೆ(ವಿಜಯನಗರ)ಆ.03: ಹೊಸಪೇಟೆಯ 110/11 ಕೆವಿ ಸಂಕ್ಲಾಪುರ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಕರೆಂಟ್ ಟ್ರಾನ್ಸ್‍ಪಾರ್ಮರ್ ಬದಲಾವಣೆ ಮತ್ತು Overhauling of Bank-1 ಹಾಗೂ ಇತರೆ ದುರಸ್ತಿ ಕಾರ್ಯವನ್ನು ಆ.04ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 2ರವರೆಗೆ ಹಮ್ಮಿಕೊಂಡಿರುವ…

power cut vijayaprabha news

ಹೊಸಪೇಟೆ(ವಿಜಯನಗರ)ಆ.03: ಹೊಸಪೇಟೆಯ 110/11 ಕೆವಿ ಸಂಕ್ಲಾಪುರ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಕರೆಂಟ್ ಟ್ರಾನ್ಸ್‍ಪಾರ್ಮರ್ ಬದಲಾವಣೆ ಮತ್ತು Overhauling of Bank-1 ಹಾಗೂ ಇತರೆ ದುರಸ್ತಿ ಕಾರ್ಯವನ್ನು ಆ.04ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 2ರವರೆಗೆ ಹಮ್ಮಿಕೊಂಡಿರುವ ಹಿನ್ನಲೆಯಲ್ಲಿ ವಿವಿಧೆಡೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಜೆಸ್ಕಾಂನ ಕಾರ್ಯ ಮತ್ತು ಪಾಲನೆ ನಗರ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್(ವಿ) ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

110/11 ಕೆವಿ ಸಂಕ್ಲಾಪುರ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಲ್ಲಾ 11ಕೆವಿ ಫೀಡರ್‍ಗಳಾದ ಎಂ.ಪ್ರಕಾಶ್‍ನಗರ, ಸಂಕ್ಲಾಪುರ, ಎನ್.ಸಿ.ಕಾಲೋನಿ, ಬಸವನದುರ್ಗಾ(NJY), ಬಿ.ವಿ.ಗೇರೆ(IP), ಮತ್ತು ಜೆಎಸ್‍ಡಬ್ಲ್ಯೂ ಫೀಡರ್‍ನ ವ್ಯಾಪ್ತಿಗೆ ಒಳಪಡುವ ಸುತ್ತಮುತ್ತಲಿನ ಪ್ರದೇಶಗಳಾದ ಬಳ್ಳಾರಿ ರೋಡ್, ಕೊಂಡನಾಯಕನ ಹಳ್ಳಿ, ಅನಂತಶಯನಗುಡಿ, ಸಂಕ್ಲಾಪುರ ಇಂಡಸ್ಟ್ರಿಯಲ್ ಏರಿಯಾ, ಕರ್ನಾಟಕ ಆಯಿಲ್ ಫ್ಯಾಕ್ಟರಿ ಏರಿಯಾ, ಕಾರಿಗನೂರ, ಸಂಕ್ಲಾಪುರ, ಸಾಯಿಬಾಬಾ ಗುಡಿ ಏರಿಯಾ, ಡ್ಯಾಮ್ ರೋಡ್, ಟಿ.ಬಿ ಡ್ಯಾಮ್, ಎನ್.ಸಿ ಕಾಲೋನಿ, ಗಾಂಧಿಕಾಲೋನಿ, ಗೋಕುಲನಗರ, ನಿಶಾನಿ ಕ್ಯಾಂಪ್, ಬಿ.ವಿ ಗೆರೆ & ಬಸವನದುರ್ಗವ್ಯಾಪ್ತಿಯಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲ್ಲಿದ್ದು ಸಾರ್ವಜನಿಕರು/ಗ್ರಾಹಕರು ಸಹಕರಿಸಬೇಕು ಎಂದು ಅವರು ಕೋರಿದ್ದಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.