ಇಂದು ದಾವಣಗೆರೆಯಲ್ಲಿ ಸಿದ್ದು ಅಮೃತ ಮಹೋತ್ಸವ: ಸಿದ್ದು ಬರ್ತ್‌ ಡೇಗೆ ರಾಜ್ಯದೆಲ್ಲೆಡೆಯಿಂದ 35000 ವಾಹನಗಳು, 8 ಲಕ್ಷ ಜನ ಆಗಮನ..!

ದಾವಣಗೆರೆ: ದಾವಣಗೆರೆಯ ಶಾಮನೂರು ಪ್ಯಾಲೇಸ್ ಮೈದಾನದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರ 75ನೇ ಹುಟ್ಟುಹಬ್ಬದ ಅದ್ದೂರಿ ಅಮೃತ ಮಹೋತ್ಸವ ಕಾರ್ಯಕ್ರಮ ಇಂದು ನಡೆಯಲಿದೆ. ದಾವಣಗೆರೆಯಲ್ಲಿ ನಡೆಯುವ ಈ ಕಾರ್ಯಕ್ರಮವನ್ನು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ…

Siddharamaiah-Amrita-mahotsava-vijayaprabha-news

ದಾವಣಗೆರೆ: ದಾವಣಗೆರೆಯ ಶಾಮನೂರು ಪ್ಯಾಲೇಸ್ ಮೈದಾನದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರ 75ನೇ ಹುಟ್ಟುಹಬ್ಬದ ಅದ್ದೂರಿ ಅಮೃತ ಮಹೋತ್ಸವ ಕಾರ್ಯಕ್ರಮ ಇಂದು ನಡೆಯಲಿದೆ.

ದಾವಣಗೆರೆಯಲ್ಲಿ ನಡೆಯುವ ಈ ಕಾರ್ಯಕ್ರಮವನ್ನು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಉದ್ಘಾಟನೆ ಮಾಡಲಿದ್ದಾರೆ. ರಾಜ್ಯ ಕಾಂಗ್ರೆಸ್‌ನ ಎಲ್ಲಾ ನಾಯಕರು ಇದರಲ್ಲಿ ಭಾಗವಹಿಸಲಿದ್ದು, ಸುಮಾರು 6 ರಿಂದ 8 ಲಕ್ಷ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಅಮೃತ ಮಹೋತ್ಸವದ ಮೂಲಕ ಸಿದ್ದರಾಮಯ್ಯ ಸಿಎಂ ಅಭ್ಯರ್ಥಿ ಎಂದು ಅಧಿಕೃತವಾಗಿ ಬಿಂಬಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ.

ಸಿದ್ದು ಬರ್ತ್‌ ಡೇ ಸ್ಪೆಷಲ್‌:

Vijayaprabha Mobile App free

★ 08 ಲಕ್ಷ- ರಾಜ್ಯದ ವಿವಿಧ ಜಿಲ್ಲೆಗಳಿಂದ ಕಾರ್ಯಕ್ರಮಕ್ಕೆ ಆಗಮಿಸುವವರು

★ 06 ಲಕ್ಷ: ಮೈಸೂರು ಪಾಕ್‌ ತಯಾರಿ

★ 04 ಲಕ್ಷ: ಆಸನಗಳ ವ್ಯವಸ್ಥೆ

★ 35000- ದಾವಣಗೆರೆಗೆ ಆಗಮಿಸಲಿರುವ ಅಂದಾಜು ವಾಹನಗಳು

★ 8000- ಅಭಿಮಾನಿಗಳನ್ನು ಕರೆತರುವ ಬಸ್‌ಗಳ ಸಂಖ್ಯೆ

★ 400: ಕೌಂಟರ್‌ಗಳಲ್ಲಿ ಬಫೆ ಊಟಕ್ಕೆ ವ್ಯವಸ್ಥೆ

★ 2500- ಬಾಣಸಿಗರಿಂದ ಮೊಸರನ್ನು-ಪಲಾವ್‌ ತಯಾರಿ

★ 300- ವೇದಿಕೆ ಆವರಣದಲ್ಲಿರುವ ಸ್ವಯಂ ಸೇವಕರು

ಇಷ್ಟೇ ಅಲ್ಲ, 5 ಲಕ್ಷ ಮಂದಿಗೆ ಪಲಾವ್, ಮೊಸರನ್ನ ಹಾಗೂ ಸಿಹಿ ತಿಂಡಿಯ ಭೋಜನ ವ್ಯವಸ್ಥೆ, 6 ಲಕ್ಷ ಮಂದಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದ್ದು, ಮಳೆ ಬಂದರೆ ಸಮಸ್ಯೆ ಆಗದಂತೆ ಪೆಂಡಾಲ್ ವ್ಯವಸ್ಥೆ ಕೂಡ ಮಾಡಲಾಗಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.