ಟೆಲಿಕಾಂ ದೈತ್ಯ ರಿಲಯನ್ಸ್ ಜಿಯೋ ಇದೀಗ 100ಜಿಬಿ ಉಚಿತ ಡೇಟಾ ನೀಡಲಿದ್ದು, HP ಲ್ಯಾಪ್‌ಟಾಪ್ ಖರೀದಿಸುವ ಗ್ರಾಹಕರಿಗೆ ಈ ಆಫರ್ ನೀಡಿದೆ. Jio ಹಾಗೂ HP ಸಂಸ್ಥೆ ಟೈಅಪ್ ಮಾಡಿಕೊಂಡಿದ್ದು, ನೂತನವಾಗಿ ಅನಾವರಣಗೊಂಡ ‘ಜಿಯೋ ಹೆಚ್‌ಪಿ ಸ್ಮಾರ್ಟ್ ಲ್ಯಾಪ್‌ಟಾಪ್’ ಖರೀದಿಸುವವರಿಗೆ ಫ್ರೀ ಡೇಟಾ ಜೊತೆ ಹಲವು ಆಫರ್ ನೀಡಿವೆ.
ಈ ಲ್ಯಾಪ್‌ಟಾಪ್ HP14ef1003tu ಹಾಗೂ HP141002tu ಮಾಡೆಲ್‌ಗಳಲ್ಲಿ ಗ್ರಾಹಕರಿಗೆ ಸಿಗುತ್ತಿದ್ದು, ಇದರ ಬೆಲೆ ಇದರ ಬೆಲೆ 44,999 ಆಗಿದೆ.
15 ರೂ.ಗೆ ಬಂಪರ್ ಡೇಟಾ ಪ್ಲಾನ್..!
ಇನ್ನು, ಜಿಯೋ ಟೆಲಿಕಾಂ ಜನರಿಗೆ ಹೊಸ ಡೇಟಾ ಪ್ಲಾನ್ ಪರಿಚಯಿಸಿದ್ದು, ದಿನಕ್ಕೆ 1ಜಿಬಿ, 2ಜಿಬಿ ಸಾಕಾಗುವುದಿಲ್ಲ ಎನ್ನುವವರಿಗೆ ಈ ಪ್ಲಾನ್ ಸೂಕ್ತವಾಗಿದೆ. ಜಿಯೋ 4ಜಿ ಡೇಟಾ ಆಡ್-ಆನ್ ಯೋಜನೆಯಲ್ಲಿ ಹೆಚ್ಚುವರಿ ಡೇಟಾ ಪಡೆಯಬಹುದು, ಅದು ಕೇವಲ 15ರೂ.ಗೆ. ನಿಮ್ಮ ದೈನಂದಿನ ಡೇಟಾ ಮುಗಿದ ಬಳಿಕ ಈ ಡೇಟಾ ಬಳಸಬಹುದು.
ಹೌದು, 15 ರೂ.ಗೆ 1GB 4ಜಿ ಡೇಟಾ, 25ರೂ.ಗೆ 2ಜಿಬಿ, 61ರೂ.ಗೆ 6ಜಿಬಿ ಹಾಗೂ 121ರೂ. ವೋಚರ್‌ಗೆ 12ಜಿಬಿ ಡೇಟಾ ಪಡೆಯಬಹುದಾಗಿದ್ದು,ಈ ಯೋಜನೆಗಳು ಅನ್‌ಲಿಮಿಟೆಡ್ ಯೋಜನೆ ಹೊಂದಿರುವವರಿಗೆ ಮಾತ್ರ ಅನ್ವಯ.