ಇಂದು 23ನೇ ಕಾರ್ಗಿಲ್‌ ವಿಜಯ ದಿನ; ಕನ್ನಡಿಗನಿಂದಲೇ ‘ಕಾರ್ಗಿಲ್’ ವಿಜಯದ ಮೊದಲ ಹೆಜ್ಜೆ

ಪಾಕ್ ವಿರುದ್ಧ 1999ರಲ್ಲಿ ನಡೆದ ‘ಆಪರೇಷನ್ ವಿಜಯ್’ ಗೆಲುವಿನ ನೆನಪಿಗಾಗಿ ಪ್ರತಿವರ್ಷ ಜುಲೈ 26 ರಂದು ‘ಕಾರ್ಗಿಲ್‌ ವಿಜಯ ದಿವಸ’ ಎಂದು ಆಚರಿಸಲಾಗುತ್ತದೆ. ಭಾರತೀಯ ಸೇನೆ ಈ ಯುದ್ಧ ಜಯಿಸಿ, 23 ವರ್ಷ ಕಳೆದಿದ್ದು,60…

ಪಾಕ್ ವಿರುದ್ಧ 1999ರಲ್ಲಿ ನಡೆದ ‘ಆಪರೇಷನ್ ವಿಜಯ್’ ಗೆಲುವಿನ ನೆನಪಿಗಾಗಿ ಪ್ರತಿವರ್ಷ ಜುಲೈ 26 ರಂದು ‘ಕಾರ್ಗಿಲ್‌ ವಿಜಯ ದಿವಸ’ ಎಂದು ಆಚರಿಸಲಾಗುತ್ತದೆ.

ಭಾರತೀಯ ಸೇನೆ ಈ ಯುದ್ಧ ಜಯಿಸಿ, 23 ವರ್ಷ ಕಳೆದಿದ್ದು,60 ದಿನ ನಡೆದ ಯುದ್ಧದಲ್ಲಿ ಪಾಕ್‌ ಆಕ್ರಮಿಸಿದ್ದ ಎಲ್ಲ ಪೋಸ್ಟ್‌ ನಮ್ಮ ಸೇನೆ ವಶಕ್ಕೆ ಪಡೆದಿತ್ತು.ಈ ಯುದ್ಧದಲ್ಲಿ 527 ಯೋಧರು ಹುತಾತ್ಮರಾಗಿದ್ದರು.

ಇನ್ನು, ಅಪ್ರತಿಮ ಸಾಹಸ ತೋರಿದ್ದಕ್ಕಾಗಿ ವಿಕ್ರಂ ಬಾತ್ರಾ, ಮನೋಜ್ ಪಾಂಡೆ, ಯೋಗೇಂದ್ರ ಯಾದವ್ ಮತ್ತು ಸಂಜಯ್ ಕುಮಾರ್ ಅವರಿಗೆ ಪರಮವೀರ ಚಕ್ರ ನೀಡಿ ಗೌರವಿಸಲಾಗಿತ್ತು.

Vijayaprabha Mobile App free

ಕನ್ನಡಿಗನಿಂದಲೇ ‘ಕಾರ್ಗಿಲ್’ ವಿಜಯದ ಮೊದಲ ಹೆಜ್ಜೆ:

ಇನ್ನು, ಕಾರ್ಗಿಲ್ ಯುದ್ಧದಲ್ಲಿ ಕನ್ನಡಿಗರ ಸಾಹಸ ಮರೆಯಲು ಕೂಡ ಅಸಾಧ್ಯ. ಇವರಲ್ಲಿ ಕರ್ನಲ್‌ ಎಂ.ಬಿ. ರವೀಂದ್ರನಾಥ್‌, ನವೀನ್ ನಾಗಪ್ಪ ಪ್ರಮುಖರು.

2ನೇ ರಜಪುತಾನಾ ರೈಫಲ್ಸ್‌ನ ನೇತೃತ್ವ ವಹಿಸಿದ್ದ ರವೀಂದ್ರನಾಥ್‌, ಶತ್ರುಗಳನ್ನು ಹಿಮ್ಮೆಟ್ಟಿಸಿ, ಟೋಲೋಲಿಂಗ್‌ ಬೆಟ್ಟದ ತುದಿಯಲ್ಲಿದ್ದೇವೆ ಎಂಬ ಸಂದೇಶ ಜೂನ್ 13ರಂದು ರವಾನಿಸಿದ್ದು, ಅದು ಯುದ್ಧದ ಮೊದಲ ಗೆಲುವು.

ಅಷ್ಟೇ ಅಲ್ಲ, ಕಾಲಬುಡದಲ್ಲೇ ಗ್ರೆನೇಡ್ ಸಿಡಿದು ಪೆಟ್ಟಾಗಿದ್ದರೂ ಕನ್ನಡಿಗ ನವೀನ್, ಪುನಃ ರೈಫಲ್ ಎತ್ತಿಕೊಂಡು ಶತ್ರುಗಳ ವಿರುದ್ಧ ಫೈರಿಂಗ್ ಮಾಡಿ ಶತ್ರುಗಳನ್ನು ಸದೆಬಡಿದಿದ್ದರು.

ವೀರಯೋಧರ ನೆನಪು:

ನನ್ನ ರಕ್ತವನ್ನು ‘ಸಾಬೀತುಪಡಿಸುವ ಮೊದಲು ಸಾವು ಸಂಭವಿಸಿದರೆ, ನಾನು ಆ ಸಾವನ್ನು ಕೊಲ್ಲುತ್ತೇನೆ ಎಂದು ಪ್ರತಿಜ್ಞೆ ಮಾಡುತ್ತೇನೆ’ – ಲೆಫ್ಟಿನೆಂಟ್ ಮನೋಜ್ ಕುಮಾರ್ ಪಾಂಡೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.