2100ರ ವೇಳೆಗೆ 41 ಕೋಟಿಗೆ ಭಾರತದ ಜನಸಂಖ್ಯೆ..!

ಚೀನಾ ಬಳಿಕ ಜಗತ್ತಿನಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರೋ ರಾಷ್ಟ್ರ ಎಂದರೆ ಅದು ಭಾರತ. ಆದರೆ, 2100 ವೇಳೆಗೆ ಅಂದ್ರೆ ಇನ್ನು 78 ವರ್ಷಗಳ ಬಳಿಕ ಭಾರತದ ಚಿತ್ರಣ ಸಂಪೂರ್ಣ ಬದಲಾಗಲಿದ್ದು, ಸಮೀಕ್ಷೆಯೊಂದರ ಪ್ರಕಾರ…

Population-data-vijayaprabha-news

ಚೀನಾ ಬಳಿಕ ಜಗತ್ತಿನಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರೋ ರಾಷ್ಟ್ರ ಎಂದರೆ ಅದು ಭಾರತ. ಆದರೆ, 2100 ವೇಳೆಗೆ ಅಂದ್ರೆ ಇನ್ನು 78 ವರ್ಷಗಳ ಬಳಿಕ ಭಾರತದ ಚಿತ್ರಣ ಸಂಪೂರ್ಣ ಬದಲಾಗಲಿದ್ದು, ಸಮೀಕ್ಷೆಯೊಂದರ ಪ್ರಕಾರ 2100 ವೇಳೆಗೆ ಭಾರತದ ಜನಸಂಖ್ಯೆ 41 ಕೋಟಿಗೆ ಇಳಿಕೆಯಾಗಲಿದೆಯಂತೆ.

ಈಗ ಸದ್ಯಕ್ಕೆ ವಿಶ್ವದ ಎರಡನೇ ಅತಿ ಹೆಚ್ಚು ಜನಸಂಖ್ಯೆ ಇರುವ ರಾಷ್ಟ್ರ ಭಾರತ. ಭಾರತದಲ್ಲಿನ ಜನಸಂಖ್ಯೆಯನ್ನು ಆಧರಿಸಿ ಅಮೆರಿಕದ ಸ್ಟ್ಯಾನ್‌ಫೋರ್ಡ್‌ ವಿಶ್ವವಿದ್ಯಾಲಯ ಅಚ್ಚರಿಯ ಅಂಕಿ- ಅಂಶಗಳನ್ನು ಬಹಿರಂಗಪಡಿಸಿದೆ. ಸುಮಾರು 78 ವರ್ಷಗಳ ನಂತರ 41 ಕೋಟಿ ಜನಸಂಖ್ಯೆ ಕಡಿಮೆಯಾಗಲಿದ್ದು, ನೂರು ಕೋಟಿಗೆ ತಲುಪಲಿದೆ ಎಂದು ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

ಜನಸಂಖ್ಯೆಯ ಬೆಳವಣಿಗೆ ಋಣಾತ್ಮಕವಾದಾಗ ಜ್ಞಾನ ಮತ್ತು ಜೀವನಮಟ್ಟ ಕೂಡ ನಿಶ್ಚಲವಾಗಿರುತ್ತದೆ, ಅದು ಕ್ರಮೇಣ ಕಣ್ಮರೆಯಾಗುತ್ತದೆ ಎಂಬುದು ಸ್ಟ್ಯಾನ್‌ಫೋರ್ಡ್ ಅಧ್ಯಯನದಲ್ಲಿ ಬಹಿರಂಗವಾಗಿದ್ದು, ಭಾರತ ಮಾತ್ರವಲ್ಲದೇ ಬಹುತೇಕ ರಾಷ್ಟ್ರಗಳ ಜನಸಂಖ್ಯೆಯಲ್ಲಿ ಕುಸಿತ ಕಾಣುತ್ತಿರುವುದನ್ನು ಸ್ಟ್ಯಾನ್‌ಫೋರ್ಡ್‌ ವಿವಿ ಬಹಿರಂಗಪಡಿಸಿದೆ.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.